ಬಂಗಾಳ ಕೊಲ್ಲಿಯಲ್ಲಿ 'ಬುರೆವಿ' ಚಂಡಮಾರುತ: ಡಿ.4ಕ್ಕೆ ದಕ್ಷಿಣ ತಮಿಳುನಾಡಿಗೆ ಅಪ್ಪಳಿಸುವ ಸಾಧ್ಯತೆ

ಕಳೆದ ವಾರ ನಿವಾರ ಚಂಡಮಾರುತದ ಹೊಡೆತಕ್ಕೆ ಸಿಲುಕಿ ನಲುಗಿರುವ ತಮಿಳುನಾಡಿನಲ್ಲಿ ಮತ್ತೊಂದು ಚಂಡಮಾರುತದ ಭೀತಿ ಎದುರಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚೆನ್ನೈ: ಕಳೆದ ವಾರ ನಿವಾರ್ ಚಂಡಮಾರುತದ ಹೊಡೆತಕ್ಕೆ ಸಿಲುಕಿ ನಲುಗಿರುವ ತಮಿಳುನಾಡಿನಲ್ಲಿ ಮತ್ತೊಂದು ಚಂಡಮಾರುತದ ಭೀತಿ ಎದುರಾಗಿದೆ.ನೈರುತ್ಯ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಬುರೆವಿ ಚಂಡ ಮಾರುತ ಶ್ರೀಲಂಕಾದ ತ್ರೀನ್ ಕೊಮಾಲಿಯಿಂದ 370 ಕಿಮೀ, ಪಂಬನ್ ನಿಂದ 600 ಕಿಮೀ ಮತ್ತು ಕನ್ಯಾಕುಮಾರಿಯಿಂದ 770 ಕಿಲೋ ಮೀಟರ್ ದೂರದಲ್ಲಿ ಕೇಂದ್ರಿಕೃತವಾಗಿದೆ.

ಮುಂದಿನ 12 ಗಂಟೆಗಳಲ್ಲಿ ಚಂಡಮಾರುತದ ವೇಗ ತೀವ್ರಗೊಳ್ಳುವ ಸಾಧ್ಯತೆಯಿದ್ದು, ಡಿಸೆಂಬರ್ 2 ರಂದು ರಾತ್ರಿ ಅಥವಾ ಸಂಜೆ ವೇಳೆಗೆ ಗಂಟೆಗೆ 75-85 ಗಂಟೆಯ ವೇಗದೊಂದಿಗೆ  ಶ್ರೀಲಂಕಾ ಕರಾವಳಿ ಪ್ರದೇಶ ತ್ರೀನ್ ಕೋಮಾಲಿ ದಾಟುವ ಸಾಧ್ಯತೆಯಿರುವುದಾಗಿ ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಡಿಸೆಂಬರ್ 3 ರಂದು ಬೆಳಗ್ಗೆ ಇದು ಮನ್ನಾರ್ ಕೊಲ್ಲಿ ಮತ್ತು ಕೊಮೊರಿನ್ ಪ್ರದೇಶದಲ್ಲಿ ಹೊರಹೊಮ್ಮಲಿದ್ದು, ಡಿಸೆಂಬರ್ 4 ರಂದು ಕನ್ಯಾಕುಮಾರಿ ಮತ್ತು ಪಂಬನ್ ನಡುವಣ ದಕ್ಷಿಣ ತಮಿಳುನಾಡು ಕರಾವಳಿ ಪ್ರದೇಶದತ್ತ ಚಲಿಸಲಿದೆ ಎಂದು ಪ್ರಾದೇಶಿಕ ಹವಾಮಾನ ಇಲಾಖೆಯ ನಿರ್ದೇಶಕ ಎನ್. ಪೂವಿರಾಸನ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com