ಸಿಬಿಐ ವಶದಲ್ಲಿದ್ದ 400 ಕೆ.ಜಿ. ಪೈಕಿ 100 ಕೆ.ಜಿ. ಚಿನ್ನ ಮಾಯ!: ತನಿಖಾ ಸಂಸ್ಥೆ ವಿರುದ್ಧವೇ ಕಳ್ಳತನದ ಆರೋಪ?

ಕಾನೂನಿನ ಕಣ್ಣೆದುರೇ ಕಳ್ಳತನ, ಅಪರಾಧಗಳು ನಡೆಯುವು ಹೊಸತೇನಲ್ಲ. ಆದರೆ 400 ಕೆ.ಜಿ ಪೈಕಿ 100 ಕೆ.ಜಿ ಚಿನ್ನದ ಗಟ್ಟಿ, ಆಭರಣಗಳು ಮಾಯವಾಗಿದೆ. 
ಸಿಬಿಐ ವಶದಲ್ಲಿದ್ದ 400 ಕೆ.ಜಿ ಪೈಕಿ 100 ಕೆ.ಜಿ ಚಿನ್ನ ಮಾಯ!: ತನಿಖಾ ಸಂಸ್ಥೆ ವಿರುದ್ಧವೇ ಕಳ್ಳತನದ ಆರೋಪ!?
ಸಿಬಿಐ ವಶದಲ್ಲಿದ್ದ 400 ಕೆ.ಜಿ ಪೈಕಿ 100 ಕೆ.ಜಿ ಚಿನ್ನ ಮಾಯ!: ತನಿಖಾ ಸಂಸ್ಥೆ ವಿರುದ್ಧವೇ ಕಳ್ಳತನದ ಆರೋಪ!?

ಚೆನ್ನೈ: ಕಾನೂನಿನ ಕಣ್ಣೆದುರೇ ಕಳ್ಳತನ, ಅಪರಾಧಗಳು ನಡೆಯುವು ಹೊಸತೇನಲ್ಲ. ಆದರೆ 400 ಕೆ.ಜಿ ಪೈಕಿ 100 ಕೆ.ಜಿ ಚಿನ್ನದ ಗಟ್ಟಿ, ಆಭರಣಗಳು ಮಾಯವಾಗಿದೆ. 

ಈ ಸಂಬಂಧ ಸಿಬಿ-ಸಿಐಡಿ ತನಿಖೆಗೆ ಮದ್ರಾಸ್ ಹೈಕೋರ್ಟ್ ತನಿಖೆಗೆ ಆದೇಶ ನೀಡಿದೆ. 2012 ರಲ್ಲಿ ಖಾಸಗಿ ಆಮದುದಾರರಿಂದ ಸಿಬಿಐ ವಶಕ್ಕೆ ಪಡೆದಿದ್ದ 400 ಕೆ.ಜಿಯಷ್ಟು ಚಿನ್ನವನ್ನು ಇರಿಸಲಾಗಿದ್ದ ನೆಲಮಾಳಿಗೆಯನ್ನು ತೆರೆದಾಗ ಈ "ಕಳ್ಳತನ" ಬೆಳಕಿಗೆ ಬಂದಿದೆ. 

