ಶುಕ್ರವಾರ ಮುಂಜಾನೆ ತಮಿಳುನಾಡು ದಾಟಲಿರುವ ಬುರೆವಿ ಚಂಡಮಾರುತ 

ಪಂಬನ್ ಸಮೀಪದಲ್ಲಿರುವ ಬುರೆವಿ ಚಂಡಮಾರುತ ಗಂಟೆಗೆ 9 ಕಿಲೋ ಮೀಟರ್ ವೇಗದಲ್ಲಿ ಪಶ್ಚಿಮದತ್ತ ಚಲಿಸುತ್ತಿದ್ದು, ಪಂಬನ್‌ನಿಂದ ನೈರುತ್ಯಕ್ಕೆ 20 ಕಿ.ಮೀ ಮತ್ತು ಕನ್ಯಾಕುಮಾರಿಯ ಪೂರ್ವ-ಈಶಾನ್ಯಕ್ಕೆ 210 ಕಿ.ಮೀ ದೂರದಲ್ಲಿರುವ ರಾಮನಾಥಪುರಂ ಕರಾವಳಿಯ ಸಮೀಪದಲ್ಲಿದೆ.
ಎನ್ ಡಿಆರ್ ಎಫ್ ಸಿಬ್ಬಂದಿ
ಎನ್ ಡಿಆರ್ ಎಫ್ ಸಿಬ್ಬಂದಿ

ಚೆನ್ನೈ: ಪಂಬನ್ ಸಮೀಪದಲ್ಲಿರುವ ಬುರೆವಿ ಚಂಡಮಾರುತ ಗಂಟೆಗೆ 9 ಕಿಲೋ ಮೀಟರ್ ವೇಗದಲ್ಲಿ ಪಶ್ಚಿಮದತ್ತ ಚಲಿಸುತ್ತಿದ್ದು, ಪಂಬನ್‌ನಿಂದ ನೈರುತ್ಯಕ್ಕೆ 20 ಕಿ.ಮೀ ಮತ್ತು ಕನ್ಯಾಕುಮಾರಿಯ ಪೂರ್ವ-ಈಶಾನ್ಯಕ್ಕೆ 210 ಕಿ.ಮೀ ದೂರದಲ್ಲಿರುವ ರಾಮನಾಥಪುರಂ ಕರಾವಳಿಯ ಸಮೀಪದಲ್ಲಿದೆ.

ಗುರುವಾರ ರಾತ್ರಿ ಮತ್ತು ಶುಕ್ರವಾರ ಮುಂಜಾನೆ 50-60 ರಿಂದ 70 ಕಿಲೋ ಮೀಟರ್ ವೇಗದ ಗಾಳಿಯೊಂದಿಗೆ ರಾಮನಾಥಪುರಂ ಮತ್ತು ತುತುಕೂಡಿಯನ್ನು ದಾಟಲಿದೆ. ಇದು ಶುಕ್ರವಾರ ಮುಂಜಾನೆ ಮತ್ತಷ್ಟು ದುರ್ಬಲಗೊಳ್ಳುವ ಸಾಧ್ಯತೆಯಿದೆ ಎಂದು ಪ್ರಾದೇಶಿಕ ಹವಾಮಾನ ಕೇಂದ್ರದ  ಸೈಕ್ಲೋನ್ ವಾರ್ನಿಂಗ್ ಸೆಂಟರ್ ನಿರ್ದೇಶಕ ಎನ್. ಪುವಿಯಾರಸನ್ ಹೇಳಿದ್ದಾರೆ.

ರಾಮನಾಥಪುರಂ, ತುತುಕೂಡಿ, ತಿರುನೆಲ್ವೇಲಿ,ಕನ್ಯಾಕುಮಾರಿ, ತೆಂಕಸಿ, ವಿರುಧುನಗರ, ಮಧುರೈ, ಮತ್ತು ಶಿವಗಂಗೈ ಜಿಲ್ಲೆಗಳಲ್ಲಿ ಶನಿವಾರದವರೆಗೂ ಭಾರೀ ಮಳೆ ಮುಂದುವರೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com