ಫಿಜರ್ ಬೆನ್ನಲ್ಲೇ, ಕೊರೋನಾ ಲಸಿಕೆ ತುರ್ತು ಬಳಕೆಗೆ ಅನುಮತಿ ಕೇಳಿದ ಸೆರಮ್ ಇನ್ಸ್ ಟಿಟ್ಯೂಟ್!

ಕೊರೊನಾ ವೈರಸ್ ಸೋಂಕಿಗೆ ಲಸಿಕೆ ತಯಾರಿಸುವ ವಿದೇಶಿ ಕಂಪನಿ ಫಿಜರ್-ಬಯೋಟೆಕ್ ನಂತರ, ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಕೂಡ ಭಾರತದಲ್ಲಿ ತುರ್ತು ಬಳಕೆಗೆ ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.
ಕೋವಿ ಶೀಲ್ಡ್ ಲಸಿಕೆ
ಕೋವಿ ಶೀಲ್ಡ್ ಲಸಿಕೆ

ನವದೆಹಲಿ: ಕೊರೊನಾ ವೈರಸ್ ಸೋಂಕಿಗೆ ಲಸಿಕೆ ತಯಾರಿಸುವ ವಿದೇಶಿ ಕಂಪನಿ ಫಿಜರ್-ಬಯೋಟೆಕ್ ನಂತರ, ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಕೂಡ ಭಾರತದಲ್ಲಿ ತುರ್ತು ಬಳಕೆಗೆ ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.

ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆ ಬ್ರಿಟನ್ ಮೂಲದ ಆಕ್ಸ್ ಫರ್ಡ್ ನ ಆಸ್ಟ್ರಾಜೆನಿಕಾ ಸಂಸ್ಥೆಯೊಂದಿಗೆ ಸೇರಿ ಅಭಿವೃದ್ಧಿಪಡಿಸಿದ ಕೊರೋನಾವೈರಸ್ ಲಸಿಕೆ ಕೋವಿಶೀಲ್ಡ್ ಭಾರತದಲ್ಲಿ ಉತ್ಪಾದನೆಯಾಗುತ್ತಿದ್ದು ಇದೇ ಲಸಿಕೆಯ ತುರ್ತು ಬಳಕೆಗೆ ಎಸ್ಐಐ ಭಾರತೀಯ ಡ್ರಗ್ ಕಂಟ್ರೋಲರ್ ಜನರಲ್  ಗೆ (DCGI) ಅರ್ಜಿ ಸಲ್ಲಿಕೆ ಮಾಡಿದೆ. ಕೋವಿಶೀಲ್ಡ್ ಭಾರತದಲ್ಲಿ ಉತ್ಪಾದನೆಯಾಗುತ್ತಿದ್ದು, ಇದೇ ಕಾರಣಕ್ಕೆ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ತುರ್ತು ಬಳಕೆಗೆ ಅನುಮತಿ ಕೇಳಿದ ಮೊದಲ ದೇಶೀಯ ಲಸಿಕಾ ಸಂಸ್ಥೆಯಾಗಿದೆ.

ಈಗಾಗಲೇ ಬ್ರಿಟನ್ ನಲ್ಲಿ ಕೊರೋನಾ ಲಸಿಕೆಯ ತುರ್ತು ಬಳಕೆಗೆ ಫಿಜರ್ ಸಂಸ್ಥೆಗೆ ಅನುಮತಿ ನೀಡಲಾಗಿದ್ದು, ಇತ್ತೀಚೆಗೆ ಇದೇ ಫಿಜರ್ ಸಂಸ್ಥೆ ಭಾರತದಲ್ಲಿ ಲಸಿಕೆಯ ತುರ್ತು ಬಳಕೆಗಾಗಿ ಅನುಮತಿ ಕೋರಿ ಅರ್ಜಿ ಸಲ್ಲಿಸಿತ್ತು. ತುರ್ತು ಪರಿಸ್ಥಿತಿಯಲ್ಲಿ ಕರೋನಾ ಲಸಿಕೆಯನ್ನು ಬಳಸಲು ಅನುಮತಿ ಕೋರಿ ಡಿಸೆಂಬರ್  4 ರಂದು ಫಿಜರ್ ಕಂಪನಿಯ ಭಾರತೀಯ ಘಟಕವು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಗೆ ತನ್ನ ಅರ್ಜಿಯನ್ನು ಕಳುಹಿಸಿತ್ತು.

ಫಿಜರ್-ಬಯೋನೆಟೆಕ್ ಕಂಪನಿಯು ಭಾರತದಲ್ಲಿ ಕೊರೊನಾವೈರಸ್ ಲಸಿಕೆ ಆಮದು ಮಾಡಿಕೊಳ್ಳಲು ಅನುಮತಿ ಕೋರಿದೆ. ಫಿಜರ್ ಕಂಪನಿಯ ಪ್ರಕಾರ ಬ್ರಿಟನ್ ಮತ್ತು ಬಹ್ರೇನ್‌ನಲ್ಲಿ ತುರ್ತು ಬಳಕೆಗಾಗಿ ಅವರ ಕೊರೊನಾವೈರಸ್ ಲಸಿಕೆಯನ್ನು ಅನುಮೋದಿಸಲಾಗಿದೆ ಎಂದು ತಿಳಿದುಬಂದಿದೆ.ಕೊರೊನಾವೈರಸ್  ಲಸಿಕೆ ತಯಾರಿಸುವ ಫಿಜರ್ ಕಂಪನಿಯು ತನ್ನ ಲಸಿಕೆಯನ್ನು ಭಾರತದಲ್ಲಿ ಮಾರಾಟ ಮಾಡಲು ಬಯಸಿದೆ ಮತ್ತು ಭಾರತೀಯರ ಮೇಲೆ ಕ್ಲಿನಿಕಲ್ ಪ್ರಯೋಗಗಳನ್ನು ಸಹ ನಡೆಸುವ ಇಚ್ಛೆ ಹೊಂದಿದೆ. ಫಿಜರ್-ಬಯೋನೆಟೆಕ್ ಕಂಪನಿಯು 2019ರ ಔಷಧಗಳು ಮತ್ತು ಕ್ಲಿನಿಕಲ್ ಪ್ರಯೋಗಗಳ ನಿಯಮಗಳ (Drugs  and Clinical Trials Rules, 2019) ಅಡಿಯಲ್ಲಿ ಭಾರತದಲ್ಲಿ ಕ್ಲಿನಿಕಲ್ ಪ್ರಯೋಗಗಳಿಗೆ ಅನುಮತಿ ಕೋರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com