ಆಂಧ್ರ ಪ್ರದೇಶ: ಎಲೂರು ಜನರ ನಿಗೂಢ ಅಸ್ವಸ್ಥತೆಗೆ ಇದೇನಾ ಕಾರಣ?

ಒಂದು ಸಾವು ಮತ್ತು 476 ಮಂದಿಯ ಅಸ್ವಸ್ಥತೆ ಮೂಲಕ ಬಾರಿ ಸುದ್ದಿಗೆ ಗ್ರಾಸವಾಗಿರುವ ಎಲೂರು ದುರಂತಕ್ಕೆ ಕಾರ್ಪೋರೇಷನ್ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ.
ಎಲೂರಿನಲ್ಲಿ  ಹಂದಿಗಳು
ಎಲೂರಿನಲ್ಲಿ ಹಂದಿಗಳು

ವಿಶಾಖಪಟ್ಟಣ: ಒಂದು ಸಾವು ಮತ್ತು 476 ಮಂದಿಯ ಅಸ್ವಸ್ಥತೆ ಮೂಲಕ ಬಾರಿ ಸುದ್ದಿಗೆ ಗ್ರಾಸವಾಗಿರುವ ಎಲೂರು ದುರಂತಕ್ಕೆ ಕಾರ್ಪೋರೇಷನ್ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ.

ಹೌದು.. ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿಯ ಜಿಲ್ಲಾ ಕೇಂದ್ರವಾದ ಎಲೂರಿನಲ್ಲಿ ಸಂಭವಿಸಿರುವ ನಿಗೂಢ ಅಸ್ವಸ್ಥತೆಗೆ ಕಾರ್ಪೋರೇಷನ್ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಜಿಲ್ಲೆಯಲ್ಲಿ ಈ ವರೆಗೂ ನಿಗೂಢ ಅಸ್ವಸ್ಥತೆಗೆ ಓರ್ವ ಬಲಿಯಾಗಿ 476  ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ, ಜನರು ಯಾವ ಕಾರಣಕ್ಕೆ ಅಸ್ವಸ್ಥರಾಗುತ್ತಿದ್ದಾರೆ ಎಂದು ವೈದ್ಯರಿಗೆ ತಿಳಿಯುತ್ತಿಲ್ಲ. ಇದರ ನಡುವೆಯೇ ಎಲೂರಿನ ಸ್ಥಳೀಯ ನಿವಾಸಿಗಳು ನಿಗೂಢ ಅಸ್ವಸ್ಥತೆಗೆ ಸ್ಥಳೀಯ ಕಾರ್ಪೋರೇಷನ್ ಅಧಿಕಾರಿಗಳೇ ಕಾರಣ ಎಂದು ಹೇಳುತ್ತಿದ್ದಾರೆ.

ನಿಗೂಢ ಅಸ್ವಸ್ಥೆತೆಗೆ ಸಾಕ್ಷಿಯಾಗಿರುವ ಎಲೂರಿನ ದಕ್ಷಿಣ ವೀಧಿ, ಪದಮಾತಾ ವೀಧಿ, ಕೊಬ್ಬಾರಿ ಥೋಟಾ, ಮಹೇಶ್ವರಿ ಕಾಲೋನಿ, ಗಾಂಧಿ ಕಾಲೋನಿ, ತಂಗೇಲ್ಲಮುಡಿ ಮತ್ತು ಕೊಠಪೇಟೆ ಮುಂತಾದ ಸ್ಥಳಗಳಿಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿಗಾರರು ತೆರಳಿ ಮಾಹಿತಿ  ಸಂಗ್ರಹಿಸಿದ್ದಾರೆ. ಈ ವೇಳೆ ಹಲವು ಸ್ಥಳೀಯರು ಜಿಲ್ಲಾಡಳಿತದ ವಿರುದ್ಧ ಕಿಡಿಕಾರಿದ್ದು ಜಿಲ್ಲೆಯಲ್ಲಿನ ನೈರ್ಮಲ್ಯ ನಿರ್ವಹಣೆಯಲ್ಲಿನ ದೋಷವೇ ನಿಗೂಢ ಅಸ್ವಸ್ಥತೆಗೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿನ ತೆರೆದ ಚರಂಡಿ, ಮೋರಿ ಮತ್ತು ಹಂದಿಗಳ ಕಾಟದಿಂದಾಗಿ ಇಲ್ಲಿ ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಾಗುತ್ತಿದೆ. ಕಸದ ನಿರ್ವಹಣೆ ಮತ್ತು ಅದರ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಎಲ್ಲೆಂದರಲ್ಲಿ ಕಸ ಎಸೆಯಲಾಗುತ್ತಿದೆ. ಈ ಬಗ್ಗೆ ಸಾಕಷ್ಟು ಬಾರಿ ದೂರು ನೀಡಿದ್ದರು  ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಈಗಾಗಲೇ ಸೊಳ್ಳೆಗಳ ಹೆಚ್ಚಳದಿಂದ ಡೆಂಗ್ಯೂ, ಮಲೇರಿಯಾದಂತಹ ಡಜನ್ ಪ್ರಕರಣಗಳು ವರದಿಯಾಗಿದ್ದು, ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದಾಗ್ಯೂ ಕಾರ್ಪೋರೇಷನ್ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ. 

ಜನ ರಾತ್ರಿಯಿಡೀ ಸೊಳ್ಳೆ ಕಾಟದಿಂದ ಪರಿತಪಿಸುತ್ತಿದ್ದಾರೆ. ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ.  ಜನವಸತಿ ಪ್ರದೇಶಗಳಲ್ಲಿ ಹಂದಿ ಸಾಕಣೆ ನಿಷೇಧವಿದ್ದರೂ ಇಲ್ಲಿ ಹಂದಿಗಳನ್ನು ಸಾಕಲಾಗುತ್ತಿದೆ. ಹಂದಿ ಸಾಕುವವರು ಹೋಟೆಲ್‌ಗಳು, ರಸ್ತೆಬದಿಯ ತಿನಿಸುಗಳು ಮತ್ತು ಮಾಂಸದ  ಅಂಗಡಿಗಳಿಂದ ಬರುವ ತ್ಯಾಜ್ಯವನ್ನು ಎಸೆಯುತ್ತಿದ್ದು ಈ ಆಹಾರವನ್ನು ತಿನ್ನಲು ಹಂದಿಗಳು ಬಿಡುತ್ತಿದ್ದಾರೆ, ಇದೇ ವಿಚಾರವಾಗಿ ಸಾಕಷ್ಟು ಬಾರಿ ಹಂದಿ ಸಾಕಣೆದಾರರು ಮತ್ತು ಸ್ಥಳೀಯರ ನಡುವೆ ಜಗಳ ಕೂಡ ನಡೆದಿದೆ. ಪ್ರತೀಬಾರಿ ಜಗಳವಾದಾಗಲೂ ದೂರು ನೀಡಲಾಗಿದೆ. ಒಮ್ಮೆಯೂ  ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com