ವಿಡಿಯೊ ಕಾನ್ಫರೆನ್ಸ್ ವೇಳೆ ಶರ್ಟ್ ರಹಿತವಾಗಿ ಕಾಣಿಸಿಕೊಂಡ ವ್ಯಕ್ತಿ: ಸುಪ್ರೀಂ ಕೋರ್ಟ್ ಕೆಂಡಾಮಂಡಲ 

ವಿಚಾರಣೆ ವೇಳೆ ಶರ್ಟ್ ರಹಿತ ವ್ಯಕ್ತಿ ಕಾಣಿಸಿಕೊಂಡು ಸುಪ್ರೀಂ ಕೋರ್ಟ್ ಮಂಗಳವಾರ ಅಸಮಾಧಾನ ಹೊರಹಾಕಿದ ಘಟನೆ ನಡೆದಿದೆ. 

Published: 01st December 2020 01:47 PM  |   Last Updated: 01st December 2020 01:58 PM   |  A+A-


Supreme court

ಸುಪ್ರೀಂ ಕೋರ್ಟ್

Posted By : Sumana Upadhyaya
Source : PTI

ನವದೆಹಲಿ: ವಿಚಾರಣೆ ವೇಳೆ ಶರ್ಟ್ ರಹಿತ ವ್ಯಕ್ತಿ ಕಾಣಿಸಿಕೊಂಡು ಸುಪ್ರೀಂ ಕೋರ್ಟ್ ಮಂಗಳವಾರ ಅಸಮಾಧಾನ ಹೊರಹಾಕಿದ ಘಟನೆ ನಡೆದಿದೆ. 

ಕೋವಿಡ್-19 ಬಂದ ಮೇಲೆ ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಗಳು ವಿಚಾರಣೆ ನಡೆಸುತ್ತಿವೆ. ಈ ಸಂದರ್ಭದಲ್ಲಿ ವಕೀಲರು ಬೇಕಾಬಿಟ್ಟಿಯಾಗಿ ಕಾಣಿಸಿಕೊಳ್ಳುತ್ತಾರೆ ಎಂದು ನ್ಯಾಯಾಧೀಶರಾದ ಎಲ್ ನಾಗೇಶ್ವರ ರಾವ್ ಮತ್ತು ಹೇಮಂತ್ ಗುಪ್ತಾ ನೇತೃತ್ವದ ನ್ಯಾಯಪೀಠ ಸಿಟ್ಟು ಹೊರಹಾಕಿದೆ. 

ಹೀಗೆಲ್ಲಾ ಆಗಬಾರದು, ಇಂತಹ ನಡತೆಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ವಿಚಾರಣೆ ವೇಳೆ ಶರ್ಟ್ ರಹಿತ ವ್ಯಕ್ತಿ ವಿಡಿಯೊ ಕಾನ್ಫರೆನ್ಸ್ ನಲ್ಲಿ ಕಾಣಿಸಿಕೊಂಡದ್ದಕ್ಕೆ ನ್ಯಾಯಮೂರ್ತಿಗಳು ಛೀಮಾರಿ ಹಾಕಿದರು. 

ಸುಪ್ರೀಂ ಕೋರ್ಟ್ ವಿಡಿಯೊ ಕಾನ್ಫರೆನ್ಸ್ ವಿಚಾರಣೆ ವೇಳೆ ಇಂತಹ ಘಟನೆಗಳು ನಡೆಯುವುದು ಇದು ಮೊದಲಲ್ಲ.ಕಳೆದ ಅಕ್ಟೋಬರ್ 26ರಂದು, ಇಂತಹದ್ದೇ ಘಟನೆ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ನ್ಯಾಯಪೀಠದ ಎದುರು ನಡೆದಿತ್ತು. ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸುತ್ತಿದ್ದಾಗ ಅಡ್ವೊಕೇಟ್ ಒಬ್ಬರು ಶರ್ಟ್ ರಹಿತವಾಗಿ ಕಾಣಿಸಿಕೊಂಡಿದ್ದರು.

ಕಳೆದ ಜೂನ್ ನಲ್ಲಿ ವಕೀಲರೊಬ್ಬರು ಟಿ ಶರ್ಟ್ ಧರಿಸಿಕೊಂಡು ಬೆಡ್ ಮೇಲೆ ಮಲಗಿಕೊಂಡು ವಿಡಿಯೊ ಕಾನ್ಫರೆನ್ಸ್ ನಲ್ಲಿ ಭಾಗಿಯಾಗಿದ್ದರು. ನ್ಯಾಯಾಲಯದ ಕನಿಷ್ಠ ಶಿಷ್ಠಾಚಾರಗಳನ್ನು ಪಾಲಿಸಬೇಕು ಎಂದು ನ್ಯಾಯಮೂರ್ತಿಗಳು ಎಚ್ಚರಿಕೆ ನೀಡಿದ್ದರು. ಕಳೆದ ಏಪ್ರಿಲ್ ನಲ್ಲಿ ಕೂಡ ಇಂತಹದ್ದೇ ಘಟನೆ ನಡೆದಿತ್ತು. ವಕೀಲರೊಬ್ಬರು ಜಾಮೀನು ಅರ್ಜಿ ವಿಚಾರಣೆ ವೇಳೆ ಈ ರೀತಿ ಕಾಣಿಸಿಕೊಂಡಿದ್ದಕ್ಕೆ ರಾಜಸ್ತಾನ ಹೈಕೋರ್ಟ್ ನ  ಕೆಂಗಣ್ಣಿಗೆ ಗುರಿಯಾಗಿದ್ದರು.ವಿಚಾರಣೆ ವೇಳೆ ಸರಿಯಾದ ಯೂನಿಫಾರ್ಮ್ ನಲ್ಲಿ ಕಾಣಿಸಿಕೊಂಡದ್ದಕ್ಕೆ ಹೈಕೋರ್ಟ್ ಟೀಕಿಸಿತ್ತು.

ನಾನು ಕಠಿಣವಾಗಿ ಯಾರ ಜೊತೆ ವರ್ತಿಸಲೂ ಇಷ್ಟಪಡುವುದಿಲ್ಲ. ಆದರೆ ನೀವೆಲ್ಲರೂ ತೆರೆ ಮೇಲೆ ಕಾಣುತ್ತಿದ್ದೀರಿ. ಜಾಗ್ರತೆಯಿರಲಿ, ಕೋರ್ಟ್ ಕಲಾಪದ ವೇಳೆ ನ್ಯಾಯಾಧೀಶರು, ವಕೀಲರು ಶಿಷ್ಠಾಚಾರ ಪಾಲಿಸಬೇಕು ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು. 


Stay up to date on all the latest ರಾಷ್ಟ್ರೀಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp