ಉತ್ತರ ಪ್ರದೇಶ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿ, ಕೊಲೆಗೈದಿದ್ದ ಹಂತಕನಿಗೆ ಮರಣ ದಂಡನೆ ಶಿಕ್ಷೆ

ಎಂಟು ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದಿದ್ದ ಹಂತಕನಿಗೆ 20 ತಿಂಗಳ ವಿಚಾರಣೆ ಬಳಿಕ ಇಲ್ಲಿನ ಫಿರೋಜ್ ಬಾದ್ ಜಿಲ್ಲಾ ನ್ಯಾಯಾಲಯ ಪೋಸ್ಕೋ ಕಾಯ್ದೆಯಡಿ ಮರಣ ದಂಡನೆ ಶಿಕ್ಷೆ ವಿಧಿಸಿದೆ. 

Published: 01st December 2020 11:35 PM  |   Last Updated: 01st December 2020 11:35 PM   |  A+A-


Casual_Photos

ಸಾಂದರ್ಭಿಕ ಚಿತ್ರ

Posted By : Nagaraja AB
Source : The New Indian Express

ಲಖನೌ: ಎಂಟು ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದಿದ್ದ ಹಂತಕನಿಗೆ 20 ತಿಂಗಳ ವಿಚಾರಣೆ ಬಳಿಕ ಇಲ್ಲಿನ ಫಿರೋಜ್ ಬಾದ್ ಜಿಲ್ಲಾ ನ್ಯಾಯಾಲಯ ಪೋಸ್ಕೋ ಕಾಯ್ದೆಯಡಿ ಮರಣ ದಂಡನೆ ಶಿಕ್ಷೆ ವಿಧಿಸಿದೆ. 

ಫಿರೋಜ್ ಬಾದ್ ನ ಸಿರ್ಸಾಗಾಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಚಂದಾಪುರ್ ಗ್ರಾಮದಲ್ಲಿ ಕಳೆದ ವರ್ಷ ನಡೆದಿದ್ದ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿತ್ತು. 2019 ಮಾರ್ಚ್ 17 ರಂದು  ನೆರೆ ಮನೆಯವರ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ 8 ವರ್ಷದ ಬಾಲಕಿ ನಾಪತ್ತೆಯಾಗಿದ್ದಳು. 

ರಾತ್ರಿಯಾದರೂ ಆ ಬಾಲಕಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಪೋಷಕರು ಹುಡುಕಾಟ ನಡೆಸಿದಾಗ ರಾತ್ರಿ 10 ಗಂಟೆ ಸುಮಾರಿನಲ್ಲಿ ಶಿವ ಶಂಕರ್ ಜೊತೆಯಲ್ಲಿ ಆ ಬಾಲಕಿಯನ್ನು ಕೊನೆಯದ್ದಾಗಿ ನೋಡಿದ್ದಾಗಿ ಕೆಲವರು ಮಾಹಿತಿ ನೀಡಿದ್ದರು. ಮಾರನೇ ದಿನ ಕತ್ತು ಹಿಸುಕಿದ ರೀತಿಯಲ್ಲಿ ಗೋಧಿ ಹೊಲದಲ್ಲಿ ಬಾಲಕಿ ಮೃತದೇಹ ಪತ್ತೆಯಾಗಿತ್ತು.

ಈ ಮಧ್ಯೆ , ಆರೋಪಿ ಶಿವ ಶಂಕರ್ ಮತ್ತು ಆತನ ಪೋಷಕರು ಊರಿನಿಂದ ಪಲಾಯನ ಮಾಡಿದ್ದರು. ಇದರ ಆಧಾರದ ಮೇಲೆ ಬಾಲಕಿಯ ಪೋಷಕರು ದೂರು ದಾಖಲಿಸಲಾಗಿತ್ತು. ಪೋಕ್ಸೋ ಕಾಯ್ದೆ ಹಾಗೂ ಅತ್ಯಾಚಾರ, ಕೊಲೆಗೆ ಸಂಬಂಧಿಸಿದ ಐಪಿಸಿ ಸೆಕ್ಷನ್ ಗಳ ಅಡಿಯಲ್ಲಿ ಎಫ್ ಐಆರ್ ದಾಖಲಿಸಲಾಗಿತ್ತು. 10 ರೂ ಕೊಟ್ಟು ಬಾಲಕಿಯನ್ನು ಪುಸಲಾಯಿಸಿದ್ದ ಆರೋಪಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಅತ್ಯಾಚಾರ ನಡೆಸಿದ್ದ. ನಂತರ ಸಾಕ್ಷಿ ನಾಶಪಡಿಸಲು ಆಕೆಯನ್ನು ಕೊಲೆ ಮಾಡಿದ್ದ ಎಂದು ಮೂಲಗಳು ತಿಳಿಸಿವೆ.

ಆದಾಗ್ಯೂ, ತಲೆಮರೆಸಿಕೊಂಡಿದ್ದ ಆರೋಪಿಯನ್ನು ನಾಲ್ಕು ದಿನಗಳ ಕಾಲ ಶೋಧ ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು. ಮೇ 2019ರಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ್ದರು.

Stay up to date on all the latest ರಾಷ್ಟ್ರೀಯ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp