'ವೈಕುಂಠ ಏಕಾದಶಿ' ತಿರುಪತಿ- ತಿರುಮಲದಲ್ಲಿ ಯಲ್ಲಿ ವಿಶೇಷ ವ್ಯವಸ್ಥೆ

ತಿರುಮಲದಲ್ಲಿ ಶ್ರೀವೆಂಕಟೇಶ್ವರಸ್ವಾಮಿ ವೈಕುಂಠ ದ್ವಾರ ದರ್ಶನಕ್ಕಾಗಿ ಈ ತಿಂಗಳ 24 ರಿಂದ ತಿರುಪತಿಯಲ್ಲಿ ಸರ್ವ ದರ್ಶನ (ಉಚಿತ) ಟೋಕನ್ ವ್ಯವಸ್ಥೆ  ಜಾರಿಗಳಿಸುತ್ತಿರುವುದಾಗಿ ತಿರುಮಲ ತಿರುಪತಿ ದೇವಾಸ್ಥಾನಂ( ಟಿಟಿಡಿ) ಕಾರ್ಯಕಾರಿ ಅಧಿಕಾರಿ ಜವಾಹರ್ ರೆಡ್ಡಿ ತಿಳಿಸಿದ್ದಾರೆ.
ತಿರುಮಲ ದೇಗುಲ
ತಿರುಮಲ ದೇಗುಲ

ತಿರುಮಲ: ತಿರುಮಲದಲ್ಲಿ ಶ್ರೀವೆಂಕಟೇಶ್ವರಸ್ವಾಮಿ ವೈಕುಂಠ ದ್ವಾರ ದರ್ಶನಕ್ಕಾಗಿ ಈ ತಿಂಗಳ 24 ರಿಂದ ತಿರುಪತಿಯಲ್ಲಿ ಸರ್ವ ದರ್ಶನ (ಉಚಿತ) ಟೋಕನ್ ವ್ಯವಸ್ಥೆ  ಜಾರಿಗಳಿಸುತ್ತಿರುವುದಾಗಿ ತಿರುಮಲ ತಿರುಪತಿ ದೇವಾಸ್ಥಾನಂ( ಟಿಟಿಡಿ) ಕಾರ್ಯಕಾರಿ ಅಧಿಕಾರಿ ಜವಾಹರ್ ರೆಡ್ಡಿ ತಿಳಿಸಿದ್ದಾರೆ.

ತಿರುಮಲೆಯ ಅನ್ನಮಯ್ಯ ಭವನದಲ್ಲಿ ಶನಿವಾರ ಅವರು ಮಾಧ್ಯಮಗಳಿಗೆ ಈ ವಿಷಯ ತಿಳಿಸಿದ್ದಾರೆ. ವೈಕುಂಠ ಏಕಾದಶಿ ಸಂದರ್ಭದಲ್ಲಿ, ತಿಮ್ಮಪ್ಪನ ದೇವಾಲಯದಲ್ಲಿ ವೈಕುಂಠ ದ್ವಾರವನ್ನು ಈ ತಿಂಗಳ 25 ರಿಂದ ಜನವರಿ 3 ರವರೆಗೆ ತೆರೆಯಲಾಗುವುದು. 300 ರೂ.ಗಳ ವಿಶೇಷ ಪ್ರವೇಶ ಟಿಕೆಟ್ಗಳನ್ನು ಈಗಾಗಲೇ  ಬಿಡುಗಡೆಮಾಡಲಾಗಿದೆ.

ತಿರುಪತಿಯ ಐದು ಸ್ಥಳಗಳಲ್ಲಿ ದಿನಕ್ಕೆ 10,000 ದಂತೆ  ಒಂದು ಲಕ್ಷ ಸರ್ವದರ್ಶನ ಟೋಕನ್ ಗಳನ್ನು ಭಕ್ತರಿಗೆ ಕಲ್ಪಿಸಲು   ಯೋಜಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com