ನೂತನ ಕೃಷಿ ಮಸೂದೆಯ ಸುಧಾರಣಾ ಕ್ರಮಗಳನ್ನು ಯುಪಿಎ ಅವಧಿಯಲ್ಲಿ ಸಮಿತಿ ಶಿಫಾರಸು ಮಾಡಿತ್ತು: ಸರ್ಕಾರದ ಮೂಲಗಳು!

ಮೂರು ನೂತನ ಕೃಷಿ ಮಸೂದೆಗಳಲ್ಲಿ ಸೇರಿಸಿರುವ ಕೃಷಿ ಸುಧಾರಣಾ ಕ್ರಮಗಳನ್ನು ಯುಪಿಎ ಸರ್ಕಾರವಿದ್ದಾಗ 2010ರಲ್ಲಿ ಭೂಪೀಂದರ್ ಸಿಂಗ್ ಹೂಡಾ ನೇತೃತ್ವದ ಸಮಿತಿ ಶಿಫಾರಸು ಮಾಡಿತ್ತು ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ದೆಹಲಿ ಚಲೋ ಪ್ರತಿಭಟನೆ ಸಂದರ್ಭದಲ್ಲಿ ಸರ್ಕಾರ ವಿರುದ್ಧ ಘೋಷಣೆ ಕೂಗುತ್ತಿರುವ ಪ್ರತಿಭಟನಾಕಾರರು
ದೆಹಲಿ ಚಲೋ ಪ್ರತಿಭಟನೆ ಸಂದರ್ಭದಲ್ಲಿ ಸರ್ಕಾರ ವಿರುದ್ಧ ಘೋಷಣೆ ಕೂಗುತ್ತಿರುವ ಪ್ರತಿಭಟನಾಕಾರರು

ನವದೆಹಲಿ: ಮೂರು ನೂತನ ಕೃಷಿ ಮಸೂದೆಗಳಲ್ಲಿ ಸೇರಿಸಿರುವ ಕೃಷಿ ಸುಧಾರಣಾ ಕ್ರಮಗಳನ್ನು ಯುಪಿಎ ಸರ್ಕಾರವಿದ್ದಾಗ 2010ರಲ್ಲಿ ಭೂಪೀಂದರ್ ಸಿಂಗ್ ಹೂಡಾ ನೇತೃತ್ವದ ಸಮಿತಿ ಶಿಫಾರಸು ಮಾಡಿತ್ತು ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಈಗ ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಗಳನ್ನು ವಿರೋಧಿಸಿ ದೇಶಾದ್ಯಂತ ರೈತರು ಪ್ರತಿಭಟನೆ ನಡೆಸುತ್ತಿದ್ದು ಇಂದು ಪ್ರತಿಭಟನೆ ಮಾಡುತ್ತಿದ್ದಾರೆ. ಇದಕ್ಕೆ ಹಲವು ವಿರೋಧ ಪಕ್ಷಗಳು ಬೆಂಬಲ ನೀಡಿವೆ. ಕಾಂಗ್ರೆಸ್, ಎನ್ ಸಿಪಿಗಳೂ ಬೆಂಬಲ ನೀಡಿವೆ. 
ಇಂದು ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಕೃಷಿ ಸುಧಾರಣಾ ಮಸೂದೆಗಳ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ವಿರೋಧ ಪಕ್ಷದ ನಾಯಕರು ನಾಚಿಕೆಯಿಲ್ಲದೆ ದ್ವಿಮುಖ ಧೋರಣೆ ಹೊಂದಿದ್ದಾರೆ. ಇದೇ ಪಕ್ಷ ಹಿಂದೆ ಈ ಸುಧಾರಣಾ ಮಸೂದೆಗಳಿಗೆ ಶಿಫಾರಸು ನೀಡಿತ್ತು ಎಂದು ಬಿಜೆಪಿ ಹಿರಿಯ ನಾಯಕ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಆರೋಪಿಸಿದ್ದಾರೆ.

2010ರಲ್ಲಿ ಭೂಪೀಂದರ್ ಹೂಡಾ ಸಮಿತಿ ಸಲ್ಲಿಸಿದ್ದ ವರದಿಯಲ್ಲಿ ಕೃಷಿ ಉತ್ಪನ್ನಗಳ ಮಾರುಕಟ್ಟೆಗೆ ಇರುವ ಎಲ್ಲಾ ನಿರ್ಬಂಧಗಳನ್ನು ತಕ್ಷಣವೇ ಮುಕ್ತಗೊಳಿಸಿ ಮಾರಾಟ, ವ್ಯವಹಾರ, ಸಂಗ್ರಹ, ಹಣಕಾಸು ಮತ್ತು ರಫ್ತುಗಳಿಗೆ ಸಂಬಂಧಪಟ್ಟಂತೆ ಮುಕ್ತ ವಾತಾವರಣ ಕಲ್ಪಿಸಬೇಕೆಂದು ಹೇಳಿತ್ತು. ಎಪಿಎಂಸಿ ಅಥವಾ ಕಾರ್ಪೊರೇಟ್ ಪರವಾನಗಿಯಲ್ಲಿ ಏಕಸ್ವಾಮ್ಯವಿರಬಾರದು. ಇವು ಮಾರುಕಟ್ಟೆಯನ್ನು ನಿಯಂತ್ರಿಸುವಂತಾಗಬಾರದು ಎಂದು ಸಮಿತಿ ಶಿಫಾರಸು ಮಾಡಿತ್ತು ಎಂದು ಸರ್ಕಾರದ ಮೂಲಗಳು ಇಂದು ಹೇಳುತ್ತವೆ.

