ಕೇಂದ್ರ ಸರ್ಕಾರ, ರೈತರ ನಡುವಿನ ಮಾತುಕತೆಯಲ್ಲಿ ಬಗೆಹರಿಯದ ಸಮಸ್ಯೆ: ಡಿಸೆಂಬರ್ 5ಕ್ಕೆ ಮತ್ತೆ ಸಭೆ
ನೂತನ ಕೃಷಿ ಕಾನೂನುಗಳ ರದ್ದತಿಗೆ ರೈತ ಸಂಘಟನೆಗಳ ಮುಖಂಡರು ಪಟ್ಟು ಹಿಡಿದ್ದರಿಂದ ಸುಮಾರು 8 ಗಂಟೆಗಳ ಕಾಲ ರೈತ ಪ್ರತಿನಿಧಿಗಳು ಹಾಗೂ ಮೂವರು ಕೇಂದ್ರ ಸಚಿವರೊಂದಿಗೆ ಇಂದು ನಡೆದ ಸಭೆಯೂ ಕೂಡಾ ಸಮಸ್ಯೆ ಪರಿಹರಿಸುವಲ್ಲಿ ವಿಫಲವಾಗಿದೆ.
Published: 03rd December 2020 08:54 PM | Last Updated: 03rd December 2020 08:54 PM | A+A A-

ಪ್ರತಿಭಟನಾನಿರತ ರೈತರು
ನವದೆಹಲಿ: ನೂತನ ಕೃಷಿ ಕಾನೂನುಗಳ ರದ್ದತಿಗೆ ರೈತ ಸಂಘಟನೆಗಳ ಮುಖಂಡರು ಪಟ್ಟು ಹಿಡಿದ್ದರಿಂದ ಸುಮಾರು 8 ಗಂಟೆಗಳ ಕಾಲ ರೈತ ಪ್ರತಿನಿಧಿಗಳು ಹಾಗೂ ಮೂವರು ಕೇಂದ್ರ ಸಚಿವರೊಂದಿಗೆ ಇಂದು ನಡೆದ ಸಭೆಯೂ ಕೂಡಾ ಸಮಸ್ಯೆ ಪರಿಹರಿಸುವಲ್ಲಿ ವಿಫಲವಾಗಿದೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಡಿಸೆಂಬರ್ 5 ಶನಿವಾರ ಮಧ್ಯಾಹ್ನ 2 ಗಂಟೆಗೆ ಮತ್ತೆ ಸಭೆ ನಡೆಯಲಿದೆ ಎಂದು ತಿಳಿಸಿದರು.
ಸಮಯದ ಅಭಾವದಿಂದಾಗಿ ಅಂತಿಮ ನಿರ್ಧಾರ ಕೈಗೊಳ್ಳುವಲ್ಲಿ ಸಭೆ ವಿಫಲವಾದ ಕಾರಣ, ಶನಿವಾರ ಮತ್ತೆ ಸಭೆ ಸೇರಲಾಗುವುದು ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಸಭೆ ನಡೆದ ಸ್ಥಳದಿಂದ ಹೊರಬಂದ ಯೂನಿಯನ್ ಮುಖಂಡರು, ಮಾತುಕತೆ ವಿಫಲವಾಗಿದೆ. ಯಾವುದೇ ಪರಿಹಾರ ಸಿಗದಿದ್ದಲ್ಲಿ ಮುಂದಿನ ಸಭೆಯನ್ನು ಬಹಿಷ್ಕರಿಸಲಾಗುವುದು ಎಂದು ಕೆಲವರು ಎಚ್ಚರಿಕೆ ನೀಡಿದರು.
ಕನಿಷ್ಠ ಬೆಂಬಲ ಬೆಲೆ, ಖರೀದಿ ವ್ಯವಸ್ಥೆ ಸೇರಿದಂತೆ ಅನೇಕ ಪ್ರಸ್ತಾಪಗಳನ್ನು ಸರ್ಕಾರ ಮಾಡಿದೆ.ಅವುಗಳ ಬಗ್ಗೆ ಶುಕ್ರವಾರ ರೈತ ಸಂಘಟನೆಗಳೊಂದಿಗೆ ಚರ್ಚಿಸಲಾಗುವುದು ಎಂದು ರೈತ ಮುಖಂಡ ಕುಲ್ವಾಂತ್ ಸಿಂಗ್ ಸಂದು ಹೇಳಿದರು.
ಮೂರು ನೂತನ ಕಾನೂನುಗಳನ್ನು ರೈತರ ಹಿತದೃಷ್ಟಿಯಿಂದ ಜಾರಿಗೆ ತಂದಿರುವುದಾಗಿ ಸರ್ಕಾರ ವಿಸ್ತೃತವಾಗಿ ವಿವರಿಸಿದೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ನಾಲ್ಕನೇ ಸಭೆ ನಡೆಸುವ ಸರ್ಕಾರದ ಪ್ರಸ್ತಾಪನ್ನು ಯೂನಿಯನ್ ಮುಖಂಡರು ತಿರಸ್ಕರಿಸಿದ್ದಾರೆ.