ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಛಾಯಾಗ್ರಹರಿಗೆ ಪಿಐಐ-ಐಸಿಆರ್ ಸಿ ವಾರ್ಷಿಕ ಪ್ರಶಸ್ತಿ
ಪಿಐಐ-ಐಸಿಆರ್ ಸಿ 14ನೇ ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ ಚೆನ್ನೈ ಛಾಯಾಗ್ರಾಹಕ ಅಶ್ವಿನ್ ಪ್ರಶಾತ್ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ.
Published: 05th December 2020 02:04 PM | Last Updated: 05th December 2020 04:14 PM | A+A A-

ಅಶ್ವಿನ್ ಪ್ರಶಾತ್
ಚೆನ್ನೈ: ಪಿಐಐ-ಐಸಿಆರ್ ಸಿ 14ನೇ ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ ಚೆನ್ನೈ ಛಾಯಾಗ್ರಾಹಕ ಅಶ್ವಿನ್ ಪ್ರಶಾತ್ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ.
ಶುಕ್ರವಾರ ಪ್ರಶಸ್ತಿ ಪ್ರಕಟಗೊಂಡಿದೆ, ಕೊರೋನಾದಿಂದ ಸಾವನ್ನಪ್ಪಿದ್ದ ಸಂತ್ರಸ್ತರ ಅಂತಿಮ ವಿಧಿವಿಧಾನದ ಫೋಟೋಗೆ ಈ ಪ್ರಶಸ್ತಿ ದೊರೆತಿದೆ, ಚೆನ್ನೈ ಪ್ರೆಸ್ ಇನ್ಸಿಸ್ಟ್ಯಿಟ್ಯೂಟ್ ಆಫ್ ಇಂಡಿಯಾ, ನವದೆಹಲಿಯ ರೆಡ್ ಕ್ರಾಸ್ ಇಂಟರ್ ನ್ಯಾಷನಲ್ ಕಮಿಟಿ ಲೇಖನ ಮತ್ತು ಛಾಯಾಗ್ರಹಣ ಕೆಟಗರಿ ಅಡಿಯಲ್ಲಿ ಪ್ರಶಸ್ತಿ ಪ್ರಕಟಿಸಿವೆ.
ಪುದುಚೆರಿಯ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಛಾಯಾಗ್ರಾಹಕ ಪಟ್ಟಾಭಿರಾಮನ್ ಅವರು ಮೆಚ್ಚುಗೆ ಪ್ರಶಸ್ತಿ (ಅಪ್ರಿಸಿಯೇಷನ್ ಪ್ರೈಜ್) ಪಡೆದಿದ್ದಾರೆ. ಕಾಲು ಮಸಾಜ್ ಮಾಡುವ ಚಿತ್ರಕ್ಕೆ ಇವರಿಗೆ ಪ್ರಶಸ್ತಿ ದೊರೆತಿದೆ.