ಮೋದಿ ಸರ್ಕಾರಕ್ಕೆ ಬಂಡವಾಳ ಶಾಹಿಗಳು ಆಪ್ತ ಸ್ನೇಹಿತರು, ರೈತರು ಖಾಲಿಸ್ತಾನಿಗಳು: ರಾಹುಲ್ ಗಾಂಧಿ

ಮೋದಿ ಸರ್ಕಾರ ಮತ್ತು  ಬಂಡವಾಳಶಾಹಿಗಳು ಆಪ್ತ ಸ್ನೇಹಿತರು, ರೈತರು ಖಾಲಿಸ್ತಾನಿಗಳುಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಮೋದಿ ಸರ್ಕಾರ ಮತ್ತು  ಬಂಡವಾಳಶಾಹಿಗಳು ಆಪ್ತ ಸ್ನೇಹಿತರು, ರೈತರು ಖಾಲಿಸ್ತಾನಿಗಳುಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ರಾಹುಲ್ ಗಾಂಧಿ ಕಳೆದ ಹಲವು ದಿನಗಳಿಂದ ದೆಹಲಿ ಗಡಿಯಲ್ಲಿ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೃಷಿ ಮಸೂದೆಯನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ರೈತರು ಪ್ರತಿಭಟಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಮೋದಿ ಸರ್ಕಾರಕ್ಕೆ ಭಿನ್ನಾಭಿಪ್ರಾಯ ಇರುವ ವಿದ್ಯಾರ್ಥಿಗಳು ದೇಶ ವಿರೋಧಿಗಳು, ನಾಗರಿಗರು ಅರ್ಬನ್ ನಕ್ಸಲರು, ವಲಸೆ ಕಾರ್ಮಿಕರು ಕೋವಿಡ್ ವಾಹಕಗಳು. ಅತ್ಯಾಚಾರಕ್ಕೊಳಗಾದವರು ಯಾರೂ ಅಲ್ಲ. ಪ್ರತಿಭಟನಾ ರೈತರು ಖಾಲಿಸ್ತಾನಿಗಳು ಮತ್ತು ಕ್ಯಾಪಿಟಲಿಸ್ಟ್‌ಗಳು ಉತ್ತಮ ಸ್ನೇಹಿತರು ಆಗಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ರೈತ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ, ರೈತರು ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಯ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಜಾರಿಗೆ ಬಂದ ಈ ಮೂರು ಕೃಷಿ ಕಾನೂನುಗಳನ್ನು ಕೇಂದ್ರ ಸರ್ಕಾರವು ಕೃಷಿ ಕ್ಷೇತ್ರದ ಪ್ರಮುಖ ಸುಧಾರಣೆಗಳೆಂದು ಘೋಷಿಸಲಾಗಿದ್ದು ಅದು ಮಧ್ಯವರ್ತಿಗಳನ್ನು ತೆಗೆದುಹಾಕುತ್ತದೆ ಮತ್ತು ರೈತರಿಗೆ ದೇಶದಲ್ಲಿ ಎಲ್ಲಿಯಾದರೂ ಮಾರಾಟ ಮಾಡಲು ಅವಕಾಶ ನೀಡುತ್ತದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com