ಶಬರಿಮಲೆಗೆ ಮಹಿಳೆಯರ ಪ್ರವೇಶ: ಹಿಂದಿನ ಸಂಪ್ರದಾಯಕ್ಕೆ ಮರಳಿದ ಕೇರಳ ಸರ್ಕಾರ, ಪೋರ್ಟಲ್ ನಲ್ಲಿ ಪ್ರಕಟ

ಸುಪ್ರೀಂ ಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಪೊಲೀಸರ ಭದ್ರತೆಯೊಂದಿಗೆ ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಇಬ್ಬರು ಮಹಿಳೆಯರಿಗೆ ಪ್ರವೇಶ ನೀಡಿದ ಎರಡು ವರ್ಷಗಳ ನಂತರ ಕೇರಳ ಸರ್ಕಾರ ಮತ್ತು ತಿರುವಂಕೂರು ದೇವಸ್ವಮ್ ಮಂಡಳಿ(ಟಿಡಿಬಿ) ಮಹಿಳೆಯರ ಪ್ರವೇಶದ ಕುರಿತು ತಮ್ಮ ನಿಲುವನ್ನು ಬದಲಾಯಿಸಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಚ್ಚಿ: ಸುಪ್ರೀಂ ಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಪೊಲೀಸರ ಭದ್ರತೆಯೊಂದಿಗೆ ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಇಬ್ಬರು ಮಹಿಳೆಯರಿಗೆ ಪ್ರವೇಶ ನೀಡಿದ ಎರಡು ವರ್ಷಗಳ ನಂತರ ಕೇರಳ ಸರ್ಕಾರ ಮತ್ತು ತಿರುವಂಕೂರು ದೇವಸ್ವಮ್ ಮಂಡಳಿ(ಟಿಡಿಬಿ) ಮಹಿಳೆಯರ ಪ್ರವೇಶದ ಕುರಿತು ತಮ್ಮ ನಿಲುವನ್ನು ಬದಲಾಯಿಸಿವೆ.

ಕೇರಳ ಸರ್ಕಾರದ ಜೊತೆ ಸೇರಿಕೊಂಡು ಟಿಡಿಪಿ ಆನ್ ಲೈನ್ ಸೇವೆಗೆ ಪೋರ್ಟಲ್ ನ್ನು ಆರಂಭಿಸಿದ್ದು, ದರ್ಶನಕ್ಕೆ ವರ್ಚುವಲ್ ಸಾಲು ಇರುವಂತೆ ಇದರಲ್ಲಿ ಕೂಡ 50 ವರ್ಷಕ್ಕಿಂತ ಕೆಳಗಿರುವ ಮಹಿಳೆಯರು ಮತ್ತು ತೃತೀಯ ಲಿಂಗಿಗಳು ಹಾಗೂ 65 ವರ್ಷಕ್ಕಿಂತ ಮೇಲ್ಪಟ್ಟವರನ್ನು ದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ನಮೂದಿಸಲಾಗಿದೆ.

ಕೇರಳ ಸರ್ಕಾರ ಈ ಹಿಂದೆ 10 ವರ್ಷಕ್ಕಿಂತ ಕೆಳಗಿರುವ ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟವರನ್ನು ಕೋವಿಡ್-19 ನಿರ್ಬಂಧ ಹಿನ್ನೆಲೆಯಲ್ಲಿ ಪ್ರವೇಶಕ್ಕೆ ಬಿಡುತ್ತಿರಲಿಲ್ಲ. ಕಳೆದ ಫೆಬ್ರವರಿಯಲ್ಲಿ ಐವರು ಸದಸ್ಯರನ್ನೊಳಗೊಂಡ ಸಮಿತಿ ಮುಂದೆ ವಾದ ಮಂಡಿಸಿದ್ದ ಟಿಡಿಪಿ ಜೈವಿಕ ನ್ಯೂನತೆಯಿಂದ ದೇವಾಲಯದೊಳಗೆ ಒಂದು ಲಿಂಗಕ್ಕೆ ಮಾತ್ರ ಪ್ರವೇಶ ನೀಡಲು ನಿರ್ಬಂಧ ವಿಧಿಸುವುದು ಸರಿಯಲ್ಲ ಎಂದು ಹೇಳಿತ್ತು.

ಮಹಿಳೆಯರಿಗೆ ದೇವಾಲಯದೊಳಗೆ ಪ್ರವೇಶವನ್ನು ವಿರೋಧಿಸಿ 2018ರ ಸೆಪ್ಟೆಂಬರ್ ನಲ್ಲಿ ಸಲ್ಲಿಸಲಾಗಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ಕೇರಳ ಸರ್ಕಾರ ಕೂಡ ವಿರೋಧಿಸಿತ್ತು. ಆದರೆ ಇದೀಗ ಹಿಂದಿನ ಯುಡಿಎಫ್ ಸರ್ಕಾರದ ನಿಲುವಿಗೆ ಬದ್ಧವಾದಂತೆ ಇಂದಿನ ಎಲ್ ಡಿಎಫ್ ಸರ್ಕಾರ ಸಾವಿರಾರು ವರ್ಷಗಳ ದೇವಾಲಯದ ಸಂಪ್ರದಾಯವನ್ನು ಕಾಪಾಡುವ ನಿಲುವಿಗೆ ಬಂದಂತೆ ಕಾಣುತ್ತಿದೆ. ಜನರಿಂದ ಸಾಕಷ್ಟು ವಿರೋಧ ಕೇಳಿಬಂದ ಹಿನ್ನೆಲೆಯಲ್ಲಿ ತನ್ನ ನಿಲುವಿನಲ್ಲಿ ಬದಲಾದಂತೆ ಕಾಣುತ್ತಿದೆ.

ನಿಲುವಿನ ಬದಲಾವಣೆ ಬಗ್ಗೆ ಕೇಳಿದಾಗ ಟಿಡಿಪಿ ಮುಖ್ಯಸ್ಥ ಎನ್ ವಾಸು, ಪೊಲೀಸ್ ಇಲಾಖೆ ಈ ಪೋರ್ಟಲ್ ನ್ನು ನಿರ್ವಹಿಸುತ್ತದೆ. ನಮಗೆ ಈ ಮಾರ್ಗಸೂಚಿಯಲ್ಲಿ ಯಾವುದೇ ಅಧಿಕಾರವಿಲ್ಲ ಮತ್ತು ನಾವು ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದರು.
ಆದರೆ ಮಾರ್ಗಸೂಚಿ ಇದೀಗ ಕಾರ್ಯಕರ್ತರನ್ನು ಕೆರಳಿಸಿದೆ. ಸುಧಾರಣಾ ಮೌಲ್ಯಗಳನ್ನು ಸಮಾಜದಲ್ಲಿ ಮೊಳೆಕೆಯೊಡೆಯುವಂತೆ ಮಾಡುವ ಬದಲು ಗೊಡ್ಡು ಸಂಪ್ರದಾಯವನ್ನು ಪಾಲಿಸುವಲ್ಲಿ ಎಡಪಂಥೀಯ ಸರ್ಕಾರ ಬಲಪಂಥೀಯ ಯುಡಿಎಫ್ ಸರ್ಕಾರಕ್ಕಿಂತ ಮುಂದಿದೆ ಎಂಬುದನ್ನು ತೋರಿಸಿಕೊಟ್ಟಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com