ರೈತರ ಪ್ರತಿಭಟನೆ: ಹಳೆ ಕಾಯ್ದೆಗಳಿಂದ ಹೊಸ ಶತಮಾನ ಸೃಷ್ಟಿಸಲಾಗದು ಎಂದ ಪ್ರಧಾನಿ ಮೋದಿ

ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರು ಕಳೆದ 11 ದಿನಗಳಿಂದ ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲು ನಾಳೆ ಭಾರತ್ ಬಂದ್ ಗೆ ಕರೆ ನೀಡಿದ...
ಮೋದಿ - ರೈತರ ಪ್ರತಿಭಟನೆ
ಮೋದಿ - ರೈತರ ಪ್ರತಿಭಟನೆ

ನವದೆಹಲಿ: ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರು ಕಳೆದ 11 ದಿನಗಳಿಂದ ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲು ನಾಳೆ ಭಾರತ್ ಬಂದ್ ಗೆ ಕರೆ ನೀಡಿದ ಬೆನ್ನಲ್ಲೇ, ಕಾಯ್ದೆಯನ್ನು ಸಮರ್ಥಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಹೊಸ ಸೌಲಭ್ಯಗಳು ಮತ್ತು ವ್ಯವಸ್ಥೆಗಳಿಗೆ ಸುಧಾರಣೆಗಳು ಅತಿ ಮುಖ್ಯ ಎಂದಿದ್ದಾರೆ.

ವಿಡಿಯೋ ಕಾನ್ಫರೆನ್ಸ್‌ ಮೂಲಕ ಆಗ್ರಾ ಮೆಟ್ರೋ ರೈಲು ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ. ಹಿಂದಿನ ಶತಮಾನದ ಕಾಯ್ದೆಗಳನ್ನು ಆಧರಿಸಿ ಹೊಸ ಶತಮಾನ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಹಿಂದಿನ ಶತಮಾನದಲ್ಲಿ ಉಪಯುಕ್ತವಾಗಿದ್ದ ಕಾಯ್ದೆ ಮುಂದಿನ ಶತಮಾನಕ್ಕೆ ಹೊರೆಯಾಗಬಹುದು. ಆದ್ದರಿಂದ ಸುಧಾರಣೆಯ ಪ್ರಕ್ರಿಯೆ ಮುಂದುವರಿಯಬೇಕು ಎಂದಿದ್ದಾರೆ.

ನಮ್ಮ ಸರ್ಕಾರ ಸಮಗ್ರ ಸುಧಾರಣೆಗಳನ್ನು” ತರುತ್ತಿದೆ. ಈ ಮೊದಲು, ಸುಧಾರಣೆಗಳು ಕೆಲವು ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದ್ದವು ಅಥವಾ ಕೆಲವು ವಲಯಗಳು ಮತ್ತು ಇಲಾಖೆಗಳನ್ನು ಗಮನದಲ್ಲಿರಿಸಿಕೊಂಡು ತರಲಾಗಿತ್ತು ಎಂದು ಪ್ರಧಾನಿ ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ನಮ್ಮ ಸರ್ಕಾರ ಕೈಗೊಂಡ ಸುಧಾರಣೆಗಳು ದೇಶದಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿವೆ ಎಂದು ಅವರು, ಜನರು "ಉತ್ತಮವಾದ ವಿವರಗಳ" ಮೂಲಕ ಹೋದಾಗ ತೃಪ್ತರಾಗುತ್ತಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com