ಘಟನೆಗೆ ಸಂಬಂಧಿಸಿದಂತೆ ಸಿಬಿಐ ವಿರುದ್ಧವೇ ಏಕೆ ಕಳ್ಳತನದ ಆರೋಪದಡಿ ಪ್ರಕರಣ ದಾಖಲಿಸಬಾರದು ಎಂದು ಮದ್ರಾಸ್ ಹೈಕೋರ್ಟ್ ಈ ಸಂಬಂಧ ಪ್ರಶ್ನಿಸಿದೆ. ಆದರೆ ಸಿಬಿಐ ತನ್ನ ವಿರುದ್ಧ ಸ್ಥಳೀಯ ಪೊಲೀಸರು ತನಿಖೆ ನಡೆಸಿದರೆ ತನ್ನ ತನಿಖಾ ಸಂಸ್ಥೆಯ ಘನತೆಗೆ ಧಕ್ಕೆಯಾಗುತ್ತದೆ ಎಂದು ಕೋರ್ಟ್ ಮುಂದೆ ವಾದ ಮಂಡಿಸಿತ್ತು. ಆದರೆ ನ್ಯಾ.ಪಿ.ಎನ್ ಪ್ರಕಾಶ್ "ಸಿಬಿಐ ಆದರೆ ಅದಕ್ಕೇನು ಕೋಡಿದೆಯೇ? ಕಾನೂನಿನಲ್ಲಿ ಈ ರೀತಿಯ ವಿನಾಯ್ತಿಗೆ ಅವಕಾಶವಿಲ್ಲ ಕಾನೂನು ಎಲ್ಲರಿಗೂ ಒಂದೇ ಎಂದು ಹೇಳಿದ್ದಾರೆ. 

ಚಿನ್ನದ ಪ್ರಮಾಣ ಕಡಿಮೆಯಾಗಿರುವುದಕ್ಕೂ ಸಮರ್ಥನೆ ನೀಡಿರುವ ಸಿಬಿಐ, ಚಿನ್ನವನ್ನು ಲನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್ ನ ಲಿಕ್ವಿಡೇಟರ್ ಗೆ ಹಸ್ತಾಂತರಿಸುವಾಗ ಪ್ರತ್ಯೇಕವಾಗಿ ತೂಕ ಮಾಡಲಾಗಿದ್ದು, ಅದು ಕಾರಣ ಚಿನ್ನದ ಪ್ರಮಾಣ 296 ಕೆ.ಜಿಯಷ್ಟೇ ಪತ್ತೆಯಾಗಿ ಕಡಿಮೆಯಾಗಿದೆ ಎಂದು ಹೇಳಿತ್ತು. 

ಈ ವಾದವನ್ನು ಆಲಿಸಿದ ಸಿಬಿಐ ಕೋರ್ಟ್ ವ್ಯತ್ಯಾಸ ಕಂಡುಬರುತ್ತಿರುವುದು ಕೆಲವೇ ಗ್ರಾಮ್ ಗಳಷ್ಟು ಅಲ್ಲ. ಬರೊಬ್ಬರಿ 1 ಲಕ್ಷ ಗ್ರಾಮ್ ನಷ್ಟು ಕಾಣೆಯಾಗಿದೆ, 103.864 ಕೆ.ಜಿಯಷ್ಟು ಚಿನ್ನ ಏನಾಯಿತು ಎಂಬುದಕ್ಕೆ ಸಿಬಿಐ ಉತ್ತರವಿಲ್ಲ ಎಂದು ಹೇಳಿದೆ.

ಎಂಎಂಟಿಸಿ ಅಧಿಕಾರಿಗಳು ಹಾಗೂ ಸುರಾನಾ ಕಾರ್ಪೊರೇಷನ್ ಲಿಮಿಟೆಡ್ ವಿರುದ್ಧ ದಾಖಲಾಗಿದ್ದ ಭ್ರಷ್ಟಾಚಾರದ ಆರೋಪದಲ್ಲಿ 2012 ರಲ್ಲಿ ಚೆನ್ನೈ ನ ಸುರಾನ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ನಡೆಸಿದ್ದ ಶೋಧಕಾರ್ಯದಲ್ಲಿ 400 ಕೆ.ಜಿ ಚಿನ್ನ ಪತ್ತೆಯಾಗಿತ್ತು. ಎಂಎಂಟಿಸಿ ಸುರಾನ ಸಂಸ್ಥೆಗೆ ಚಿನ್ನ-ಬೆಳ್ಳಿಯನ್ನು ಆಮದು ಮಾಡಿಕೊಳ್ಳುವುದಕ್ಕೆ ಅಕ್ರಮವಾಗಿ ಬೆಂಬಲ ನೀಡಿತ್ತು ಎಂಬ ಆರೋಪವೂ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com