ಅಟಲ್ ಟನಲ್ ಗೆ ಭೇಟಿ ನೀಡುವಂತೆ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉತ್ತೇಜನ

ಹಿಮಾಚಲ ಪ್ರದೇಶದ ರೋಹ್ಟಾಂಗ್ ನಲ್ಲಿ 9.02 ಕಿಲೋ ಮೀಟರ್ ಉದ್ದದ ವಿಶ್ವದ ಅತಿ ಉದ್ದದ ಅಟಲ್ ಟನಲ್ ಗೆ ಭೇಟಿ ನೀಡಲು ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಉತ್ತೇಜಿಸಲು ಶೈಕ್ಷಣಿಕ ಸಂಸ್ಥೆಗಳಿಗೆ ಸಲಹೆ ನೀಡಲಾಗಿದೆ.

Published: 09th December 2020 01:30 PM  |   Last Updated: 09th December 2020 02:13 PM   |  A+A-


Engineering students told to visit Atal Tunel

ಅಟಲ್ ಟನಲ್ ಗೆ ಭೇಟಿ ನೀಡಲು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉತ್ತೇಜನ

Posted By : Srinivas Rao BV
Source : The New Indian Express

ನವದೆಹಲಿ: ಹಿಮಾಚಲ ಪ್ರದೇಶದ ರೋಹ್ಟಾಂಗ್ ನಲ್ಲಿ 9.02 ಕಿಲೋ ಮೀಟರ್ ಉದ್ದದ ವಿಶ್ವದ ಅತಿ ಉದ್ದದ ಅಟಲ್ ಟನಲ್ ಗೆ ಭೇಟಿ ನೀಡಲು ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಉತ್ತೇಜಿಸಲು ಶೈಕ್ಷಣಿಕ ಸಂಸ್ಥೆಗಳಿಗೆ ಸಲಹೆ ನೀಡಲಾಗಿದೆ.

ಈ ಸುರಂಗ ಮಾರ್ಗದಿಂದಾಗಿ ಪ್ರಯಾಣಿಕರಿಗೆ ಮನಾಲಿ ಮತ್ತು ಲೇಹ್ ಮಧ್ಯೆ 46 ಕಿಲೋ ಮೀಟರ್ ದೂರದ 5 ಗಂಟೆಗಳ ಪ್ರಯಾಣ ಕಡಿತವಾಗಲಿದ್ದು, ಇದನ್ನು ಪ್ರಧಾನಿ ನರೇಂದ್ರ ಮೋದಿ ಅ.3 ರಂದು ಲೋಕಾರ್ಪಣೆಗೊಳಿಸಿದ್ದರು.

ಈ ಸುರಂಗವನ್ನು ಅತ್ಯಂತ ಕಷ್ಟಕರ ಹವಾಮಾನ ಪರಿಸ್ಥಿತಿಗಳಲ್ಲಿ ನಿರ್ಮಾಣ ಮಾಡಲಾಗಿದೆ.  ಗಡಿ ರಸ್ತೆಗಳ ನಿರ್ಮಾಣ ಸಂಸ್ಥೆಯ ತಂತ್ರಜ್ಞಾನವನ್ನು ಇಲ್ಲಿ ಬಳಸಲಾಗಿದ್ದು ಸೆಮಿ-ಟ್ರಾನ್ಸ್ವರ್ಸ್ ವೆಂಟಿಲೇಶನ್, ಎಸ್ ಸಿಎಡಿಎ ನಿಯಂತ್ರಿತ ಫೈರ್ ಫೈಟಿಂಗ್ ಹಾಗೂ ಇಲ್ಯುಮಿನೇಷನ್ ಹಾಗೂ ಮಾನಿಟರಿಂಗ್ ವ್ಯವಸ್ಥೆಯನ್ನು ಹೊಂದಿದ್ದು ಈ ಸುರಂಗ ಮಾರ್ಗ ಇಂಜಿನಿಯರಿಂಗ್ ಅದ್ಭುತ ಎಂದೇ ಖ್ಯಾತಿ ಪಡೆದಿದೆ.

ಉದ್ಘಾಟನೆಯ ವೇಳೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ವಿನ್ಯಾಸ, ಪ್ಲಾನಿಂಗ್, ನಿರ್ಮಾಣ ಹಾಗೂ ಯೋಜನಾ ನಿರ್ವಹಣೆಯನ್ನೊಳಗೊಂಡ ತಾಂತ್ರಿಕ ಅದ್ಭುತದ ಜ್ಞಾನವನ್ನು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪ್ರಸಾರ ಮಾಡುವ ಇಚ್ಛೆ ಹೊಂದಿದ್ದರು. 

Stay up to date on all the latest ರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp