ಮುಂದುವರೆದ ರೈತರ ಪ್ರತಿಭಟನೆ: ಗೃಹ ಸಚಿವ ಅಮಿತ್ ಶಾ- ಕೃಷಿ ಸಚಿವ ತೋಮರ್ ಮಹತ್ವದ ಸಭೆ!
ಕೃಷಿ ಕಾಯ್ದೆಯನ್ನು ವಿರೋಧಿಸಿ ನಡೆಯುತ್ತಿರುವ ರೈತರ ಪ್ರತಿಭಟನೆ ಮುಂದುವರೆದಿರುವಾಗಲೇ, ಕೇಂದ್ರ ಗೃಹ ಸಚಿವರೊಂದಿಗೆ ತೋಮರ್ ಹಾಗೂ ಸೋಮ್ ಪ್ರಕಾಶ್ ಅವರು ಮಹತ್ವದ ಸಭೆ ನಡೆಸುತ್ತಿದ್ದಾರೆ.
Published: 13th December 2020 05:28 PM | Last Updated: 13th December 2020 05:28 PM | A+A A-

ಮುಂದುವರೆದ ರೈತರ ಪ್ರತಿಭಟನೆ: ಗೃಹ ಸಚಿವ ಅಮಿತ್ ಶಾ- ಕೃಷಿ ಸಚಿವ ತೋಮರ್ ಮಹತ್ವದ ಸಭೆ!
ನವದೆಹಲಿ: ಕೃಷಿ ಕಾಯ್ದೆಯನ್ನು ವಿರೋಧಿಸಿ ನಡೆಯುತ್ತಿರುವ ರೈತರ ಪ್ರತಿಭಟನೆ ಮುಂದುವರೆದಿರುವಾಗಲೇ, ಕೇಂದ್ರ ಗೃಹ ಸಚಿವರೊಂದಿಗೆ ತೋಮರ್ ಹಾಗೂ ಸೋಮ್ ಪ್ರಕಾಶ್ ಅವರು ಮಹತ್ವದ ಸಭೆ ನಡೆಸುತ್ತಿದ್ದಾರೆ.
ಸಚಿವರೊಂದಿಗೆ ಪಂಜಾಬ್ ನ ಬಿಜೆಪಿ ನಾಯಕರೂ ಸಹ ಗೃಹ ಸಚಿವರನ್ನು ಭೇಟಿ ಮಾಡಿದ್ದಾರೆ. ಸಚಿವರಾದ ಪಿಯೂಷ್ ಗೋಯಲ್, ತೋಮರ್, ಪ್ರಕಾಶ್ ಅವರು ಪ್ರತಿಭಟನೆಯನ್ನು ನಿಲ್ಲಿಸುವ ನಿಟ್ಟಿನಲ್ಲಿ ರೈತ ಮುಖಂಡರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.
ಪಂಜಾಬ್, ಹರ್ಯಾಣ, ಉತ್ತರ ಪ್ರದೇಶದ ರೈತರು ಕೇಂದ್ರ ಸರ್ಕಾರದ ಕೃಷಿ ಕಾಯ್ದೆಯನ್ನು ವಿರೋಧಿಸಿ, ಅದನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.