ರಜನಿಕಾಂತ್ ರಾಜಕೀಯ ಪ್ರವೇಶ: ಎಡಿಎಂಕೆ, ಡಿಎಂಕೆಗೆ ಪ್ರಬಲ ಪೈಪೋಟಿ ನೀಡಬಲ್ಲರೇ 'ಸೂಪರ್ ಸ್ಟಾರ್'?

ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶಕ್ಕೆ ಅಖಾಡ ಸಿದ್ದವಾಗುತ್ತಿದೆ. ರಾಜಕೀಯ ಪಕ್ಷ ಸ್ಥಾಪಿಸುವ ಘೋಷಣೆಯನ್ನು ರಜನಿಕಾಂತ್ ಮಾಡಿರುವುದರಿಂದ ಈಗ ತಮಿಳು ನಾಡಿನ ಉಳಿದ ಪಕ್ಷಗಳಿಗೆ ತಮ್ಮ ಚುನಾವಣಾ ಕಾರ್ಯತಂತ್ರವನ್ನು ಪರಾಮರ್ಶೆ ಮಾಡಬೇಕಾದ ಪ್ರಸಂಗ ಬಂದಿದೆ.
ತಿರುಚಿಯಲ್ಲಿ ರಜನಿಕಾಂತ್ ರಾಜಕೀಯ ಪ್ರವೇಶದ ಬಗ್ಗೆ ಸಂಭ್ರಮಾಚರಣೆ
ತಿರುಚಿಯಲ್ಲಿ ರಜನಿಕಾಂತ್ ರಾಜಕೀಯ ಪ್ರವೇಶದ ಬಗ್ಗೆ ಸಂಭ್ರಮಾಚರಣೆ

ಚೆನ್ನೈ: ತಮಿಳು ನಾಡು ವಿಧಾನಸಭೆ ಚುನಾವಣೆಗೆ ಇನ್ನು 5 ತಿಂಗಳು ಬಾಕಿ ಇರುವುದು. ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶಕ್ಕೆ ಅಖಾಡ ಸಿದ್ದವಾಗುತ್ತಿದೆ. ರಾಜಕೀಯ ಪಕ್ಷ ಸ್ಥಾಪಿಸುವ ಘೋಷಣೆಯನ್ನು ರಜನಿಕಾಂತ್ ಮಾಡಿರುವುದರಿಂದ ಈಗ ತಮಿಳು ನಾಡಿನ ಉಳಿದ ಪಕ್ಷಗಳಿಗೆ ತಮ್ಮ ಚುನಾವಣಾ ಕಾರ್ಯತಂತ್ರವನ್ನು ಪರಾಮರ್ಶೆ ಮಾಡಬೇಕಾದ ಪ್ರಸಂಗ ಬಂದಿದೆ.

ಆಡಳಿತಾರೂಢ ಎಡಿಎಂಕೆ ರಜನಿಕಾಂತ್ ರಾಜಕೀಯ ಪ್ರವೇಶವನ್ನು ಸ್ವಾಗತಿಸಿದರೆ, ಪ್ರಮುಖ ವಿರೋಧ ಪಕ್ಷ ಡಿಎಂಕೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ರಜನಿಕಾಂತ್ ಅವರು ಮೊದಲು ರಾಜಕೀಯ ಪಕ್ಷ ಘೋಷಣೆ ಮಾಡಲಿ, ತಮ್ಮ ರೂಪುರೇಷೆಗಳು, ನೀತಿಗಳನ್ನು ಪ್ರಕಟಿಸಲಿ, ನಂತರ ನಾವು ಪ್ರತಿಕ್ರಿಯಿಸುತ್ತೇವೆ ಎನ್ನುತ್ತಿದ್ದಾರೆ ಡಿಎಂಕೆ ನಾಯಕರು.

ತಮಿಳು ನಾಡಿನ ತುಘಲಕ್ ಮ್ಯಾಗಜಿನ್ ನ ಸಂಪಾದಕ ಹಾಗೂ ರಾಜಕೀಯ ವಿಮರ್ಶಕ ಎಸ್ ಗುರುಮೂರ್ತಿ, ತಮಿಳು ನಾಡು ರಾಜಕೀಯದ ಮೇಲೆ ರಜನಿಕಾಂತ್ ರಾಜಕೀಯ ಪ್ರವೇಶ ತೀವ್ರ ಪರಿಣಾಮ ಬೀರಲಿದೆ ಎನ್ನುತ್ತಾರೆ. ತಮಿಳು ನಾಡಿನಲ್ಲಿ ಬಹುತೇಕ ಮತಗಳು ಡಿಎಂಕೆ ಮತ್ತು ಎಡಿಎಂಕೆಯೇತರ ಮತಗಳೇ. ಅವುಗಳ ಮೇಲೆ ರಜನಿಕಾಂತ್ ಈಗ ಕಣ್ಣಿಟ್ಟಿದ್ದಾರೆ. ಈ ಎರಡೂ ಪಕ್ಷಗಳನ್ನು ಸೋಲಿಸುವ ಸಾಮರ್ಥ್ಯ ಇರುವುದು ರಜನಿಕಾಂತ್ ಒಬ್ಬರಿಗೇ. ರಜನಿಕಾಂತ್ ಅವರು ರಾಜಕೀಯ ಪ್ರವೇಶಕ್ಕೆ ಮೊದಲು ಮಾಡಿರುವ ಸಮೀಕ್ಷೆ ಪ್ರಕಾರ ಅವರಿಗೆ ಶೇಕಡಾ 14ರಷ್ಟು ಮತಗಳು ಸಿಗುವ ಸಾಧ್ಯತೆಯಿದೆ ಎಂದು ಹೇಳುತ್ತಿವೆ. ಡಿಎಂಕೆ ಮತ್ತು ಎಡಿಎಂಕೆಗಳಿಗೆ ಪ್ರಬಲವಾಗಿ ಬೆಳೆದರೆ ತಮಿಳು ನಾಡು ರಾಜಕೀಯದಲ್ಲಿ ರಜನಿಕಾಂತ್ ಬೆಳೆಯಬಹುದು ಎಂದು ಹೇಳುತ್ತಾರೆ.

1973ರಲ್ಲಿ ತಮಿಳು ನಾಡಿನ ಡಿಂಡಿಗುಲ್ ಸಂಸದ ಕ್ಷೇತ್ರಕ್ಕೆ ನಡೆದಿದ್ದ ಉಪ ಚುನಾವಣೆಯಲ್ಲಿ ಡಿಎಂಕೆ ಮತ್ತು ಕಾಂಗ್ರೆಸ್ ವಿರೋಧಿ ಮತಗಳು ಬಹಳ ಮುಖ್ಯ ಪ್ರಭಾವ ಬೀರಿದವು. ಡಿಎಂಕೆ ಮತ್ತು ಕಾಂಗ್ರೆಸ್ ನಡುವೆ ಮತ ಹಂಚಿಕೆ ಕಡಿಮೆಯಾಗಿ ಎಡಿಎಂಕೆ ಪರ ಶೇಕಡಾ 50ರಷ್ಟು ಮತಗಳು ಚಲಾವಣೆಯಾದವು.

ಅಂದು ಡಿಎಂಕೆ ವಿರೋಧಿ ಮತಗಳು ಕಾಂಗ್ರೆಸ್ ಗೆ ಸೇರಬೇಕಾಗಿದ್ದು ಎಂಜಿಆರ್ ಪಕ್ಷದ ಪಾಲಾದವು. ಡಿಎಂಕೆಗೆ ಶೇಕಡಾ 18ರಷ್ಟು ಮತಗಳು ಸಿಕ್ಕಿದವಷ್ಟೆ. ಅಂದರೆ ತಮಿಳು ನಾಡು ರಾಜಕೀಯದಲ್ಲಿ ಎರಡು ವಿಷಯ ಸ್ಪಷ್ಟವಾಯಿತು, ಡಿಎಂಕೆ ಮತ್ತು ಕಾಂಗ್ರೆಸ್ ವಿರೋಧಿ ಮತಗಳು ಮತ್ತು ಎಂಜಿಆರ್ ಸ್ವಂತದ ಮತಗಳು ಸಿಕ್ಕಿ ಎಂಜಿಆರ್ ಪಕ್ಷದ ಬೆಳವಣಿಗೆಗೆ ಅಂದು ವೇದಿಕೆ ಸಿದ್ಧವಾಗಿತ್ತು. ಅಲ್ಲಿಂದ ಇದುವರೆಗೆ ಡಿಎಂಕೆ ವಿರೋಧಿ ಮತಗಳು ಎಡಿಎಂಕೆ ಪರ ಹೋಗಿದ್ದು ಬಿಟ್ಟರೆ ಅಲ್ಲಿಂದ ಬೇರೆ ಪಕ್ಷಕ್ಕೆ ಹೋಗಿಲ್ಲ.

ರಜನಿಕಾಂತ್ ರಾಜಕೀಯ ಎಂಟ್ರಿ ಬಗ್ಗೆ ಬಿಜೆಪಿ ಏನು ನಿಲುವು ತೆಗೆದುಕೊಂಡಿದೆ ಎಂದರೆ, ರಜನಿಕಾಂತ್ ತಮಿಳು ನಾಡು ರಾಜಕೀಯದಲ್ಲಿ ಬಹಳ ದೊಡ್ಡ ಶಕ್ತಿಯಾಗಿ ಬೆಳೆದರೆ ಅಂದರೆ ಬಿಜೆಪಿ ಮತ್ತು ರಜನಿಕಾಂತ್ ಒಂದಾದರೆ ಬಿಜೆಪಿ ಶಕ್ತಿ ಕಳೆದುಕೊಳ್ಳುತ್ತದೆ. ತಾತ್ವಿಕವಾಗಿ ರಜನಿಕಾಂತ್ ಬಿಜೆಪಿಯ ಸಿದ್ಧಾಂತವನ್ನೇ ಹೊಂದಿದ್ದಾರೆ. ರಾಷ್ಟ್ರಮಟ್ಟದ ವಿಚಾರಗಳಲ್ಲಿ ರಜನಿಕಾಂತ್ ಬಿಜೆಪಿ ಪರವಾಗಿದ್ದಾರೆ ಎನ್ನುತ್ತಾರೆ ಗುರುಮೂರ್ತಿ.

ರಜನಿಕಾಂತ್ ಅವರ ರಾಜಕೀಯ ವಿರೋಧಿ ಪಕ್ಷ ಡಿಎಂಕೆ. ಅವರು ಬಿಜೆಪಿ ಜೊತೆ ಹೋಗುತ್ತಾರೆಯೋ ಇಲ್ಲವೋ ಎಂಬುದನ್ನು ಅವರೇ ಘೋಷಿಸಬೇಕು. ಸಹಜವಾಗಿ ಈಗ ಎಲ್ಲರ ಕುತೂಹಲ ರಜನಿಕಾಂತ್, ಅವರ ರಾಜಕೀಯ ನಡೆಯ ಮೇಲೆ ಗಮನ ನೆಟ್ಟಿದೆ. ತಮಿಳು ನಾಡು ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ, ಬದಲಾವಣೆ ಮುಂದಿನ ದಿನಗಳಲ್ಲಿ ಆಗುವುದು ಖಂಡಿತ ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com