
ರಾಹುಲ್ ಗಾಂಧಿ
ನವದೆಹಲಿ: ಇಡೀ ದೇಶಕ್ಕೆ ಅನ್ನ ಕೊಡುವ ರೈತರಿಗೆ ಬೆಂಲಬಲ ನೀಡುವುದು ನಮ್ಮ ಕರ್ತವ್ಯ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಶನಿವಾರ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ರಾಹುಲ್ ಗಾಂಧಿಯವರು, ಎಂಎಸ್ ಪಿ ಮತ್ತು ಎಪಿಎಂಸಿ ಇಲ್ಲದೆ ಬಿಹಾರದ ರೈತರು ಸಂಕಷ್ಟದಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಇಡೀ ದೇಶದ ರೈತರನ್ನು ತೊಂದರೆಗೆ ಸಿಲುಕಿಸಿದ್ದಾರೆ ಎಂದು ಆರೋಪಿಸಿದ್ದಾರೆ.
बिहार का किसान MSP-APMC के बिना बेहद मुसीबत में है और अब PM ने पूरे देश को इसी कुएँ में धकेल दिया है।
— Rahul Gandhi (@RahulGandhi) December 5, 2020
ऐसे में देश के अन्नदाता का साथ देना हमारा कर्तव्य है। pic.twitter.com/Err20Pp0kv
ಎಂಎಸ್ ಪಿ ಮತ್ತು ಎಪಿಎಂಸಿ ಇಲ್ಲದೆ ಬಿಹಾರದ ರೈತ ತೀವ್ರ ತೊಂದರೆಯಲ್ಲಿದ್ದಾರೆ, ಈಗ ಪ್ರಧಾನಿ ಮೋದಿ ದೇಶವನ್ನು ಒಂದೇ ತೊಂದರೆಗೆ ತಳ್ಳುತ್ತಿದ್ದಾರೆ ಎಂದಿರುವ ರಾಹುಲ್ ಅವರು, ಇಡೀ ದೇಶಕ್ಕೆ ಅನ್ನ ಕೊಡುವ ರೈತರಿಗೆ ಇಂತಹ ಪರಿಸ್ಥಿತಿಯಲ್ಲಿ ಬೆಂಬಲ ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತಿಳಿಸಿದ್ದಾರೆ.