‘ಜೀವನ ಪರ್ಯಂತ ಸೇವೆ’ ಬಿಎಸ್‌ಎಫ್ ಧ್ಯೇಯವಾಕ್ಯ: ಕೇಂದ್ರ ಗೃಹ ಸಚಿವ ಅಮಿತ್ ಶಾ

ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗಡಿ ಭದ್ರತಾ ಪಡೆಯ 56ನೇ ಸಂಸ್ಥಾಪನಾ ದಿನದಂದು ಶುಭಾಶಯ ಕೋರಿದ್ದಾರೆ.
ಅಮಿತ್ ಶಾ
ಅಮಿತ್ ಶಾ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗಡಿ ಭದ್ರತಾ ಪಡೆಯ 56ನೇ ಸಂಸ್ಥಾಪನಾ ದಿನದಂದು ಶುಭಾಶಯ ಕೋರಿದ್ದಾರೆ.

ಭಾರತವು ತನ್ನ ವಿಜಯಶಾಲಿ ಪ್ರಧಾನ ಗಡಿ ಕಾವಲು ಪಡೆ ಬಗ್ಗೆ ಹೆಮ್ಮೆಪಡುತ್ತಿದೆ. ಇಂದು ಬಿಎಸ್ ಎಫ್ ನ 56 ನೇ ಸಂಸ್ಥಾಪನಾ ದಿನದಂದು ಸೈನ್ಯದ ಎಲ್ಲಾ ಧೈರ್ಯಶಾಲಿ ಸೈನಿಕರಿಗೆ ಅವರ ಸೇವೆ ಮತ್ತು ರಾಷ್ಟ್ರಕ್ಕಾಗಿ ಸಮರ್ಪಣೆಗಾಗಿ ವಂದಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ತನ್ನ ವಿಜಯಶಾಲಿ 'ಬಾರ್ಡರ್ ಸೆಕ್ಯುರಿಟಿ ಫೋರ್ಸ್' ಬಗ್ಗೆ ಭಾರತ ಹೆಮ್ಮೆಪಡುತ್ತಿದೆ,  ಜೀವನ ಪರ್ಯಂತ ಸೇವೆಯು ಬಿಎಸ್ ಎಫ್ ನ ಧ್ಯೇಯವಾಕ್ಯವಾಗಿದ್ದು, ಅದನ್ನು ಉತ್ತಮವಾಗಿ ನಿರ್ವಹಿಸುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಿಎಸ್ಎಫ್ ಸಂಸ್ಥಾಪನಾ ದಿನದಂದು, ಗೃಹ ವ್ಯವಹಾರಗಳ ಸಚಿವ ನಿತ್ಯಾನಂದ್ ರಾಯ್, ಪಡೆಯನ್ನು ಅಭಿನಂದಿಸುತ್ತಾ, ರಾಷ್ಟ್ರವು ಅವರ ಅದಮ್ಯ ಶೌರ್ಯದ ಬಗ್ಗೆ ಹೆಮ್ಮೆಪಡುತ್ತದೆ ಎಂದು ಹೇಳಿದ್ದಾರೆ.

ಭಾರತ-ಪಾಕಿಸ್ತಾನದ ನಡುವಿನ 1965ರ ಯುದ್ಧದ ನಂತರ, 01ಡಿಸೆಂಬರ್ 1965 ರಂದು ಭಾರತೀಯ ಸಂಸತ್ತಿನ ಕಾಯಿದೆಯ ಪ್ರಕಾರ 'ಭಾರತದ ಮೊದಲ ರಕ್ಷಣಾ ಮಾರ್ಗ' ಬಿಎಸ್ಎಫ್ ಅನ್ನು ಅಧಿಕೃತವಾಗಿ ಸ್ಥಾಪನೆಯಾಯಿತು.

ಪ್ರಸ್ತುತ ಬಿಎಸ್ ಎಫ್ ವಿಶ್ವದ ಅತಿದೊಡ್ಡ ಗಡಿ ಕಾವಲು ಪಡೆಯಾಗಿದೆ. ಈ ಗಡಿ ಕಾವಲು ಪಡೆಗೆ ಶಾಂತಿ ಸಮಯದಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದೊಂದಿಗಿನ ಭಾರತದ ಗಡಿಯನ್ನು ರಕ್ಷಿಸುತ್ತದೆ. ಮತ್ತು ಅದೇ ಸಮಯದಲ್ಲಿ ವಹಿವಾಟು ಅಪರಾಧಗಳನ್ನು ತಡೆಗಟ್ಟುವ ಕರ್ತವ್ಯವನ್ನು ವಹಿಸಲಾಗಿದೆ. ಇತರ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯಂತೆ, ಬಿಎಸ್ಎಫ್ ಕೇಂದ್ರ ಗೃಹ ಸಚಿವಾಲಯದ ನೇರ ನಿಯಂತ್ರಣದಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com