ಜಮ್ಮು-ಕಾಶ್ಮೀರ: ಡಿಡಿಸಿ ಚುನಾವಣೆಯ 6ನೇ ಹಂತದ ಮತದಾನ ಪ್ರಗತಿಯಲ್ಲಿ, 124 ಅಭ್ಯರ್ಥಿಗಳು ಕಣದಲ್ಲಿ 

ಕಣಿವೆ ನಾಡು ಜಮ್ಮು-ಕಾಶ್ಮೀರದ ಜಿಲ್ಲಾ ಅಭಿವೃದ್ಧಿ ಮಂಡಳಿ(ಡಿಡಿಸಿ) ಚುನಾವಣೆಗೆ 6ನೇ ಹಂತದ ಮತದಾನ ಭಾನುವಾರ ಬೆಳಗ್ಗೆ 7 ಗಂಟೆಗೆ ಆರಂಭವಾಗಿದ್ದು ಮತದಾನ ಪ್ರಕ್ರಿಯೆ ಮುಂದುವರಿದಿದೆ. 7.48 ಲಕ್ಷ ಮತದಾರರು 31 ಡಿಡಿಸಿ ಕ್ಷೇತ್ರಗಳಲ್ಲಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.
ಮತ ಚಲಾಯಿಸಲು ಸರದಿ ಸಾಲಿನಲ್ಲಿ ನಿಂತಿರುವ ಮತದಾರರು, ಮತ ಚಲಾಯಿಸಿ ಹೊರಬಂದ ಮಹಿಳೆಯರು
ಮತ ಚಲಾಯಿಸಲು ಸರದಿ ಸಾಲಿನಲ್ಲಿ ನಿಂತಿರುವ ಮತದಾರರು, ಮತ ಚಲಾಯಿಸಿ ಹೊರಬಂದ ಮಹಿಳೆಯರು

ಜಮ್ಮು: ಕಣಿವೆ ನಾಡು ಜಮ್ಮು-ಕಾಶ್ಮೀರದ ಜಿಲ್ಲಾ ಅಭಿವೃದ್ಧಿ ಮಂಡಳಿ(ಡಿಡಿಸಿ) ಚುನಾವಣೆಗೆ 6ನೇ ಹಂತದ ಮತದಾನ ಭಾನುವಾರ ಬೆಳಗ್ಗೆ 7 ಗಂಟೆಗೆ ಆರಂಭವಾಗಿದ್ದು ಮತದಾನ ಪ್ರಕ್ರಿಯೆ ಮುಂದುವರಿದಿದೆ. 7.48 ಲಕ್ಷ ಮತದಾರರು 31 ಡಿಡಿಸಿ ಕ್ಷೇತ್ರಗಳಲ್ಲಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

ಜಮ್ಮು-ಕಾಶ್ಮೀರದ ಶೀತ ಹವಾಮಾನದ ನಡುವೆಯೂ ಮತದಾರರು ಆರ್ ಎಸ್ ಪುರದಲ್ಲಿರುವ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸುತ್ತಿರುವುದು ಕಂಡುಬಂತು. ಅಗತ್ಯ ಕೋವಿಡ್-19 ಶಿಷ್ಠಾಚಾರಗಳನ್ನು ಪಾಲಿಸಲಾಗುತ್ತಿದೆ.

3,90,432 ಪುರುಷ ಮತ್ತು 3,57,869 ಮಹಿಳಾ ಮತದಾರರು ಸೇರಿದಂತೆ 7,48,301 ಮತದಾರರು 123 ಅಭ್ಯರ್ಥಿಗಳ ಭವಿಷ್ಯ ತೀರ್ಮಾನಿಸಲಿದ್ದಾರೆ. ಕಾಶ್ಮೀರ ವಿಭಾಗದಲ್ಲಿ 14 ಸ್ಥಾನಗಳಿಗೆ 124 ಅಭ್ಯರ್ಥಿಗಳು, ಜಮ್ಮು ವಿಭಾಗದಲ್ಲಿ 121 ಅಭ್ಯರ್ಥಿಗಳು 17 ಸ್ಥಾನಗಳಿಗೆ ಸ್ಪರ್ಧಿಸುತ್ತಿದ್ದಾರೆ. 334 ಪಂಚ್ ಮತ್ತು 77 ಸರ್ಪಂಚ್ ಸ್ಥಾನಗಳಿಗೆ ಸಹ ಮತದಾನ ನಡೆಯುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com