ಅಸ್ಸಾಂ: ಬಿಟಿಸಿಯಲ್ಲಿ ಅಧಿಕಾರ ಹಿಡಿಯಲು ಮೈತ್ರಿ ಮುರಿದುಕೊಂಡು ಹೊಸ ಮೈತ್ರಿಗೆ ಮುಂದಾದ ಬಿಜೆಪಿ

 ಅಸ್ಸಾಂನಲ್ಲಿ ಬೋಡೋ ಪ್ರಾಬಲ್ಯವಿರುವ ಪ್ರದೇಶದಲ್ಲಿ ಸ್ವಾಯತ್ತ ಆಡಳಿತ ನಡೆಸುವ ಬೋಡೋಲ್ಯಾಂಡ್ ಪ್ರಾಂತೀಯ ಪರಿಷತ್ (ಬಿಟಿಸಿ) ಸ್ವಾಯತ್ತ ಸಂಸ್ಥೆಯಲ್ಲಿ ಅಧಿಕಾರ ಹಿಡಿಯುವುದಕ್ಕಾಗಿ ಬಿಜೆಪಿ ಬೋಡೋ ಪೀಪಲ್ಸ್ ಫ್ರಂಟ್ (ಬಿಪಿಎಫ್)  ನೊಂದಿಗಿನ ಮೈತ್ರಿಯನ್ನು ಬಿಟ್ಟು ಬಿಟಿಸಿಯೊಂದಿಗೆ ಕೈ ಜೋಡಿಸಿದೆ. 
ಬಿಜೆಪಿ
ಬಿಜೆಪಿ

ಗುವಾಹಟಿ: ಅಸ್ಸಾಂನಲ್ಲಿ ಬೋಡೋ ಪ್ರಾಬಲ್ಯವಿರುವ ಪ್ರದೇಶದಲ್ಲಿ ಸ್ವಾಯತ್ತ ಆಡಳಿತ ನಡೆಸುವ ಬೋಡೋಲ್ಯಾಂಡ್ ಪ್ರಾಂತೀಯ ಪರಿಷತ್ (ಬಿಟಿಸಿ) ಸ್ವಾಯತ್ತ ಸಂಸ್ಥೆಯಲ್ಲಿ ಅಧಿಕಾರ ಹಿಡಿಯುವುದಕ್ಕಾಗಿ ಬಿಜೆಪಿ ಬೋಡೋ ಪೀಪಲ್ಸ್ ಫ್ರಂಟ್ (ಬಿಪಿಎಫ್)  ನೊಂದಿಗಿನ ಮೈತ್ರಿಯನ್ನು ಬಿಟ್ಟು ಬಿಟಿಸಿಯೊಂದಿಗೆ ಕೈ ಜೋಡಿಸಿದೆ. 

ಸರ್ಬಾನಂದ್ ಸೋನೋವಾಲ್ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಬಿಪಿಎಫ್ ನ ಮೂವರು ಸಚಿವರಿದ್ದಾರೆ. ಬಿಪಿಎಫ್ 40 ಸದಸ್ಯರನ್ನೊಳಗೊಂಡ ಬಿಟಿಸಿ ಚುನಾವಣೆಯಲ್ಲಿ 17 ಸ್ಥಾನಗಳಲ್ಲಿ ಗೆದ್ದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ 12 ಸ್ಥಾನಗಳಲ್ಲಿ ಗೆದ್ದಿರುವ ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯುಪಿಪಿಎಲ್) ನ್ನು 9 ಸ್ಥಾನಗಳಲ್ಲಿ ಗೆದ್ದಿರುವ ಬಿಜೆಪಿ ತಮ್ಮ ಮಿತ್ರಪಕ್ಷವೆಂದು ಘೋಷಿಸಿದ್ದು, ಯುಪಿಪಿಎಲ್ ನ ಮುಖ್ಯಸ್ಥ ಪ್ರಮೋದ್ ಬೋರೋ ಬಿಟಿಸಿಯ ಮುಂದಿನ ಮುಖ್ಯ ಕಾರ್ಯನಿರ್ವಹಣಾ ಸದಸ್ಯರಾಗಿರಲಿದ್ದಾರೆ ಎಂದು ಸಿಎಂ ಸರ್ಬಾನಂದ್ ಸೋನೋವಾಲ್ ಹೇಳಿದ್ದಾರೆ. 

ಈ ನಡುವೆ ಬಿಟಿಸಿ ಚುನಾವಣೆಯಲ್ಲಿ ಎನ್ ಡಿಎ ಬಹುಮತ ಗಳಿಸಿರುವುದನ್ನು ಮೋದಿ ಮತ್ತು ಅಮಿತ್ ಶಾ ಟ್ವೀಟ್ ಮ್ಮೂಲಕ ಸ್ಪಷ್ಟಪಡಿಸಿದ್ದು, ಯುಪಿಪಿಎಲ್ ನ್ನು ಮಿತ್ರ ಪಕ್ಷವೆಂದು ಹೇಳಿ ಅಭಿನಂದನೆ ಸಲ್ಲಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com