ಮದುವೆ ದಿನವೇ ವಧುವಿಗೆ ಕೊರೋನಾ ದೃಢ: ಕೋವಿಡ್ ಕೇರ್ ಸೆಂಟರ್ ನಲ್ಲಿ ಪಿಪಿಇ ಕಿಟ್ ಧರಿಸಿ ಮದುವೆಯಾದ ನವಜೋಡಿ
ಮದುವೆಯ ದಿನದಂದೇ ವಧುವಿಗೆ ಕೋವಿಡ್ ಸೋಂಕು ಪತ್ತೆಯಾದ ಹಿನ್ನೆಲೆ ದಂಪತಿಗಳು ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ) ಕಿಟ್ ಧರಿಸಿ ಮದುವೆಯಾಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
Published: 10th December 2020 07:32 PM | Last Updated: 11th December 2020 06:22 PM | A+A A-

ಪಿಪಿಇ ಕಿಟ್ ಕಿಟ್ ಧರಿಸಿ ಮದುವೆಯಾದ ನವಜೋಡಿ
ಮದುವೆಯ ದಿನದಂದೇ ವಧುವಿಗೆ ಕೋವಿಡ್ ಸೋಂಕು ಪತ್ತೆಯಾದ ಹಿನ್ನೆಲೆ ದಂಪತಿಗಳು ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ) ಕಿಟ್ ಧರಿಸಿ ಮದುವೆಯಾಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಭಾನುವಾರ ಶಹಬಾದ್‌ನ ಬಾರಾದಲ್ಲಿರುವ ಕೆಲ್ವಾರಾ ಕೋವಿಡ್ ಕೇಂದ್ರದಲ್ಲಿ ನಡೆದ ವಿವಾಹದಲ್ಲಿ ನವ ಜೋಡಿ ಪಿಪಿಇ ಕಿಟ್ ಧರಿಸಿ ಮದುವೆಯಾಗಿದ್ದಾರೆ.
ಸರ್ಕಾರದ ಕೋವಿಡ್ ನಿಯಮಾವಳಿ ಅನುಸರಿಸಿ ಮದುವೆ ಸಮಾರಂಭವನ್ನು ನಡೆಸಲಾಯಿತು.
ವೀಡಿಯೊದಲ್ಲಿ, ವಿವಾಹದ ಎಲ್ಲಾ ಆಚರಣೆಗಳನ್ನು ಅನುಸರಿಸುವಾಗಲೂ ನವಜೋಡಿ ಹಾಗೂ ಅವರಿಗೆ ಮಾರ್ಗದರ್ಶನ ಮಾಡುತ್ತಿರುವ ಪುರೋಹಿತರೂ ಸಹ ಪಿಪಿಇ ಕಿಟ್ ಧರಿಸಿರುವುದನ್ನು ಕಾಣಬಹುದು.
ವರನು ಕೈಗವಸುಗಳೊಂದಿಗೆ ಪಿಪಿಇ ಕಿಟ್ ನ ಮೇಲೆ ಸಾಂಪ್ರದಾಯಿಕ ಪೇಟ ಧರಿಸಿರುವುದು ಕಂಡುಬಂದಿದೆ ಮತ್ತು ವಧು ವಿಧಿವಿಧಾನಗಳನ್ನು ಮಾಡುವಾಗ ಮುಖದ ಮಾಸ್ಕ್ ಹಾಗೂ ಕೈಗವಸುಗಳನ್ನು ಧರಿಸಿದ್ದಾಳೆ.
ನವದಂಪತಿಗಳ ಈ ವಿಶೇಷ ಮದುವೆ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ.