66 ವಿದ್ಯಾರ್ಥಿಗಳು, 5 ಸಿಬ್ಬಂದಿಗೆ ಕೊರೊನಾ​ ಸೋಂಕು; ಐಐಟಿ ಮದ್ರಾಸ್​ ಸೀಲ್​ಡೌನ್​!

ಪ್ರತಿಷ್ಠಿತ ಮದ್ರಾಸ್ ಐಐಟಿಗೂ ಕೊರೋನಾ ಸೋಂಕು ಭೀತಿ ಆವರಿಸಿದ್ದು, ಐಐಟಿ ಕ್ಯಾಂಪಸ್ ನ ಕನಿಷ್ಠ 66 ಮಂದಿ ವಿದ್ಯಾರ್ಥಿಗಳಿಗೆ ಮತ್ತು 5 ಸಿಬ್ಬಂದಿಗಳಿಗೆ ಕೊರೋನಾ ಸೋಂಕು ಒಕ್ಕರಿಸಿದೆ. ಪರಿಣಾಮ ಇಡೀ ಕ್ಯಾಂಪಸ್ ಅನ್ನು ಸೀಲ್ ಡೌನ್ ಮಾಡಲಾಗಿದೆ.
ಐಐಟಿ ಮದ್ರಾಸ್ (ಸಂಗ್ರಹ ಚಿತ್ರ)
ಐಐಟಿ ಮದ್ರಾಸ್ (ಸಂಗ್ರಹ ಚಿತ್ರ)

ಚೆನ್ನೈ: ಪ್ರತಿಷ್ಠಿತ ಮದ್ರಾಸ್ ಐಐಟಿಗೂ ಕೊರೋನಾ ಸೋಂಕು ಭೀತಿ ಆವರಿಸಿದ್ದು, ಐಐಟಿ ಕ್ಯಾಂಪಸ್ ನ ಕನಿಷ್ಠ 66 ಮಂದಿ ವಿದ್ಯಾರ್ಥಿಗಳಿಗೆ ಮತ್ತು 5 ಸಿಬ್ಬಂದಿಗಳಿಗೆ ಕೊರೋನಾ ಸೋಂಕು ಒಕ್ಕರಿಸಿದೆ. ಪರಿಣಾಮ ಇಡೀ ಕ್ಯಾಂಪಸ್ ಅನ್ನು ಸೀಲ್ ಡೌನ್ ಮಾಡಲಾಗಿದೆ.

ಕೊರೋನಾ ಸೋಂಕಿನಿಂದ ಚೇತರಿಕೆ ಕಂಡಿದ್ದ ತಮಿಳುನಾಡಿನಲ್ಲಿ ಮತ್ತೆ ಸೋಂಕಿನ ಅಬ್ಬರ ಆರಂಭವಾಗಿದ್ದು, ರಾಜಧಾನಿ ಚೆನ್ನೈನಲ್ಲಿ ಮತ್ತೆ ಸೋಂಕು ತನ್ನ ಪ್ರಾಬಲ್ಯ ಮೆರೆಯುತ್ತಿದೆ. ಮದ್ರಾಸ್ ಐಐಟಿಯಲ್ಲಿನ 66 ಮಂದಿಗೆ ಕೊರೋನಾ ಸೋಂಕು ಒಕ್ಕರಿಸಿದ್ದು, ಕೇವಲ ವಿದ್ಯಾರ್ಥಿಗಳು  ಮಾತ್ರವಲ್ಲದೇ 5 ಮಂದಿ ಸಿಬ್ಬಂದಿಗೂ ಸೋಂಕು ಒಕ್ಕರಿಸಿದೆ. ಇದೇ ಡಿಸೆಂಬರ್ 1ರಂದು ಇಲ್ಲಿ ಮೊದಲ ಸೋಂಕು ಪ್ರಕರಣ ಪತ್ತೆಯಾಗಿತ್ತು. ಡಿಸೆಂಬರ್ 11ರವರೆಗೂ ಇಲ್ಲಿ ಕೇವಲ 11 ಸೋಂಕು ಪ್ರಕರಣಗಳು ಮಾತ್ರ ದಾಖಲಾಗಿತ್ತು. ಆದರೆ ಕಳೆದ 3 ದಿನದಲ್ಲಿ ಬರೊಬ್ಬರಿ 55 ಮಂದಿಗೆ  ಸೋಂಕು ಒಕ್ಕರಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸದ್ಯ, ಸೋಂಕಿನ ಲಕ್ಷಣವಿದ್ದರೆ ತಕ್ಷಣ ಪರೀಕ್ಷೆ​ ಮಾಡಿಸುವಂತೆ ಎಲ್ಲರಿಗೂ ಸೂಚನೆ ಸಹ ನೀಡಲಾಗಿದೆ. ಜೊತೆಗೆ, ಶಿಕ್ಷಣ ಸಂಸ್ಥೆಯ ಲ್ಯಾಬ್​, ಗ್ರಂಥಾಲಯ ಹಾಗೂ ಎಲ್ಲಾ ವಿಭಾಗಗಳನ್ನು ಸೀಲ್ ಡೌನ್ ಮಾಡಲಾಗಿದೆ. ಐಐಟಿ ಮದ್ರಾಸ್​ನ ಕ್ಯಾಂಪಸ್​ನಲ್ಲಿ ಒಟ್ಟು 774 ವಿದ್ಯಾರ್ಥಿಗಳಿದ್ದಾರೆ  ಎಂದು ತಿಳಿದುಬಂದಿದೆ. ಇದೀಗ, ಎಲ್ಲರಿಗೂ ತಮ್ಮ ಹಾಸ್ಟೆಲ್ ​ಗಳಲ್ಲೇ ಕ್ವಾರಂಟೈನ್​ ಆಗಲು ಸೂಚಿಸಲಾಗಿದ್ದು, ಜೊತೆಗೆ ನಗರದಿಂದ ಬರುತ್ತಿದ್ದ ಸಿಬ್ಬಂದಿ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ವರ್ಕ್​​ ಫ್ರಂ ಹೋಂ ಅವಕಾಶ ನೀಡಲಾಗಿದೆ.​​

