1971ರ ಯುದ್ಧದ ವೀರ ಯೋಧರ ಗೌರವಾರ್ಥ ಗಡಿಯಲ್ಲಿ 180 ಕಿ.ಮೀ. ಓಡಿದ ಬಿಎಸ್ಎಫ್ ಯೋಧರು, ವಿಡಿಯೋ!

ಬಿಎಸ್ಎಫ್ ಯೋಧರು ಗಡಿಯಲ್ಲಿ 180 ಕಿ.ಮೀ ದೂರು ಓಡುವ ಮೂಲಕ 1971ರ ಯುದ್ಧದ ವೀರ ಯೋಧರಿಗೆ ಗೌರವ ಸಲ್ಲಿಸಿದ್ದು ಈ ವಿಡಿಯೋ ವೈರಲ್ ಆಗಿದೆ. ಬಿಎಸ್ಎಫ್ ಯೋಧರ ಈ ಕಾರ್ಯಕ್ಕೆ ನೆಟ್ಟಿಗರು ಸಲಾಂ ಹೊಡೆದಿದ್ದಾರೆ. 
ಪ್ರತ್ಯಕ್ಷ ದೃಶ್ಯ
ಪ್ರತ್ಯಕ್ಷ ದೃಶ್ಯ

ಶ್ರೀನಗರ: ಬಿಎಸ್ಎಫ್ ಯೋಧರು ಗಡಿಯಲ್ಲಿ 180 ಕಿ.ಮೀ ದೂರು ಓಡುವ ಮೂಲಕ 1971ರ ಯುದ್ಧದ ವೀರ ಯೋಧರಿಗೆ ಗೌರವ ಸಲ್ಲಿಸಿದ್ದು ಈ ವಿಡಿಯೋ ವೈರಲ್ ಆಗಿದೆ. ಬಿಎಸ್ಎಫ್ ಯೋಧರ ಈ ಕಾರ್ಯಕ್ಕೆ ನೆಟ್ಟಿಗರು ಸಲಾಂ ಹೊಡೆದಿದ್ದಾರೆ. 

ಡಿಸೆಂಬರ್ 13ರ ಮಧ್ಯರಾತ್ರಿ 930 ಬಿಎಸ್ಎಫ್ ಸಿಬ್ಬಂದಿ ಗಡಿಯೂದ್ದಕ್ಕೂ ಬರೋಬ್ಬರಿ 180 ಕಿ.ಮೀ ದೂರವನ್ನು 11 ಗಂಟೆಯೊಳಗೆ ಓಡಿದ್ದರು. ಈ ಮೂಲಕ ವೀರ ಯೋಧರಿಗೆ ಗೌರವ ಸಲ್ಲಿಸಿದ್ದಾರೆ. 

ಈ ವಿಡಿಯೋವನ್ನು ಕೇಂದ್ರ ಯುವಜನ ಸೇವಾ ಮತ್ತು ಕ್ರೀಡಾ ರಾಜ್ಯ ಸಚಿವ ಕಿರಣ್‌ ರಿಜಿಜು ಅವರು ಟ್ವೀಟ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಯೋಧರ ಕಾರ್ಯವನ್ನು ಶ್ಲಾಘಿಸಿದ್ದಾರೆ. 

1971ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ವಿಜಯದ ನೆನಪಿಗಾಗಿ ದೇಶವೂ ಡಿಸೆಂಬರ್ 16ಕ್ಕೆ ವಿಜಯ್ ದಿವಸ್ ಅನ್ನು ಆಚರಿಸಲಾಗುತ್ತದೆ. ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಎಎ ಖಾನ್ ನಿಯಾಜಿ ಮತ್ತು 93 ಸಾವಿರ ಸೈನಿಕರು ಭಾರತೀಯ ಸೇನೆ ಮತ್ತು ಮುಕ್ತಿ ಬಹಿನಿ ಒಳಗೊಂಡ ಮಿತ್ರ ಪಡೆಗಳಿಗೆ ಬೇಷರತ್ತಾಗಿ ಶರಣಾಗಿದ್ದರು. ಈ ಯುದ್ಧದ ಅಂತ್ಯವು ಪೂರ್ವ ಪಾಕಿಸ್ತಾನವನ್ನು ಬಾಂಗ್ಲಾದೇಶ ಎಂಬ ಪ್ರತ್ಯೇಕ ರಾಷ್ಟ್ರವನ್ನಾಗಿ ಮಾಡಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com