70 ಲಕ್ಷ ಭಾರತೀಯ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ದಾರರ ವಿವರ ಡಾರ್ಕ್ ವೆಬ್ ನಲ್ಲಿ ಸೋರಿಕೆ!

ಆತಂಕಕಾರಿ ಬೆಳವಣಿಗೆಯೊಂದರಲ್ಲಿ ಫೋನ್ ನಂಬರ್, ಇ-ಮೇಲ್ ಸೇರಿದಂತೆ ಭಾರತದ 70 ಲಕ್ಷ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ದಾರರ  ವೈಯಕ್ತಿಕ ವಿವರಗಳು ಡಾರ್ಕ್ ವೆಬ್ ನಲ್ಲಿ ಸೋರಿಕೆಯಾಗಿದೆ.
70 ಲಕ್ಷ ಭಾರತೀಯ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ದಾರರ ವಿವರ ಡಾರ್ಕ್ ವೆಬ್ ನಲ್ಲಿ ಸೋರಿಕೆ!
70 ಲಕ್ಷ ಭಾರತೀಯ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ದಾರರ ವಿವರ ಡಾರ್ಕ್ ವೆಬ್ ನಲ್ಲಿ ಸೋರಿಕೆ!

ನವದೆಹಲಿ: ಆತಂಕಕಾರಿ ಬೆಳವಣಿಗೆಯೊಂದರಲ್ಲಿ ಫೋನ್ ನಂಬರ್, ಇ-ಮೇಲ್ ಸೇರಿದಂತೆ ಭಾರತದ 70 ಲಕ್ಷ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ದಾರರ  ವೈಯಕ್ತಿಕ ವಿವರಗಳು ಡಾರ್ಕ್ ವೆಬ್ ನಲ್ಲಿ ಸೋರಿಕೆಯಾಗಿದೆ.

ಅಂತರ್ಜಾಲ ಭದ್ರತಾ ಸಂಶೋಧಕರೊಬ್ಬರು ಈ ಬಗ್ಗೆ ಎಚ್ಚರಿಸಿದ್ದು, ವ್ಯಕ್ತಿಗಳ ಹೆಸರು, ಉದ್ಯೋಗ ಮಾಡುತ್ತಿರುವ ಸಂಸ್ಥೆ, ವಾರ್ಷಿಕ ಆದಾಯದ ವಿವರಗಳೂ ಸೋರಿಕೆಯಾಗುತ್ತಿವೆ ಎಂದು ಸಂಶೋಧಕ ರಾಜಶೇಖರ್ ರಾಜಹರಿಯಾ ಹೇಳಿದ್ದಾರೆ.

ಅಂದಾಜು 2 ಜಿಬಿಯಷ್ಟು ಡಾಟಾ ಬೇಸ್ ಸೋರಿಕೆಯಾಗಿದ್ದು,  ಬಳಕೆದಾರರ ಖಾತೆಯ ಮಾದರಿ, ಮೊಬೈಲ್ ಅಲರ್ಟ್ ಹೊಂದಿದ್ದಾರೆಯೋ ಇಲ್ಲವೋ ಎಂಬಂತಹ ಸೂಕ್ಷ್ಮ ಮಾಹಿತಿಗಳೂ ಬಹಿರಂಗಗೊಂಡಿದೆ. 2010-2019 ರ ನಡುವಿನ ವಿವರಗಳು ಇದಾಗಿದ್ದು ಹ್ಯಾಕರ್ ಗಳು ಹಾಗೂ ಸ್ಕ್ಯಾಮರ್ ಗಳ ಕೈಸೇರಿದೆ. 

ಆರ್ಥಿಕ ಡೇಟಾ ಇದಾಗಿದ್ದು, ಹ್ಯಾಕರ್ ಗಳಿಗೆ ಇವು ಬಹಳ ಮುಖ್ಯದ್ದಾಗಿದೆ ಎಂದು ಸೋರಿಕೆಯಾಗಿರುವ ಕೆಲವು ಡಾಟಾಗಳ ಚಿತ್ರಗಳನ್ನು ರಾಜಶೇಖರ್ ಬಹಿರಂಗಪಡಿಸಿದ್ದಾರೆ.

ಆದರೆ ಸೋರಿಕೆಯಾಗಿದ್ದರೂ ಸಹ ಕಾರ್ಡ್ ನಂಬರ್ ಗಳು ಲಭ್ಯವಾಗಿಲ್ಲದೇ ಇರುವುದಷ್ಟೇ ಸಮಾಧಾನಕರ ಸಂಗತಿ ಎನ್ನುತ್ತಾರೆ ಸಂಶೋಧಕ ರಾಜಶೇಖರ್, ಬ್ಯಾಂಕ್ ಗಳಿಂದ ಕ್ರೆಡಿಟ್/ ಡೆಬಿಟ್ ಕಾರ್ಡ್ ಮಾರಾಟ ಮಾಡುವುದಕ್ಕೆ ಗುತ್ತಿಗೆ ಪಡೆದಿರುವ ಮೂರನೇ ವ್ಯಕ್ತಿ ಸೇವಾ ಪೂರೈಕೆದಾರರಿಂದ ಸೋರಿಕೆಯಾಗಿರುವ ಸಾಧ್ಯತೆ ಇದ್ದು, 5 ಲಕ್ಷ ಮಂದಿಯ ಪ್ಯಾನ್ ನಂಬರ್ ಕೂಡಾ ಸೋರಿಕೆಯಾಗಿದೆ ಎಂದು ಅಂತರ್ಜಾಲ ಭದ್ರತಾ ಸಂಶೋಧಕರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com