ಮನೆ ಬಾಗಿಲಿಗೆ ಶಬರಿಮಲೆ ಪ್ರಸಾದ ಡೆಲಿವರಿ!

ಶಬರಿಮಲೆ ದೇವಾಲಯದ ಸ್ವಾಮಿ ಪ್ರಸಾದ ಸ್ಪೀಡ್ ಪೋಸ್ಟ್ ಮೂಲಕ  ಮನೆ ಬಾಗಿಲಿಗೆ ತಲುಪುತ್ತಿದೆ. ಈ ವರ್ಷ ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಮಂಡಲಂನಲ್ಲಿ ಕಠಿಣ ನಿರ್ಬಂಧ ಇದ್ದು, ಭಕ್ತಾಧಿಗಳಿಗೆ ಪವಿತ್ರ ಪ್ರಸಾದ ದೊರೆಯುವಂತೆ ಅಂಚೆ ಇಲಾಖೆ ಮತ್ತು ಟ್ರಾವಂಕೂರು ದೇವಸ್ವಂ ಮಂಡಳಿ ಮಾಡುತ್ತಿದೆ.  
ಶಬರಿಮಲೆ ಪ್ರಸಾದ
ಶಬರಿಮಲೆ ಪ್ರಸಾದ

ಬೆಂಗಳೂರು: ಶಬರಿಮಲೆ ದೇವಾಲಯದ ಸ್ವಾಮಿ ಪ್ರಸಾದ ಸ್ಪೀಡ್ ಪೋಸ್ಟ್ ಮೂಲಕ  ಮನೆ ಬಾಗಿಲಿಗೆ ತಲುಪುತ್ತಿದೆ. ಈ ವರ್ಷ ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಮಂಡಲಂನಲ್ಲಿ ಕಠಿಣ ನಿರ್ಬಂಧ ಇದ್ದು, ಭಕ್ತಾಧಿಗಳಿಗೆ ಪವಿತ್ರ ಪ್ರಸಾದ ದೊರೆಯುವಂತೆ ಅಂಚೆ ಇಲಾಖೆ ಮತ್ತು ಟ್ರಾವಂಕೂರು ದೇವಸ್ವಂ ಮಂಡಳಿ ಮಾಡುತ್ತಿದೆ.  

ನವೆಂಬರ್ 6ರಿಂದ ಈ ವಿಶೇಷ ವಿತರಣಾ ವ್ಯವಸ್ಥೆಯನ್ನು ಆರಂಭಿಸಲಾಗಿದ್ದು, ಇಲ್ಲಿಯವರೆಗೂ ರಾಜ್ಯದ 112 ಭಕ್ತಾಧಿಗಳು ಸೇರಿದಂತೆ ಒಟ್ಟಾರೇ 11 ಸಾವಿರ ಭಕ್ತಾಧಿಗಳು ಪ್ರಸಾದ ಸ್ವೀಕರಿಸಿದ್ದಾರೆ.

ಇದೇ ಮೊದಲ ಬಾರಿಗೆ ದೇವಸ್ವಂ ಮಂಡಳಿ ಈ ರೀತಿಯ ಪ್ರಸಾದ ವಿತರಣೆಯನ್ನು ಮಾಡುತ್ತಿದೆ. ಸಾಂಕ್ರಾಮಿಕ ಬಿಕ್ಕಟ್ಟಿನ ಸಂದರ್ಭದಲ್ಲೂ ಭಕ್ತಾಧಿಗಳು ಸಂತೋಷದಿಂದ ಪ್ರಸಾದ ಸ್ವೀಕರಿಸುತ್ತದ್ದಾರೆ. ಪ್ರತಿಯೊಂದು ಪ್ಯಾಕೇಜ್ ನಲ್ಲಿ ಒಂದು ಪಾಕೆಟ್ ಅರವಣಾ, ಅಡಿಯಾ ಸಿಸ್ತಮ್ ನೇಯ್ ತುಪ್ಪ, ವಿಭೂತಿ, ಕುಂಕುಮ , ಅರಿಶಿಣ  ಮತ್ತು ಅರ್ಚನಾ ಪ್ರಸಾದ ಇರುತ್ತದೆ ಎಂದು ರಾಜ್ಯ ಅಂಚೆ ವೃತ್ತದ ಅಂಚೆ ಸೇವೆ ನಿರ್ದೇಶಕ ಕೆ. ರವೀಂದ್ರನ್ ತಿಳಿಸಿದ್ದಾರೆ.

ಒಂದು ಪ್ಯಾಕೆಟ್‌ನ ಬೆಲೆ 450 ರೂ. ಮತ್ತು ಒಬ್ಬ ವ್ಯಕ್ತಿಗೆ ಒಂದು ಬಾರಿ ಗರಿಷ್ಠ ಹತ್ತು ಪ್ಯಾಕೆಟ್‌ಗಳನ್ನು ಕಾಯ್ದಿರಿಸಲು ಅವಕಾಶವಿದೆ. ಬುಕಿಂಗ್ ನ್ನು ಕರ್ನಾಟಕದಾದ್ಯಂತದ ಸುಮಾರು 3,000 ಶಾಖಾ ಅಂಚೆ ಕಚೇರಿಗಳಲ್ಲಿ ನಗದು ಮೂಲಕ ಮಾತ್ರ  ಮಾಡಬೇಕಾಗಿದೆ. ಪ್ರಸಾದ ಪಾವಿತ್ರ್ಯವನ್ನು ಕಾಪಾಡಿಕೊಳ್ಳಲು ಕೇರಳದ ದೇವಾಲಯದಿಂದ ನೇರವಾಗಿ ಸ್ಪೀಡ್ ಫೋಸ್ಟ್ ಮೂಲಕ ಬರಲಿದೆ ಎಂದು ಅವರು ಹೇಳಿದ್ದಾರೆ.

ಮನೆ ಬಾಗಿಲಿಗೆ ಪ್ರಸಾದ ಬರುತ್ತಿರುವುದರಿಂದ ತುಂಬಾ ಸಂತೋಷವಾಗಿರುವುದಾಗಿ ಪ್ರಸಾದ ಸ್ವಿಕರಿಸಿರುವ ಮೈಸೂರು ರಸ್ತೆ ಬಳಿಯ ನಿವಾಸಿ ಹೆಚ್ . ಕೆ. ನಾಗೇಂದ್ರ  ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com