ಅರ್ಜುನ ಪ್ರಶಸ್ತಿ ಪುರಸ್ಕೃತ ಖಜನ್ ಸಿಂಗ್ ರಿಂದ ಅತ್ಯಾಚಾರ, ಸೆಕ್ಸ್ ದಂಧೆ: ಸಿಆರ್ ಪಿಎಫ್ ಮಹಿಳಾ ಕುಸ್ತಿಪಟು ಆರೋಪ

ಅರೆಸೇನಾಪಡೆಯ ಮುಖ್ಯ ಕ್ರೀಡಾ ಅಧಿಕಾರಿ ಹಾಗೂ ಅರ್ಜುನ ಪ್ರಶಸ್ತಿ ಪುರಸ್ಕೃತ ಖಜನ್ ಸಿಂಗ್ ಮತ್ತು ಕೋಚ್ ಸುರ್ಜಿತ್ ಸಿಂಗ್ ಅವರು ಕಳೆದ ಮೂರು ವರ್ಷಗಳಿಂದ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಅರೆಸೇನಾಪಡೆಯ ಮುಖ್ಯ ಕ್ರೀಡಾ ಅಧಿಕಾರಿ ಹಾಗೂ ಅರ್ಜುನ ಪ್ರಶಸ್ತಿ ಪುರಸ್ಕೃತ ಖಜನ್ ಸಿಂಗ್ ಮತ್ತು ಕೋಚ್ ಸುರ್ಜಿತ್ ಸಿಂಗ್ ಅವರು ಕಳೆದ ಮೂರು ವರ್ಷಗಳಿಂದ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್ ಪಿಎಫ್)ಯ 30 ವರ್ಷದ ಮಹಿಳಾ ಕುಸ್ತಿಪಟು ಗಂಭೀರ ಆರೋಪ ಮಾಡಿದ್ದಾರೆ.

ಮಹಿಳಾ ಕುಸ್ತಿಪಟು ದೂರಿನ ಆಧಾರದ ಮೇಲೆ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಖಜನ್ ಸಿಂಗ್ ಮತ್ತು ಸುರ್ಜಿತ್ ಸಿಂಗ್ ಅವರು ಬಲವಂತವಾಗಿ ಸೆಕ್ಸ್ ದಂಧೆ ನಡೆಸುತ್ತಿದ್ದಾರೆ ಮತ್ತು ಅವರಿಗೆ ಹಲವು ಸಾಥ್ ನೀಡುತ್ತಿದ್ದಾರೆ ಎಂದು ಸಹಚರರು" ಇದ್ದಾರೆ ಎಂದು ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.

1986ರ ಸಿಯೋಲ್ ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಖಜನ್ ಸಿಂಗ್ ಅವರು ಸಿಆರ್ ಪಿಎಫ್ ನಲ್ಲಿ ಡಿಐಜಿ ಶ್ರೇಣಿಯ ಅಧಿಕಾರಿಯಾಗಿದ್ದು, ತಮ್ಮ ವಿರುದ್ಧದ ಅತ್ಯಾಚಾರ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.

"ಈ ಆರೋಪಗಳು ಸಂಪೂರ್ಣವಾಗಿ ಸುಳ್ಳು. ನನ್ನ ಇಮೇಜ್ ಅನ್ನು ಹಾಳುಮಾಡಲು ಈ ರೀತಿ ಆರೋಪ ಮಾಡಲಾಗಿದೆ" ಎಂದು ಖಜನ್ ಹೇಳಿದ್ದಾರೆ.

ಇನ್ನು ಕೋಚ್ ಸುರ್ಜಿತ್ ಸಿಂಗ್ ಅವರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಈ ಸಂಬಂಧ ಡಿಸೆಂಬರ್ 3 ರಂದು ಬಾಬಾ ಹರಿದಾಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ಈ ಇಬ್ಬರು ಮಹಿಳಾ ಕಾನ್‌ಸ್ಟೆಬಲ್‌ಗಳಿಗೆ ಲೈಂಗಿಕ ಕಿರುಕುಳ ನೀಡುತ್ತಾರೆ ಎಂದು 2010ರಲ್ಲಿ ಸಿಆರ್ ಪಿಎಫ್ ಸೇರ್ಪಡೆಗೊಂಡ ಮಹಿಳಾ ಕುಸ್ತಿಪಟು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com