ಆಫ್ರಿಕಾದಲ್ಲಿ ಅತಿದೊಡ್ಡ ಹೂಡಿಕೆ ದೇಶವಾಗಲು ಭಾರತದ ಇಚ್ಛೆ: ದೂರ ಸಂಪರ್ಕ ಕಾರ್ಯದರ್ಶಿ

ತಮ್ಮ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಗಾಢವಾಗಿಸುವ ಹೆಜ್ಜೆಯ ಭಾಗವಾಗಿ ಭಾರತ, ಆಫ್ರಿಕಾ ದೇಶಗಳಲ್ಲಿ ಅತಿದೊಡ್ಡ ಹೂಡಿಕೆ ದೇಶವಾಗುವುದನ್ನು ಬಯಸಿದೆ. ಸದ್ಯ ಭಾರತ, ಆಫ್ರಿಕಾದಲ್ಲಿ ಐದನೇ ಅತಿದೊಡ್ಡ ಹೂಡಿಕೆದಾರರ ರಾಷ್ಟ್ರವಾಗಿದೆ.
ದೂರ ಸಂಪರ್ಕ ಕಾರ್ಯದರ್ಶಿ
ದೂರ ಸಂಪರ್ಕ ಕಾರ್ಯದರ್ಶಿ

ನವದೆಹಲಿ: ತಮ್ಮ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಗಾಢವಾಗಿಸುವ ಹೆಜ್ಜೆಯ ಭಾಗವಾಗಿ ಭಾರತ, ಆಫ್ರಿಕಾ ದೇಶಗಳಲ್ಲಿ ಅತಿದೊಡ್ಡ ಹೂಡಿಕೆ ದೇಶವಾಗುವುದನ್ನು ಬಯಸಿದೆ. ಸದ್ಯ ಭಾರತ, ಆಫ್ರಿಕಾದಲ್ಲಿ ಐದನೇ ಅತಿದೊಡ್ಡ ಹೂಡಿಕೆದಾರರ ರಾಷ್ಟ್ರವಾಗಿದೆ.

ಟಿಇಸಿಪಿ ಆಯೋಜಿಸಿದ್ದ ವರ್ಚುವಲ್ ಇಂಡಿಯಾ ಆಫ್ರಿಕಾ ಐಸಿಟಿ ಎಕ್ಸ್ ಪೋ-2020 ರಲ್ಲಿ ಮಾತನಾಡಿದ ದೂರಸಂಪರ್ಕ ಕಾರ್ಯದರ್ಶಿ ಅನ್ಸು ಪ್ರಕಾಶ್, ಸುರಕ್ಷಿತ ಐಸಿಟಿ ( ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ) ಉತ್ಪನ್ನಗಳನ್ನು ಆಫ್ರಿಕಾ ಎದುರು ನೋಡುತ್ತಿದ್ದರೆ ದಯವಿಟ್ಟು ಭಾರತವನ್ನು ಅವಲಂಬಿಸಬೇಕು. ಭಾರತೀಯ ವಾಣಿಜ್ಯ- ವಹಿವಾಟು ನಂಬಿಕೆ, ಬಲವಾದ ಸಂಬಂಧಗಳಲ್ಲಿ ವಿಶ್ವಾಸ ಇಟ್ಟಿದೆ. ಇದು ಭಾರತ ಮತ್ತು ಆಫ್ರಿಕಾಕ್ಕೆ ನೈಜ ಸತ್ಯವಾಗಿದೆ ಎಂದಿದ್ದಾರೆ.

ಭಾರತೀಯ ಕಂಪನಿಗಲು ಎಂಜಿನಿಯರಿಂಗ್ ಸಾಮರ್ಥ್ಯಗಳನ್ನು ಮತ್ತು ಸ್ಮಾರ್ಟ್ ಆವಿಷ್ಕಾರಗಳೊಂದಿಗೆ ತಮ್ಮ ಕಾರ್ಯಾನುಭವವನ್ನು ಅಭಿವೃದ್ಧಿಪಡಿಸಿವೆ. ಭಾರತೀಯ ಪ್ರತಿಭಾವಂತರು ನೌಕರರಿಗೆ ಮಾಪಕಗಳಲ್ಲಿ ತರಬೇತಿ ನೀಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಕಡಿಮೆ ವೆಚ್ಚದಲ್ಲಿ ನವೀನ ವ್ಯವಹಾರ ಮಾದರಿ ಮತ್ತು ಪರಿಹಾರಗಳನ್ನು ಒದಗಿಸುತ್ತಾರೆ. ಇದು ಆಫ್ರಿಕಾ ಐಸಿಟಿ ವಲಯನ್ನು ಬೆಂಬಲಿಸಲು ಮಾರ್ಗವಾಗಲಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com