ಅಕ್ರಮ ವಲಸಿಗರಿಗೆ ಸಹಾಯ ಮಾಡಲು ಭಾರತ 'ಧರ್ಮಶಾಲೆ' ಅಲ್ಲ: ಬಿಜೆಪಿ ನಾಯಕ

ತನ್ನ ಖರ್ಚಿನಲ್ಲಿ ಅಕ್ರಮ ವಲಸಿಗರಿಗೆ ಸಹಾಯ ಮಾಡಲು ಭಾರತ ಧರ್ಮಶಾಲೆಯಲ್ಲ ಎಂದು ತೆಲಂಗಾಣ ಬಿಜೆಪಿ ಎಂಎಲ್ ಸಿ ಎನ್ ರಾಮಚಂದ್ರ ರಾವ್ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೈದರಾಬಾದ್: ತನ್ನ ಖರ್ಚಿನಲ್ಲಿ ಅಕ್ರಮ ವಲಸಿಗರಿಗೆ ಸಹಾಯ ಮಾಡಲು ಭಾರತ ಧರ್ಮಶಾಲೆಯಲ್ಲ ಎಂದು ತೆಲಂಗಾಣ ಬಿಜೆಪಿ ಎಂಎಲ್ ಸಿ ಎನ್ ರಾಮಚಂದ್ರ ರಾವ್ ಹೇಳಿದ್ದಾರೆ.

ಹೈದರಾಬಾದ್‌ನಲ್ಲಿ ಅಕ್ರಮ ರೋಹಿಂಗ್ಯಾಗಳ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಅಖಿಲ ಭಾರತ ಮಜ್ಲಿಸ್-ಎ-ಇಟ್ಟೇಹದುಲ್ ಮುಸ್ಲೀಮೀನ್ (ಎಐಐಎಂ) ಮುಖ್ಯಸ್ಥ ಅಸಾದುದ್ದೀನ್ ಒವೈಸಿ ನಡುವೆ ಮಾತಿನ ಚಕಮಕಿ ನಡೆದ ಒಂದು ದಿನದ ನಂತರ ರಾಮಚಂದ್ರರಾವ್ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಹೈದರಾಬಾದ್ ನಗರದಲ್ಲಿ ರೋಹಿಂಗ್ಯಾಗಳಿಗೆ ಎಐಎಂಐಎಂ ಆಶ್ರಯ ನೀಡುತ್ತಿದೆ ಎಂದು ರಾಮಚಂದ್ರ ರಾವ್ ಆರೋಪಿಸಿದ್ದಾರೆ. ಗೃಹ ಸಚಿವ ಅಮಿತ್ ಶಾ ಅವರು ಹೈದರಾಬಾದ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಹೈದರಾಬಾದ್‌ನಲ್ಲಿ ವಾಸಿಸುತ್ತಿದ್ದ ರೋಹಿಂಗ್ಯಾಗಳನ್ನು ಸ್ಥಳಾಂತರಿಸಲಾಗುವುದು ಎಂದು ಹೇಳಿದರು. ಇದಕ್ಕೆ ಹೈದರಾಬಾದ್‌ನಲ್ಲಿ ಅಕ್ರಮ ರೋಹಿಂಗ್ಯಾ ವಲಸಿಗರು ಇದ್ದರೆ ಕ್ರಮ ಕೈಗೊಳ್ಳುವಂತೆ ಎಐಎಂಐಎಂ ಅಧ್ಯಕ್ಷ ಅಸದುದ್ದೀನ್ ಒವೈಸಿ ಅಮಿತ್ ಶಾ ಅವರಿಗೆ ಸವಾಲು ಹಾಕಿದ್ದಾರೆ.

ನಗರದಲ್ಲಿ ರೋಹಿಂಗ್ಯಾಗಳಿದ್ದು, ಅವರಿಗೆ ಎಐಎಂಐಎಂ ಜನರು ಆಶ್ರಯ ನೀಡುತ್ತಿದ್ದಾರೆ. ಅವರಿಗೆ ಆಶ್ರಯ ಪಡೆಯಲು ಸಹಾಯ ಮಾಡುವುದಲ್ಲದೆ, ಟಿಆರ್ಎಸ್ ಸರ್ಕಾರದೊಂದಿಗೆ ಎಐಐಎಂಐಎಂ ಅವರಿಗೆ ಆಧಾರ್ ಕಾರ್ಡ್‌ಗಳನ್ನು ನೀಡಿದೆ ಮತ್ತು ಅವರ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ದಾಖಲಿಸಲಾಗಿದೆ ಎಂದು ರಾವ್ ಆರೋಪಿಸಿದ್ದಾರೆ. ಭಾರತವು ಧರ್ಮಶಾಲೆಯಲ್ಲ,  ಇತರ ದೇಶಗಳ ಜನರು ಜೀವನಕ್ಕಾಗಿ ಇಲ್ಲಿಗೆ ಬರುತ್ತಾರೆ. ಮತ್ತು  ನಮ್ಮ ಸ್ವಂತ ಜನರ ವೆಚ್ಚದಲ್ಲಿ ಅವರು ನಮ್ಮ ದೇಶದಲ್ಲಿ ನಮಮ್ಮ ಜನರ
ಜೊಜೆ ಕೆಟ್ಟದಾಗಿ ವರ್ತಿಸುತ್ತಾರೆ ಎಂದು ದೂರಿದ್ದಾರೆ.

ಅಕ್ರಮ ವಲಸಿಗರನ್ನು ದೇಶದಿಂದ ತೆಗೆದುಹಾಕಲು ಬಿಜೆಪಿ ಬದ್ಧವಾಗಿದೆ. ಅಕ್ರಮ ವಲಸಿಗರನ್ನು ತಮ್ಮ ದೇಶಗಳಿಗೆ ವಾಪಸ್ ಕಳುಹಿಸತ್ತೇವೆ" ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com