ಮತದಾರರಿಗೆ ಡಿಜಿಟಲ್ ಗುರುತಿನ ಚೀಟಿ ನೀಡಲು ಚುನಾವಣಾ ಆಯೋಗ ಗಂಭೀರ ಚಿಂತನೆ

ಶೀಘ್ರದಲ್ಲೇ ಭಾವಚಿತ್ರ ಸಹಿತ ಮತದಾರರ ಗುರುತಿನ ಚೀಟಿ ನೀಡುವ ಕುರಿತು ಕೇಂದ್ರ ಚುನಾವಣಾ ಆಯೋಗ ಗಂಭೀರ ಚಿಂತನೆಯಲ್ಲಿ ತೊಡಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಶೀಘ್ರದಲ್ಲೇ ಭಾವಚಿತ್ರ ಸಹಿತ ಮತದಾರರ ಗುರುತಿನ ಚೀಟಿ ನೀಡುವ ಕುರಿತು ಕೇಂದ್ರ ಚುನಾವಣಾ ಆಯೋಗ ಗಂಭೀರ ಚಿಂತನೆಯಲ್ಲಿ ತೊಡಗಿದೆ.

ಹೌದು..  ಮತದಾರರಿಗೆ ಇನ್ನು ಮುಂದೆ ಡಿಜಿಟಲ್‌ ರೂಪದಲ್ಲಿ ಭಾವಚಿತ್ರವುಳ್ಳ ಚುನಾವಣಾ ಗುರುತಿನ ಚೀಟಿ ನೀಡಲು ಚುನಾವಣಾ ಆಯೋಗ ಚಿಂತನೆ ನಡೆಸಿದ್ದು, ಈ ಸಂಬಂಧ ಸಭೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಆಯೋಗದ ಮೂಲಗಳ ಪ್ರಕಾರ ಡಿಜಿಟಲ್ ಗುರುತಿನ ಚೀಟಿ  ಕುರಿತು ಚರ್ಚೆಗಳು ನಡೆಯುತ್ತಿವೆ. ಆದರೆ ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

‘ಡಿಜಿಟಲ್‌ ಗುರುತಿನ ಚೀಟಿ ಬಗ್ಗೆ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳು, ಸಾರ್ವಜನಿಕರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಸಲಹೆಗಳು ಬಂದಿವೆ. ಇದನ್ನು ಯಾವ ರೀತಿ ಜಾರಿಗೊಳಿಸುವ ಎನ್ನುವ ಬಗ್ಗೆ ಸಮಾಲೋಚನೆಗಳು ನಡೆಯುತ್ತಿವೆ. ಡಿಜಿಟಲ್‌ ಗುರುತಿನ ಚೀಟಿ  ಮೊಬೈಲ್‌, ವೆಬ್‌ಸೈಟ್‌, ಇ-ಮೇಲ್‌ನಲ್ಲಿ ದೊರೆಯಬಹುದು. ಸುಲಭವಾಗಿ ಮತ್ತು ತ್ವರಿತವಾಗಿ ಗುರುತಿನ ಚೀಟಿ ಲಭ್ಯವಾಗಬೇಕು ಎನ್ನುವುದು ಆಯೋಗದ ಪ್ರಮುಖ ಉದ್ದೇಶ. ಡಿಜಿಟಲ್‌ ರೂಪದಲ್ಲಿ ಮತದಾರರ ಭಾವಚಿತ್ರವೂ ಸ್ಪಷ್ಟವಾಗಿರುತ್ತದೆ. ಇದರಿಂದ ಮತದಾರರನ್ನು ಸುಲಭವಾಗಿ  ಗುರುತಿಸಬಹುದು ಎಂದು ಹೇಳಿದ್ದಾರೆ.

ಇದೇ ವೇಳೆ ಗುರುತಿನ ಚೀಟಿಯ ದುರ್ಬಳಕೆ ಮತ್ತು ಗುರುತಿನ ಚೀಟಿಯ ಭದ್ರತೆ ಕುರಿತು ಮಾತನಾಡಿದ ಅಧಿಕಾರಿಗಳು 'ತಂತ್ರಜ್ಞಾನವು ದುರುಪಯೋಗವಾಗದಂತೆ ಎಚ್ಚರ ವಹಿಸಬೇಕಾಗಿದೆ. ಹೀಗಾಗಿ, ಗುರುತಿನ ಚೀಟಿಯೂ ಸುರಕ್ಷಿತವಾಗಿರಬೇಕು. ಹೀಗಾಗಿ ಹಲವು ರೀತಿಯ ಮುನ್ನೆಚ್ಚರಿಕೆ  ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಇನ್ನು ಈಗಾಗಲೇ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಡ್ರೈವಿಂಗ್ ಲೈಸೆನ್ಸ್ ಗಳು ಡಿಜಿಟಲ್ ಮಾದರಿಯಲ್ಲಿ ಲಭ್ಯವಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com