ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ:ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಟಿ ಆರ್ ಎಸ್ 

 ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಯಲ್ಲಿ ಪ್ರತಿಪಕ್ಷವಾದ ಭಾರತೀಯ ಜನತಾ ಪಾರ್ಟಿ 48 ವಾರ್ಡ್ ಗಳನ್ನು ಗೆಲ್ಲುವುದರ ಮೂಲಕ ಮಹತ್ಸಾಧನೆ ಮಾಡಿದೆ.
ಟಿಆರ್ ಎಸ್ ಅಭಿಮಾನಿಗಳ ಸಂಭ್ರಮ, ಸಡಗರ
ಟಿಆರ್ ಎಸ್ ಅಭಿಮಾನಿಗಳ ಸಂಭ್ರಮ, ಸಡಗರ

ಹೈದರಾಬಾದ್: ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಯಲ್ಲಿ  ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ ಎಸ್ ) ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.ಪ್ರತಿಪಕ್ಷವಾದ ಭಾರತೀಯ ಜನತಾ ಪಾರ್ಟಿ 48 ವಾರ್ಡ್ ಗಳನ್ನು ಗೆಲ್ಲುವುದರ ಮೂಲಕ ಮಹತ್ಸಾಧನೆ ಮಾಡಿದೆ.

ಇಂದು ನಡೆದ ಮತ ಎಣಿಕೆಯ ಫಲಿತಾಂಶದಲ್ಲಿ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ ( ಟಿಆರ್ ಎಸ್ ) ನಿರಾಸೆಗೊಂಡಿದ್ದು, 150 ವಾರ್ಡ್ ಗಳ ಪೈಕಿ ಕೇವಲ 56 ವಾರ್ಡ್ ಗಳಲ್ಲಿ ಜಯ ಸಾಧಿಸಿದೆ. ಅಸುದುದ್ದೀನ್ ಒವೈಸಿ ನೇತೃತ್ವದ ಎಐಎಂಐಎಂ 44 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. 

ಆಡಳಿತಾರೂಢ ಟಿಆರ್ ಎಸ್, ಬಿಜೆಪಿ ಮತ್ತು ಅಸಾದುದ್ದೀನ್ ಒವೈಸಿ ನೇತೃತ್ವದ ಅಖಿಲ ಭಾರತ ಮಜ್ಲಿಸ್ -ಎ- ಇತೇಹುದುಲ್ ಮುಸ್ಲೀಮೀನ್ ನಡುವೆ ತೀವ್ರ ಪೈಪೋಟಿ ಹೊಂದಿದ್ದ ನಗರಪಾಲಿಕೆ ಚುನಾವಣೆಯಲ್ಲಿ ಶೇ.46.55 ರಷ್ಟು ಮತದಾರರು ಮತ ಚಲಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com