ಮದ್ರಾಸ್ ಐಐಟಿ ಹೊಸ ಕೊರೋನಾ ಹಾಟ್ ಸ್ಪಾಟ್: ಇಂದು ಮತ್ತೆ 79 ಮಂದಿಗೆ ಪಾಸಿಟಿವ್

ಪ್ರತಿಷ್ಠಿತ ಮದ್ರಾಸ್ ಐಐಟಿ ಕೊರೋನಾ ಹಾಟ್ ಸ್ಪಾಟ್ ಆಗಿ ಮಾರ್ಪಟ್ಟಿದ್ದು, ಮಂಗಳವಾರ ವಿದ್ಯಾರ್ಥಿಗಳು ಸೇರಿದಂತೆ ಮತ್ತೆ 79 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸಂಸ್ಥೆಯಲ್ಲಿ ಸೋಂಕಿತರ ಸಂಖ್ಯೆ 183ಕ್ಕೆ ಏರಿಕೆಯಾಗಿದೆ.
ಐಐಟಿ ಮದ್ರಾಸ್
ಐಐಟಿ ಮದ್ರಾಸ್

ಚೆನ್ನೈ: ಪ್ರತಿಷ್ಠಿತ ಮದ್ರಾಸ್ ಐಐಟಿ ಕೊರೋನಾ ಹಾಟ್ ಸ್ಪಾಟ್ ಆಗಿ ಮಾರ್ಪಟ್ಟಿದ್ದು, ಮಂಗಳವಾರ ವಿದ್ಯಾರ್ಥಿಗಳು ಸೇರಿದಂತೆ ಮತ್ತೆ 79 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸಂಸ್ಥೆಯಲ್ಲಿ ಸೋಂಕಿತರ ಸಂಖ್ಯೆ 183ಕ್ಕೆ ಏರಿಕೆಯಾಗಿದೆ.

ಸೋಮವಾರ ಐಐಟಿಯ 539 ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆ ಪೈಕಿ 79 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ ಎಂದು ತಮಿಳುನಾಡು ಆರೋಗ್ಯ ಕಾರ್ಯದರ್ಶಿ ಜೆ.ರಾಧಾಕೃಷ್ಣನ್ ಅವರು ತಿಳಿಸಿದ್ದಾರೆ.

ನಾವು ಸಂಸ್ಥೆಯ ಒಟ್ಟು 978 ವಿದ್ಯಾರ್ಥಿಗಳಿಗೆ ಕೊರೋನಾ ಪರೀಕ್ಷೆ ನಡೆಸಿದ್ದು, 25 ವಿದ್ಯಾರ್ಥಿಗಳ ವರದಿ ಇನ್ನೂ ಬಂದಿಲ್ಲ. 953 ಮಂದಿಯ ಪರೀಕ್ಷಾ ವರದಿ ಬಂದಿದ್ದು, 183 ಮಂದಿಗೆ ಪಾಸಿಟಿವ್ ಬಂದಿದೆ ಎಂದು ಅವರು ಹೇಳಿದ್ದಾರೆ.

ನಿನ್ನೆ ಸಂಸ್ಥೆಯ 33 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿತ್ತು. ಇಂದು ಮತ್ತೆ 79 ಮಂದಿಗೆ ಪಾಸಿಟಿವ್ ಬಂದಿದ್ದು, ಇದು ಇತರ ಕಾಲೇಜುಗಳಿಗೆ ಪಾಠವಾಗಬೇಕು. ಕ್ಯಾಂಪಸ್‌ಗಳಲ್ಲಿ ಕೋವಿಡ್-19 ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಅನುಸರಿಸುವ ಅಗತ್ಯ ಇದೆ ಎಂದು ಒತ್ತಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com