ಸುವೆಂದು ಅಧಿಕಾರಿ ಜೊತೆ ಸಭೆಯ ನಂತರ ಎಲ್ಲಾ ಸಮಸ್ಯೆಗಳು ಬಗೆಹರಿದಿವೆ: ಟಿಎಂಸಿ
ಪಶ್ಚಿಮ ಬಂಗಾಳ ಸರ್ಕಾರದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸುವೆಂದು ಅಧಿಕಾರಿ ಜೊತೆಗೆ ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಹಾಗೂ ಚುನಾವಣಾ ಕಾರ್ಯತಂತ್ರಜ್ಞ ಪ್ರಶಾಂತ್ ಕಿಶೋರ್, ಭೇಟಿ ನೀಡಿದ್ದು ಚರ್ಚೆ ನಡೆಸಿದ್ದಾರೆ.
Published: 02nd December 2020 11:17 AM | Last Updated: 02nd December 2020 12:43 PM | A+A A-

ಸುವೆಂದು ಅಧಿಕಾರಿ
ಕೋಲ್ಕತ್ತ: ಪಶ್ಚಿಮ ಬಂಗಾಳ ಸರ್ಕಾರದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸುವೆಂದು ಅಧಿಕಾರಿ ಜೊತೆಗೆ ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಹಾಗೂ ಚುನಾವಣಾ ಕಾರ್ಯತಂತ್ರಜ್ಞ ಪ್ರಶಾಂತ್ ಕಿಶೋರ್, ಭೇಟಿ ನೀಡಿದ್ದು ಚರ್ಚೆ ನಡೆಸಿದ್ದಾರೆ.
ಸತತ ಎರಡು ಗಂಟೆಗಳ ಕಾಲ ಸಭೆ ನಡೆದಿದ್ದು, ಹಿರಿಯ ನಾಯಕರಾದ ಸೌಗತ ರೋಯ್ ಹಾಗೂ ಸುದೀಪ್ ಬಂಡೋಪಾಧ್ಯಾಯ ಸಹ ಸಭೆಯಲ್ಲಿ ಭಾಗಿಯಾಗಿದ್ದರು.
"ಸಭೆ ಸೌಹಾರ್ದಯುತವಾಗಿ ನಡೆಯಿತು, ಪಕ್ಷದಲ್ಲಿನ ಎಲ್ಲಾ ಸಮಸ್ಯೆಗಳೂ ಬಗೆಹರಿದಿವೆ. ಪಕ್ಷ ಈಗ ಒಗ್ಗಟ್ಟಾಗಿದೆ ಎಂದು ಹೇಳಿದೆ.
ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಮುಖಾಮುಖಿ ಸಭೆ ನಡೆಸುವ ಆತ್ಯವಿತ್ತು, ಆದ್ದರಿಂದ ಈ ಸಭೆ ನಡೆಸಲಾಯಿತು ಎಂದು ರಾಯ್ ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ವಿರುದ್ಧ ಅಸಮಾಧಾನ ಹೊರಹಾಕಿದ್ದ ಸುವೆಂದು ಅಧಿಕಾರಿ, ಟಿಎಂಸಿ ತೊರೆಯುತ್ತಾರೆ ಎಂಬ ಬಗ್ಗೆಯೂ ಸಾಕಷ್ಟು ಊಹಾಪೋಹಗಳಿದ್ದವು