ಗೋವಾ ಆಪ್ ನಾಯಕ ಎಲ್ವಿಸ್ ಗೋಮ್ಸ್ ಎಎಪಿಗೆ ರಾಜೀನಾಮೆ

ಎಎಪಿ ಮಾಜಿ ಗೋವಾ ಸಂಚಾಲಕ ಎಲ್ವಿಸ್ ಗೋಮ್ಸ್ ಅವರು ಶುಕ್ರವಾರ ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಎಲ್ವಿಸ್ ಗೋಮ್ಸ್
ಎಲ್ವಿಸ್ ಗೋಮ್ಸ್

ಪಣಜಿ: ಎಎಪಿ ಮಾಜಿ ಗೋವಾ ಸಂಚಾಲಕ ಎಲ್ವಿಸ್ ಗೋಮ್ಸ್ ಅವರು ಶುಕ್ರವಾರ ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಗೋಮ್ಸ್, ಪಕ್ಷದ ರಾಜ್ಯ ಘಟಕದ ವ್ಯವಹಾರಗಳನ್ನು ದೆಹಲಿ ಘಟಕ ನಿಯಂತ್ರಿಸಲು ಆರಂಭಿಸಿದ ನಂತರ ಪಕ್ಷಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದಿದ್ದಾರೆ.

2017ರ ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಮಾಜಿ ಅಧಿಕಾರಿ ಗೋಮ್ಸ್ ಅವರು, ಇತ್ತೀಚಿನ ದಿನಗಳಲ್ಲಿ ಪಕ್ಷ ತನ್ನ ಸಿದ್ಧಾಂತದಿಂದ ವಿಮುಖವಾಗಿದೆ ಎಂದು ಆರೋಪಿಸಿದ್ದಾರೆ.

ಪಕ್ಷದ ಗೋವಾದ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿಲ್ಲ, ಬದಲಿಗೆ ದೆಹಲಿಯಲ್ಲಿ ಕುಳಿತುಕೊಳ್ಳುವ ಜನರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com