ಮುಂದಿನ ಮಾತುಕತೆ ದಿನಾಂಕ ನಿಗದಿಗೆ ರೈತರೊಂದಿಗೆ ಸಂಪರ್ಕ: ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್

ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತ ಒಕ್ಕೂಟಗಳು ತಮ್ಮ ಆಂದೋಲನವನ್ನು ತೀವ್ರಗೊಳಿಸಿವೆ. ಇನ್ನು ಇಂದು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿ ಕೇಂದ್ರ ಸರ್ಕಾರಕ್ಕೆ ತಮ್ಮ ಶಕ್ತಿ ಪ್ರದರ್ಶಿಸಿದ್ದವು.
ರೈತರ ಪ್ರತಿಭಟನೆ
ರೈತರ ಪ್ರತಿಭಟನೆ

ನವದೆಹಲಿ: ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತ ಒಕ್ಕೂಟಗಳು ತಮ್ಮ ಆಂದೋಲನವನ್ನು ತೀವ್ರಗೊಳಿಸಿವೆ. ಇನ್ನು ಇಂದು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿ ಕೇಂದ್ರ ಸರ್ಕಾರಕ್ಕೆ ತಮ್ಮ ಶಕ್ತಿ ಪ್ರದರ್ಶಿಸಿದ್ದವು.

ಇದರ ನಡುವೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು, ಮುಂದಿನ ಮಾತುಕತೆಯ ದಿನಾಂಕವನ್ನು ನಿರ್ಧರಿಸಲು ಕೇಂದ್ರ ಸರ್ಕಾರ ರೈತ ಮುಖಂಡರೊಂದಿಗೆ ಸಂಪರ್ಕದಲ್ಲಿರುವುದಾಗಿ ತಿಳಿಸಿದ್ದಾರೆ.

"ಸಭೆ ಖಂಡಿತವಾಗಿಯೂ ನಡೆಯಲಿದೆ. ನಾವು ರೈತರೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ತೋಮರ್ ಹೇಳಿದ್ದಾರೆ. ಸರ್ಕಾರ ಯಾವಾಗ ಬೇಕಾದರೂ ಚರ್ಚೆಗೆ ಸಿದ್ಧವಾಗಿದೆ. ರೈತ ಮುಖಂಡರು ಮುಂದಿನ ಸಭೆಗೆ ಸಿದ್ಧರಾದಾಗ "ನಿರ್ಧರಿಸಿ ತಿಳಿಸಬೇಕು" ಎಂದು ಅವರು ಹೇಳಿದರು.

ಆಹಾರ ಸಚಿವ ಪಿಯೂಷ್ ಗೋಯಲ್ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವ ಸೋಮ್ ಪ್ರಕಾಶ್ ಜೊತೆ ಸೇರಿ ತೋಮರ್ 40 ರೈತ ಸಂಘಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಇನ್ನು ಕೇಂದ್ರ ಮತ್ತು 40 ರೈತ ಸಂಘಗಳ ಮುಖಂಡರ ನಡುವಿನ ಐದು ಸುತ್ತಿನ ಮಾತುಕತೆ ಅನಿರ್ದಿಷ್ಟವಾಗಿದೆ.

ಕೇಂದ್ರ ಸರ್ಕಾರವು ಕನಿಷ್ಟ ಬೆಂಬಲ ಬೆಲೆ(ಎಂಎಸ್‌ಪಿ) ವ್ಯವಸ್ಥೆಯನ್ನು ಪರಿಗಣಿಸಿ ಮುಂದುವರೆಸಿರುವುದಾಗಿ ಲಿಖಿತ ಭರವಸೆಯೊಂದಿಗೆ ಕರಡು ಪ್ರಸ್ತಾವನೆಯನ್ನು ಕಳುಹಿಸಿತ್ತು. ಆದರೆ ರೈತ ಸಂಘಗಳು ಅದನ್ನು ತಿರಸ್ಕರಿಸಿದ್ದು ಹೊಸ ಮೂರು ಕೃಷಿ ಕಾಯ್ದೆಯನ್ನು ರದ್ದುಗೊಳಿಸಲೇಬೇಕು ಒತ್ತಾಯಿಸಿವೆ. 

ಆದರೆ ಕೇಂದ್ರ ಸರ್ಕಾರ ಮಾತ್ರ ಕಾಯ್ದೆ ರದ್ದು ಮಾಡುವ ಸಾಧ್ಯತೆಯನ್ನು ತಳ್ಳಿಹಾಕಿದ್ದು, ಸರ್ಕಾರದ ನೀತಿ ಮತ್ತು ಈ ಕಾಯ್ದೆಯ ಹಿಂದಿನ ಉದ್ದೇಶ ಸ್ಪಷ್ಟವಾಗಿದೆ. ಈ ಕಾಯ್ದೆಗಳು ರೈತರ ಜೀವನವನ್ನು ಪರಿವರ್ತಿಸಲು ಉದ್ದೇಶಿಸಿವೆ. ಇದನ್ನು ನಾವು ರೈತರು ಮತ್ತು ರೈತ ಸಂಘಗಳ ಮುಖಂಡರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದ್ದೇವೆ ಎಂದು ತೋಮರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com