ತಮಿಳುನಾಡು ಸರ್ಕಾರ ಹೊರಡಿಸಿದ್ದ ಆದೇಶದ ಮೇರೆಗೆ ಡಿಸೆಂಬರ್ 7ರಂದು ಐಐಟಿ ಮದ್ರಾಸ್​ನಲ್ಲಿ ಅಂತಿಮ ಓದುತ್ತಿರುವ​ ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿತ್ತು. ಈ ನಡುವೆ, ಕಾಲೇಜಿನಲ್ಲಿ ಸೋಂಕು ಹೇಗೆ ಹಬ್ಬಿತು ಎಂದು ತಿಳಿದುಬಂದಿಲ್ಲ. ಆದರೆ​,  ಎಲ್ಲಾ ವಿದ್ಯಾರ್ಥಿಗಳೂ ಕಾಲೇಜಿನ ಕ್ಯಾಂಟೀನ್​ಗೆ ಭೇಟಿಕೊಡುತ್ತಿದ್ದ ಹಿನ್ನೆಲೆಯಲ್ಲಿ ಕೊರೊನಾ ಅಲ್ಲಿಂದ ಹರಡಿರುವ ಶಂಕೆ ವ್ಯಕ್ತವಾಗಿದೆ. 

ಈ ಬಗ್ಗೆ ಸಂಸ್ಥೆಯ ಆರೋಗ್ಯ ಕಾರ್ಯದರ್ಶಿ ಜೆ ರಾಧಾಕೃಷ್ಣನ್ ಅವರನ್ನು ಕೇಳಿದಾಗ, ಸೋಂಕು ನಿಯಂತ್ರಣಕ್ಕೆ ಆರೋಗ್ಯ ಅಧಿಕಾರಿಗಳು ಐಐಟಿ ಮದ್ರಾಸ್‌ ಕ್ಯಾಂಪಸ್ ನಲ್ಲಿ ಶ್ರಮಿಸುತ್ತಿದ್ದಾರೆ. ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಈ ರೀತಿಯ  ಸ್ಥಳೀಕರಿಸಿದ ಕ್ಲಸ್ಟರ್‌ಗಳನ್ನು ಮೊದಲೇ ನಿರೀಕ್ಷಿಸಲಾಗಿತ್ತು. ವಿದ್ಯಾರ್ಥಿಗಳು ಒಟ್ಟಿಗೆ ಸೇರುವ ಸಾಮಾನ್ಯ ಅವ್ಯವಸ್ಥೆ ಇದಕ್ಕೆ ಕಾರಣ. ಪ್ರಮುಖವಾಗಿ ಹಾಸ್ಟೆಲ್ ನ ಡೈನಿಂಗ್ ಹಾಲ್ ಅಥವಾ ಕಿಚನ್ ನಿಂದ ಸೋಂಕು ಪ್ರಸರಿಸಿರುವ ಶಂಕೆ ವ್ಯಕ್ತವಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ  ವಿದ್ಯಾರ್ಥಿಗಳಿಗೆ ನೇರವಾಗಿ ಅವರ ರೂಮ್ ಗಳಿಗೆ ಆಹಾರ ನೀಡುವ ಕುರಿತು ನಿರ್ಧರಿಸಲಾಗಿದೆ. ಅಂತೆಯೇ ಮುಂಜಾಗ್ರತಾ ಕ್ರಮವಾಗಿ ಎಲ್ಲರನ್ನೂ ಪರೀಕ್ಷೆಗೊಳಪಡಿಸುವಂತೆ ಸಂಸ್ಥೆಯನ್ನು ಕೇಳಿದ್ದೇವೆ. ಕೊರೋನಾ ಸೋಂಕಿತರ ಪತ್ತೆಯಾಗಿರುವ ಹಾಟ್ ಸ್ಪಾಟ್ ಗಳನ್ನು ಕೂಡಲೇ  ಸ್ಯಾನಿಟೈಸ್ ಮಾಡುವಂತೆ ಸಲಹೆ ನೀಡಿದ್ದೇವೆ. ಈಗಾಗಲೇ ಚೆನ್ನೈ ಮುನ್ಸಿಪಲ್ ಕಾರ್ಪೋರೇಷನ್ ಈ ಕೆಲಸ ಮಾಡುತ್ತಿದೆ ಎಂದು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com