ಗಣರಾಜ್ಯೋತ್ಸವ ದಿನಾಚರಣೆ: ಉತ್ತರ ಪ್ರದೇಶದಿಂದ ಅಯೋಧ್ಯ ರಾಮ ಮಂದಿರದ ಸ್ತಬ್ಧ ಚಿತ್ರ ಪ್ರದರ್ಶನ

ಭಾರತ 72 ನೇ ಗಣರಾಜ್ಯೋತ್ಸವ ದಿನಾಚರಣೆಗೆ ಸಿದ್ಧತೆ ನಡೆಸುತ್ತಿದೆ. ರಾಜ್ಯಗಳಿಂದ ಪ್ರದರ್ಶಿಸಲ್ಪಡುವ ಸ್ತಬ್ಧ ಚಿತ್ರಗಳೂ ತಯಾರಾಗುತ್ತಿದ್ದು, ಉತ್ತರ ಪ್ರದೇಶ ರಾಜ್ಯ ಅಯೋಧ್ಯೆ ಶ್ರೀರಾಮ ಮಂದಿರದ ಸ್ತಬ್ಧ ಚಿತ್ರವನ್ನು ಪ್ರದರ್ಶಿಸಲಿದೆ. 
ಅಯೋಧ್ಯೆ ರಾಮ ಮಂದಿರದ ಪ್ರತಿಕೃತಿ
ಅಯೋಧ್ಯೆ ರಾಮ ಮಂದಿರದ ಪ್ರತಿಕೃತಿ

ಲಖನೌ: ಭಾರತ 72 ನೇ ಗಣರಾಜ್ಯೋತ್ಸವ ದಿನಾಚರಣೆಗೆ ಸಿದ್ಧತೆ ನಡೆಸುತ್ತಿದೆ. ರಾಜ್ಯಗಳಿಂದ ಪ್ರದರ್ಶಿಸಲ್ಪಡುವ ಸ್ತಬ್ಧ ಚಿತ್ರಗಳೂ ತಯಾರಾಗುತ್ತಿದ್ದು, ಉತ್ತರ ಪ್ರದೇಶ ರಾಜ್ಯ ಅಯೋಧ್ಯೆ ಶ್ರೀರಾಮ ಮಂದಿರದ ಸ್ತಬ್ಧ ಚಿತ್ರವನ್ನು ಪ್ರದರ್ಶಿಸಲಿದೆ. 

ಅಯೋಧ್ಯೆಯ ಮಂದಿರವಷ್ಟೇ ಅಲ್ಲದೇ ಅಲ್ಲಿನ ಹಾಗೂ ದೇವಾಲಯದ ಸಂಸ್ಕೃತಿ-ಸಂಪ್ರದಾಯಗಳನ್ನೂ ಸ್ತಬ್ಧ ಚಿತ್ರದಲ್ಲಿ ವಿವರಿಸಲಾಗುತ್ತದೆ.

ಈ ಬಗ್ಗೆ ಸರ್ಕಾರದಿಂದ ಅಧಿಕೃತ ಮಾಹಿತಿ ಲಭ್ಯವಾಗಿದ್ದು, ಅಯೋಧ್ಯ: ಉತ್ತರ ಪ್ರದೇಶದ ಸಾಂಸ್ಕೃತಿಕ ಪರಂಪರೆ ಎಂಬ ಥೀಮ್ ನಡಿಯಲ್ಲಿ ಟ್ಯಾಬ್ಲೋ ಪ್ರದರ್ಶನವಾಗಲಿದೆ. ಅಯೋಧ್ಯೆಯ ದೀಪೋತ್ಸವವೂ ಈ ಸ್ತಬ್ಧ ಚಿತ್ರದಲ್ಲಿ ಕಾಣಬಹುದಾಗಿದೆ. ಗಣಾರಾಜ್ಯೋತ್ಸವದ ಪರೇಡ್ ಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಇದಕ್ಕೆ ಅನುಮೋದನೆ ಸಹ ಲಭಿಸಿದೆ.

ಒಡಿಶಾದ ಟ್ಯಾಬ್ಲೋ ಜೊತೆಗೆ ಉತ್ತರ ಪ್ರದೇಶದ ಟ್ಯಾಬ್ಲೋ ಕಾಣಸಿಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com