ವೈದ್ಯರ ಮುಷ್ಕರಕ್ಕೆ ಏಮ್ಸ್, ಇತರೆ ಆಸ್ಪತ್ರೆಗಳಿಂದ ಬೆಂಬಲ, ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ

ಆಯುರ್ವೇದ ವೈದ್ಯರಿಗೆ ಶಸ್ತ್ರಚಿಕಿತ್ಸೆ ಮಾಡಲು ಅನುಮತಿ ನೀಡಿರುವ ಕೇಂದ್ರ ಸರ್ಕಾರದ ವಿರುದ್ಧ ಶುಕ್ರವಾರ ಭಾರತೀಯ ವೈದ್ಯಕೀಯ ಸಂಘ ಕರೆ ನೀಡಿರುವ ಮುಷ್ಕರಕ್ಕೆ ದೆಹಲಿ ಪ್ರತಿಷ್ಠಿತ ಏಮ್ಸ್ ಹಾಗೂ ಇತರೆ ಆಸ್ಪತ್ರೆಗಳು ಸಹ ಬೆಂಬಲ ನೀಡಿದ್ದು, ವೈದ್ಯರು ಕಪ್ಪು ಪಟ್ಟಿ ಧರಿಸಿ ಕಾರ್ಯನಿರ್ವಹಿಸುವ ಮೂಲಕ ಪ್ರತಿಭಟಿಸಿದರು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಆಯುರ್ವೇದ ವೈದ್ಯರಿಗೆ ಶಸ್ತ್ರಚಿಕಿತ್ಸೆ ಮಾಡಲು ಅನುಮತಿ ನೀಡಿರುವ ಕೇಂದ್ರ ಸರ್ಕಾರದ ವಿರುದ್ಧ ಶುಕ್ರವಾರ ಭಾರತೀಯ ವೈದ್ಯಕೀಯ ಸಂಘ ಕರೆ ನೀಡಿರುವ ಮುಷ್ಕರಕ್ಕೆ ದೆಹಲಿ ಪ್ರತಿಷ್ಠಿತ ಏಮ್ಸ್ ಹಾಗೂ ಇತರೆ ಆಸ್ಪತ್ರೆಗಳು ಸಹ ಬೆಂಬಲ ನೀಡಿದ್ದು, ವೈದ್ಯರು ಕಪ್ಪು ಪಟ್ಟಿ ಧರಿಸಿ ಕಾರ್ಯನಿರ್ವಹಿಸುವ ಮೂಲಕ ಪ್ರತಿಭಟಿಸಿದರು.

ಏಮ್ಸ್ ನ ವೈದ್ಯರು ಮತ್ತು ಎಲ್ಎನ್ ಜೆಪಿ ಆಸ್ಪತ್ರೆ, ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಡಿಡಿಯು ಆಸ್ಪತ್ರೆ, ಜಿಟಿಬಿ ಆಸ್ಪತ್ರೆ, ಬಿಎಸ್ಎ ಆಸ್ಪತ್ರೆ, ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆ ಮತ್ತು ಸರ್ಕಾರ ನಡೆಸುತ್ತಿರುವ ಹಿಂದೂ ರಾವ್ ಆಸ್ಪತ್ರೆ ಸೇರಿದಂತೆ ದೆಹಲಿಯ ಹಲವು ಆಸ್ಪತ್ರೆಗಳ ವೈದ್ಯರು ನಮ್ಮ ತೋಳಿಗೆ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

"ಸರ್ಕಾರದ ಈ ಕ್ರಮವು ಅತಿರೇಕದ ಚಮತ್ಕಾರವನ್ನು ಪ್ರೋತ್ಸಾಹಿಸುವಂತಿದೆ. ಆದರೆ ಇದು ಸಾರ್ವಜನಿಕರ ಸುರಕ್ಷತೆಯನ್ನು ಹಾಳು ಮಾಡುತ್ತದೆ. ಈ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ತಕ್ಷಣ ಹಿಂಪಡೆಯಬೇಕು ಎಂದು ನಾವು ಒತ್ತಾಯಿಸುತ್ತೇವೆ" ಎಂದು ದೆಹಲಿಯ ಏಮ್ಸ್ ಆಸ್ಪತ್ರೆಯ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತೀಯ ವೈದ್ಯ ಸಂಘ ಕರೆ ನೀಡಿರುವ ಮುಷ್ಕರದ  ಹಿನ್ನೆಲೆಯಲ್ಲಿ ಇಂದು ದೇಶದ ಬಹುತೇಕ ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ಆಗಿದ್ದು, ಸಂಜೆ 6ರ ನಂತರ ಆರಂಭವಾಗಲಿವೆ. ಆದರೆ ತುರ್ತು ಸೇವೆಗಳು ಹಾಗೂ ಕೋವಿಡ್-19 ಸೇವೆಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com