ಪಿಎಲ್ ಎಯಲ್ಲಿ ಸೇನೆ ನಿಲುಗಡೆ: ಚೀನಾದ ಸೈನ್ಯ ಎದುರಿಸಲು ಭಾರತ ಪಾಂಗೊಂಗ್ ಟ್ಸೊದಲ್ಲಿ ಸ್ಟೀಲ್ ಹಲ್ಲ್ ಗಳ ನಿಯೋಜನೆ
ಕಳೆದ ಮೇ ತಿಂಗಳಿನಿಂದ ಭಾರತ-ಚೀನಾ ಗಡಿ ವಾಸ್ತವ ರೇಖೆ ಬಳಿ ಸೇನೆ ನಿಲುಗಡೆ ಮುಂದುವರಿದಿರುವಾಗಲೇ ಭಾರತ ತನ್ನ ಸೇನೆಯ ಸಾಮರ್ಥ್ಯ ಹೆಚ್ಚಿಸಲು ಮುಂದಾಗಿದೆ. ಪಾಂಗೊಂಗ್ ಟ್ಸೊ ಸರೋವರದಲ್ಲಿ ಸೇನಾಪಡೆಯ ಗಸ್ತು ತಿರುಗುವಿಕೆಯನ್ನು ಹೆಚ್ಚಿಸಲು ಮುಂದಾಗಿದೆ.
Published: 05th December 2020 09:05 AM | Last Updated: 05th December 2020 09:08 AM | A+A A-

ಪಾಂಗೊಂಗ್ ಟ್ಸೊ ಸರೋವರ ಬಳಿ 2017ರಲ್ಲಿ ಭಾರತ ಸೂಚನ ಫಲಕ ಹಾಕಿರುವ ದೃಶ್ಯ
ನವದೆಹಲಿ: ಕಳೆದ ಮೇ ತಿಂಗಳಿನಿಂದ ಭಾರತ-ಚೀನಾ ಗಡಿ ವಾಸ್ತವ ರೇಖೆ ಬಳಿ ಸೇನೆ ನಿಲುಗಡೆ ಮುಂದುವರಿದಿರುವಾಗಲೇ ಭಾರತ ತನ್ನ ಸೇನೆಯ ಸಾಮರ್ಥ್ಯ ಹೆಚ್ಚಿಸಲು ಮುಂದಾಗಿದೆ. ಪಾಂಗೊಂಗ್ ಟ್ಸೊ ಸರೋವರದಲ್ಲಿ ಸೇನಾಪಡೆಯ ಗಸ್ತು ತಿರುಗುವಿಕೆಯನ್ನು ಹೆಚ್ಚಿಸಲು ಮುಂದಾಗಿದೆ.
ಪಾಂಗೊಂಗ್ ಟ್ಸೊ ಸರೋವರದ ನೀರಿನಲ್ಲಿ ಚೀನಾದ ನೌಕಾಪಡೆಯ ಚಟುವಟಿಕೆ ಹೆಚ್ಚದಂತೆ ನೋಡಿಕೊಳ್ಳಲು ಭಾರತ ಸ್ಟೀಲ್ ಹಲ್ ಹಡಗುಗಳನ್ನು ತಯಾರಿಸುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸರೋವರದಲ್ಲಿ ಚೀನಾದ ದೋಣಿಗಳ ಕಾರ್ಯಾಚರಣೆ ತೀವ್ರವಾಗಿದ್ದು ಭಾರತೀಯ ಹಡಗುಗಳ ಕಡೆಗೆ ಆಕ್ರಮಣ ನಡೆಸಲು ಚೀನಾ ಯತ್ನಿಸುತ್ತಿದೆ. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಭಾರತೀಯ ಪಡೆಗಳು ಚೀನಾದ ಆಕ್ರಮಣದಿಂದಾಗಿ ಗಾಯಗೊಂಡಿದ್ದರು.
ಭಾರತ ತಯಾರಿಸುತ್ತಿರುವ ಹೊಸ ಹಡಗು ಹೆಚ್ಚು ಶಕ್ತಿಯುತವಾಗಿರುತ್ತದೆ, ಉದ್ದವಾಗಿರುತ್ತದೆ ಮತ್ತು ಸ್ಟೀಲ್ ಹಲ್ ಅನ್ನು ಹೊಂದಿರುತ್ತದೆ, ಇದು ಇತ್ತೀಚಿನ ವರ್ಷಗಳಲ್ಲಿ ಗಡಿ ವಾಸ್ತವ ರೇಖೆಯಲ್ಲಿ ನಡೆಯುತ್ತಿರುವ ಚಟುವಟಿಕೆಯನ್ನು ತಡೆಯಬಲ್ಲ ಸಾಮರ್ಥ್ಯ ಹೊಂದಿದೆ. ಭಾರತೀಯ ಸೇನೆಯು ಸರೋವರದ ನೀರಿನಲ್ಲಿ ಗಸ್ತು ತಿರುಗುವುದನ್ನು ತಡೆಯುತ್ತದೆ ಎಂದು ಮತ್ತೊಂದು ಮೂಲದಿಂದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿಗೆ ತಿಳಿದುಬಂದಿದೆ.
ಹೊಸ ಹಡಗುಗಳನ್ನು ಸ್ವದೇಶಿಯವಾಗಿ ನಿರ್ಮಾಣ ಮಾಡಲಿದ್ದು 24ರಿಂದ 30ರಷ್ಟು ಪ್ಲಟೂನ್ ಗಾತ್ರದ ಸೇನಾ ತುಕಡಿಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಗಡಿ ವಾಸ್ತವ ರೇಖೆಯಿಂದ 14 ಸಾವಿರ ಅಡಿಗಳಲ್ಲಿ ಪಾಂಗೊಂಗ್ ಟ್ಸೊ ಸರೋವರವಿದ್ದು ಇದು 134 ಕಿಲೋ ಮೀಟರ್ ಉದ್ದವಾಗಿದೆ, ಅದರಲ್ಲಿ ಸುಮಾರು 45 ಕಿಲೋ ಮೀಟರ್ ಭಾರತದ ನಿಯಂತ್ರಣದಲ್ಲಿದೆ.
ಸರೋವರದ ಗಸ್ತು ತಿರುಗುವಿಕೆಯು ಚೀನಾದ ಸೈನ್ಯವನ್ನು ಫಿಂಗರ್ 4 ನಲ್ಲಿ ಏಕಪಕ್ಷೀಯವಾಗಿ ಸಜ್ಜುಗೊಳಿಸಿದಾಗಿನಿಂದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ, ಇದು ಸರೋವರದ ಉತ್ತರ ದಂಡೆಯಲ್ಲಿದೆ. ಸರೋವರದಲ್ಲಿ ವೇಗವಾಗಿ ಚಲಿಸುವ ಮೂಲಕ ಸೈನ್ಯವನ್ನು ಸಜ್ಜುಗೊಳಿಸಲು ಮತ್ತು ಈ ಪ್ರದೇಶದಲ್ಲಿ ಚೀನಿಯರನ್ನು ಎದುರಿಸಲು ನಮಗೆ ಒಂದು ಆಯ್ಕೆಯಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.