ಕ್ಲಾಸ್ ರೂಮ್ ನಲ್ಲೇ ಮದುವೆಯಾದ ಅಪ್ರಾಪ್ತ ಜೋಡಿ! ಟಿಸಿ ಕೊಟ್ಟು ಕಳಿಸಿದ ಪ್ರಾಂಶುಪಾಲರು!
ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆ ರಾಜಮಂಡ್ರಿ ಸರ್ಕಾರಿ ಜೂನಿಯರ್ ಕಾಲೇಜಿನ ಕ್ಲಾಸ್ ರೂಮ್ ನಲ್ಲೇ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳು ಮದುವೆಯಾಗಿದ್ದಾರೆ.
Published: 03rd December 2020 12:49 PM | Last Updated: 03rd December 2020 02:49 PM | A+A A-

ಕ್ಲಾಸ್ ರೂಮ್ ನಲ್ಲೇ ವಿವಾಹವಾದ ಜೋಡಿ
ಪೂರ್ವ ಗೋದಾವರಿ(ಆಂಧ್ರಪ್ರದೇಶ): ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆ ರಾಜಮಂಡ್ರಿ ಸರ್ಕಾರಿ ಜೂನಿಯರ್ ಕಾಲೇಜಿನ ಕ್ಲಾಸ್ ರೂಮ್ ನಲ್ಲೇ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳು ಮದುವೆಯಾಗಿದ್ದಾರೆ.
ಕಳೆದ ತಿಂಗಳು 17 ರಂದು ಈ ವಿವಾಹ ನಡೆದಿತ್ತು.
ಅಪ್ರಾಪ್ತ ವಿದ್ಯಾರ್ಥಿಗಳು ವಿವಾಹವಾಗಿರುವ ದೃಶ್ಯ ಸಾಮಾಜಿಕ ತಾಣಾದಲ್ಲಿ ವೈರಲ್ ಆಗಿದೆ.
ಕಾಲೇಜು ಪ್ರಾಂಶುಪಾಲರಿಗೆ ಈ ವಿಷಯ ತಿಳಿದಾಗ ಇಬ್ಬರಿಗೂ ಟಿಸಿ ನೀಡಿ ಮನೆಗೆ ಕಳಿಸಿದ್ದಾರೆ.
ಇತ್ತ ಈ ವಿವಾಹವಾಗಿರುವ ವಿಷಯ ವೈರಲ್ ಆಗುತ್ತಿದ್ದಂತೆ ವಿದ್ಯಾರ್ಥಿಗಳ ಪೋಷಕರಿಗೆ ಸಹ ಆಘಾತವಾಗಿದೆ. ವಿವಾಹವು ವಿನೋದಕ್ಕಾಗಿ ನಡೆದಿದೆಯೆ ಅಥವಾ ನಿಜ ಉದ್ದೇಶದಿಂದ ನಡೆಯಿತೆ ಎನ್ನುವುದು ಇನ್ನೂ ಪ್ರಶ್ನಾರ್ಹವಾಗಿದೆ.