ಟಿಆರ್'ಪಿ ರೇಟಿಂಗ್ ತಿರುಚಿದ ಪ್ರಕರಣ: ರಿಪಬ್ಲಿಕ್ ಟಿವಿ ಸಿಇಒ ವಿಕಾಸ್ ಖಾಂಚಂದಾನಿ ಬಂಧನ

ಟಿಆರ್'ಪಿ ರೇಟಿಂಗ್ ತಿರುಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿ ಸಿಇಒ ವಿಕಾಸ್ ಖಾಂಚಂದಾನಿಯವರನ್ನು ಭಾನುವಾರ ಬಂಧನಕ್ಕೊಳಪಡಿಸಲಾಗಿದೆ. 
ವಿಕಾಸ್ ಖಾಂಚಂದಾನಿ
ವಿಕಾಸ್ ಖಾಂಚಂದಾನಿ

ಮುಂಬೈ: ಟಿಆರ್'ಪಿ ರೇಟಿಂಗ್ ತಿರುಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿ ಸಿಇಒ ವಿಕಾಸ್ ಖಾಂಚಂದಾನಿಯವರನ್ನು ಭಾನುವಾರ ಬಂಧನಕ್ಕೊಳಪಡಿಸಲಾಗಿದೆ. 

ಪ್ರಕರಣದಲ್ಲಿ ವಿಕಾಸ್ 13ನೇ ಆರೋಪಿಯಾಗಿದ್ದು, ಭಾನುವಾರ ಮುಂಬೈ ಪೊಲೀಸರು ವಿಕಾಸ್ ಅವರನ್ನು ಬಂಧನಕ್ಕೊಳಪಡಿಸಿದ್ದಾರೆಂದು ವರದಿಗಳು ತಿಳಿಸಿವೆ. 

ಅಕ್ಟೋಬರ್ 6ರಂದು ಮುಂಬೈ ಪೊಲೀಸರು ರೇಟಿಂಗ್ ತಿರುಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. 

ಹಂಸ ರಿಸರ್ಚ್ ಅಧಿಕಾರಿ ನಿತಿನ್ ದೇವೂಕರ್ ನೀಡಿದ ದೂರಿನ ಅನ್ವಯ ಪೊಲೀಸರು ಎಫ್ಐಆರ್ ದಾಖಲು ಮಾಡಿಕೊಂಡಿದ್ದರು. ಪ್ರಕರಣ ಸಂಬಂಧ ಪೊಲೀಸರು ಈವರೆಗೂ 140 ಸಾಕ್ಷಿಗಳನ್ನು ವಿಚಾರಣೆ ಮಾಡಿದ್ದಾರೆಂದು ಹೇಳಲಾಗುತ್ತಿದೆ. ಇದೇ ಪ್ರಕರಣದಲ್ಲಿ ಇದೀಗ ವಿಕಾಸ್ ಅವರು ಬಂಧನವಾಗಿದೆ. 

ಪ್ರಕರಣದಲ್ಲಿ ವಿಕಾಸ್ ಖಾಂಚಂದಾನಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿಯನ್ನು ಸಲ್ಲಿಸಿದ್ದರು. ಸೋಮವಾರ ಅರ್ಜಿಯ ವಿಚಾರಣೆ ನಡೆಯಬೇಕಿತ್ತು. 

ಈ ನಡುವೆ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ, ಇದು ಮುಂಬೈ ಪೊಲೀಸರು ಶೋಷಣೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com