ಸೌರ ಇಸ್ತ್ರಿ ಕಾರ್ಟ್ ಆವಿಷ್ಕರಿಸಿದ ತಿರುವಣ್ಣಾಮಲೈ ಹುಡುಗಿಗೆ ಆನಂದ್ ಮಹೀಂದ್ರಾ ಅಭಿನಂದನೆ; ನೆರವಿನ ಭರವಸೆ

ಸೌರ ವಿದ್ಯುತ್ ಚಾಲಿತ ಇಸ್ತ್ರಿ ಕಾರ್ಟ್ ಅನ್ನು ಆವಿಷ್ಕರಿಸಿದ ಪ್ರತಿಷ್ಠಿತ ಮಕ್ಕಳ ಹವಾಮಾನ ಪ್ರಶಸ್ತಿ ಪಡೆದ ತಿರುವಣ್ಣಾಮಲೈನ 14 ವರ್ಷದ ಬಾಲಕಿಗೆ ಮಹೀಂದ್ರಾ ಮತ್ತು ಮಹೀಂದ್ರಾ ಅಧ್ಯಕ್ಷ ಆನಂದ್ ಮಹೀಂದ್ರಾ ಅಭಿನಂದಿಸಿದ್ದಾರೆ.
ವಿನಿಶಾ ಉಮಾಶಂಕರ್
ವಿನಿಶಾ ಉಮಾಶಂಕರ್

ಚೆನ್ನೈ: ಸೌರ ವಿದ್ಯುತ್ ಚಾಲಿತ ಇಸ್ತ್ರಿ ಕಾರ್ಟ್ ಅನ್ನು ಆವಿಷ್ಕರಿಸಿದ ಪ್ರತಿಷ್ಠಿತ ಮಕ್ಕಳ ಹವಾಮಾನ ಪ್ರಶಸ್ತಿ ಪಡೆದ ತಿರುವಣ್ಣಾಮಲೈನ 14 ವರ್ಷದ ಬಾಲಕಿಗೆ ಮಹೀಂದ್ರಾ ಮತ್ತು ಮಹೀಂದ್ರಾ ಅಧ್ಯಕ್ಷ ಆನಂದ್ ಮಹೀಂದ್ರಾ ಅಭಿನಂದಿಸಿದ್ದಾರೆ.

ಬಾಲಕಿ ವಿನಿಶಾ ಉಮಾಶಂಕರ್ ಅವರು ಆವಿಷ್ಕರಿಸಿದ ಸೌರ ಇಸ್ತ್ರಿ ಕಾರ್ಟ್ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿತ್ತು ಮತ್ತು ಈ ವರದಿ ವೈರಲ್ ಆಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿತ್ತು. 

ಮಂಗಳವಾರ ಸಂಜೆ ಆನಂದ್ ಮೈಹೀಂದ್ರಾ ಅವರು ವಿನಿಶಾ ಆವಿಷ್ಕರಿಸಿದ ಸೌರ ಇಸ್ತ್ರಿ ಕಾರ್ಟ್ ವಿಡಿಯೋವನ್ನು ಟ್ವೀಟರ್ ನಲ್ಲಿ ಶೇರ್ ಮಾಡಿ, ಅಭಿನಂದಿಸಿದ್ದಾರೆ. ಅಲ್ಲದೆ ಬಾಲಕಿಯ ಮುಂದಿನ ಯೋಜನೆಗಳಿಗೆ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

ವಿನಿಶಾ, ನಿಮ್ಮ ಯೋಜನೆ ಗಂಭೀರ ಪರಿಸರ ಸಮಸ್ಯೆಯನ್ನು ಪರಿಹರಿಸುತ್ತದೆ ಮತ್ತು ಸ್ವಯಂ ಉದ್ಯೋಗಿಗಳಿಗೆ ಸಹಾಯ ಮಾಡುತ್ತದೆ. ಇದು ಪರಿಸರ ಸ್ನೇಹಿಯಾಗಿರುವುದರ ಹೊರತಾಗಿ, ಮೊಬೈಲ್ ಕಾರ್ಟ್ ಆದಾಯದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಆದನಂದ್ ಮೈಹೀಂದ್ರಾ ಅವರು ಹೇಳಿದ್ದಾರೆ ಮತ್ತು ಮಹೀಂದ್ರಾ ರಿಸರ್ಚ್ ವ್ಯಾಲಿಯ ಉಪಾಧ್ಯಕ್ಷ ಆರ್ ವೇಲುಸ್ವಾಮಿ ಅವರನ್ನು ಟ್ಯಾಗ್ ಮಾಡಿ, ನಾವು ಅವಳ ಮುಂದಿನ ಎಲ್ಲಾ ಯೋಜನೆಗಳಿಗೆ ನೆರವು ನೀಡಬಹುದೆ? ಎಂದು ಕೇಳಿದ್ದಾರೆ.

ಆನಂದ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ವೇಲುಸ್ವಾಮಿ ಅವರು, "ಹೌದು ಆನಂದ್. ನಾವು ಖಂಡಿತವಾಗಿಯೂ ಮಾಡುತ್ತೇವೆ ಮತ್ತು ಅವಳನ್ನು ಸಂಪರ್ಕಿಸುತ್ತೇವೆ" ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com