ರೈತರ ಮಾರುಕಟ್ಟೆ ಪರಿಕಲ್ಪನೆಯಡಿ, ರೈತರು ಗ್ರಾಹಕರಿಗೆ ನೇರವಾಗಿ ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯವಸ್ಥೆಯಾಗಬೇಕೆಂದು ಸಹ ಸಮಿತಿ ಶಿಫಾರಸು ಮಾಡಿದೆ. ಅಗತ್ಯ ವಸ್ತುಗಳ ಕಾಯ್ದೆಯ ಉಪಯೋಗ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮಾತ್ರ ಬಳಕೆಯಾಗಬೇಕು. ಅದನ್ನು ರಾಜ್ಯ ಸರ್ಕಾರಗಳೊಡನೆ ಸಮಾಲೋಚನೆ ನಡೆಸಿ ತೀರ್ಮಾನಿಸಬೇಕೆಂದು ಸಮಿತಿ ಶಿಫಾರಸು ಮಾಡಿತ್ತು.

ಮಾದರಿ ಕಾಯ್ದೆ ರೈತರಿಗೆ ಪರ್ಯಾಯ ಮಾರುಕಟ್ಟೆ ಮಾರ್ಗಗಳನ್ನು ಒದಗಿಸುತ್ತದೆ. ರಾಜ್ಯಗಳು ಈ ಸುಧಾರಣೆಗಳನ್ನು ಅಳವಡಿಸಿಕೊಳ್ಳಬೇಕು, ಅವುಗಳನ್ನು ಕಾರ್ಯಗತಗೊಳಿಸಬೇಕು ಮತ್ತು ವಾಸ್ತವವಾಗಿ ಒದಗಿಸಲು ಮಾದರಿ ಕಾನೂನಿನಲ್ಲಿ ಪ್ರಸ್ತಾಪಿಸಲಾದ ಕ್ರಮಗಳನ್ನು ಮೀರಿರಬೇಕು" ಎಂದು ರಾಜ್ಯಗಳು ಅಳವಡಿಸಿಕೊಳ್ಳಲು 2003 ರಲ್ಲಿ ಪ್ರಸಾರವಾದ ಮಾದರಿ ಕೃಷಿ ಮಾರುಕಟ್ಟೆ ಕಾನೂನು ರೈತರಿಗೆ ಮುಕ್ತ ಮತ್ತು ಸ್ಪರ್ಧಾತ್ಮಕ ಮಾರುಕಟ್ಟೆಯನ್ನು ತರಬೇಕು ಎಂದು 2003ರಲ್ಲಿಯೇ ಸುತ್ತೋಲೆ ಹೊರಡಿಸಲಾಗಿತ್ತು ಎಂದು ಸಮಿತಿ ಹೇಳಿದೆ ಎನ್ನುತ್ತದೆ ಸರ್ಕಾರದ ಮೂಲಗಳು.

2013ರಲ್ಲಿ ಮತ್ತೊಂದು ಕಾರ್ಯಪಡೆಯನ್ನು ಹೂಡಾ ನೇತೃತ್ವದಲ್ಲಿ ಕೃಷಿ ಉತ್ಪನ್ನಗಳಿಗೆ ರಚಿಸಿ ಅದರಲ್ಲಿ ಪಂಜಾಬ್, ಪಶ್ಚಿಮ ಬಂಗಾಳ ಮತ್ತು ಬಿಹಾರದ ಮುಖ್ಯಮಂತ್ರಿಗಳಿದ್ದರು.ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅವಧಿಯಲ್ಲಿ ಹೂಡಾ ನೇತೃತ್ವದ ಸಮಿತಿ ಶಿಫಾರಸು ಮಾಡಿದ್ದ ಸುಧಾರಣೆಗಳೇ ಇಂದು ಕೇಂದ್ರ ಎನ್ ಡಿಎ ಸರ್ಕಾರ ತಂದಿರುವ ಮೂರು ನೂತನ ಕೃಷಿ ಮಸೂದೆಗಳ ಭಾಗಗಳಾಗಿವೆ ಎನ್ನುತ್ತದೆ ಸರ್ಕಾರದ ಮೂಲಗಳು. 

ರೈತರು ಕೇಂದ್ರ ಸರ್ಕಾರ ತಂದಿರುವ ರೈತರು (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ, 2020 ರ ಒಪ್ಪಂದ; ರೈತರು ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, 2020; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ 2020 ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com