ಗ್ರಾಮ ಪಂಚಾಯಿತಿ ಚುನಾವಣೆ: ಬಂಟ್ವಾಳ ತಾಲೂಕಿನ ಗ್ರಾಮಸ್ಥರಿಂದ ಮತದಾನ ಮಹಿಷ್ಕಾರ
ತಮ್ಮ ದೀರ್ಘಕಾಲದ ಬೇಡಿಕೆಗಳನ್ನು ಈಡೇರಿಸದ ಕಾರಣದಿಂದಾಗಿ ಬಂಟ್ವಾಳ ತಾಲೂಕಿನ ಕೆಲವು ಗ್ರಾಮಗಳ ಮತದಾರರು ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
Published: 15th December 2020 04:57 PM | Last Updated: 15th December 2020 05:13 PM | A+A A-

ಗ್ರಾಮ ಪಂಚಾಯಿತಿ ಚುನಾವಣೆ: ಬಂಟ್ವಾಳ ತಾಲೂಕಿನ ಗ್ರಾಮಸ್ಥರಿಂದ ಮತದಾನ ಮಹಿಷ್ಕಾರ
ಬೆಂಗಳೂರು: ತಮ್ಮ ದೀರ್ಘಕಾಲದ ಬೇಡಿಕೆಗಳನ್ನು ಈಡೇರಿಸದ ಕಾರಣದಿಂದಾಗಿ ಬಂಟ್ವಾಳ ತಾಲೂಕಿನ ಕೆಲವು ಗ್ರಾಮಗಳ ಮತದಾರರು ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
ಸಜಿಪಮುನ್ನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ನಂದವಾರ ಅರಮನೆಹಿತ್ಲು ಗ್ರಾಮಸ್ಥರು ಸೂಕ್ತ ರಸ್ತೆ ಸಂಪರ್ಕಕ್ಕೆ ಕಳೆದ 4 ವರ್ಷಗಳಿಂದಲೂ ಬೇಡಿಕೆ ಇಡುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದಾಗಿ ಒಂದೇ ಒಂದು ಪ್ರತಿಕ್ರಿಯೂ ಬಂದಿಲ್ಲ. ಇದರಿಂದ ಆಕ್ರೋಶಗೊಂಡಿರುವ ಗ್ರಾಮಸ್ಥರು ಭಾನುವಾರದಂದು ನಡೆಯುವ ಗ್ರಾಮ ಪಂಚಾಯತ್ ಚುನಾವಣೆಯನ್ನು ಬಹಿಷ್ಕರಿಸಿರುವುದಾಗಿ ಬ್ಯಾನರ್ ಹಾಕಿದ್ದಾರೆ.
ಚುನಾವಣೆ ಬಹಿಷ್ಕಾರದ ಮಾಹಿತಿ ಪಡೆಯುತ್ತಿದ್ದಂತೆಯೇ ತಹಶಿಲ್ದಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಇತರ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಮನವೊಲಿಕೆಗೆ ಮುಂದಾಗಿದ್ದಾರೆ. ಬಂಟ್ವಾಳ ಎಂಎಲ್ಎ ರಾಜೇಶ್ ನಾಯ್ಕ್ ಅವರೂ ಗ್ರಾಮಸ್ಥರಿಗೆ ಅಗತ್ಯವಿರುವುದನ್ನು ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಆದರೂ ಜಗ್ಗದ ಮತದಾರರು ತಮ್ಮ ಬೇಡಿಕೆ ಈಡೇರಿಸುವವರೆಗೂ ತಮ್ಮ ನಿರ್ಧಾರ ಬದಲಾವಣೆ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಇಡ್ಕಿಡು ಗ್ರಾಮಸ್ಥರೂ ಸಹ ಉತ್ತಮ ರಸ್ತೆ ಸಂಪರ್ಕಕ್ಕಾಗಿ ಆಗ್ರಹಿಸಿ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಅಧಿಕಾರಿಗಳು ಗ್ರಾಮಸ್ಥರನ್ನು ಮನವೊಲಿಕೆ ಮಾಡಿದ್ದಾರೆ.
ಸವಲ್ಗಿಯನ್ನು ತಾಲೂಕನ್ನಾಗಿ ಘೋಷಿಸುವವರೆಗೂ ಮತದಾನ ಬಹಿಷ್ಕಾರ
ಬಾಗಲಕೋಟೆಯ ಸವಲ್ಗಿಯ ಗ್ರಾಮಸ್ಥರು ತಮ್ಮ ಗ್ರಾಮವನ್ನು ತಾಲೂಕನ್ನಾಗಿ ಘೋಷಣೆ ಮಾಡುವವರೆಗೂ ಮತದಾನ ಮಾಡುವುದಿಲ್ಲ ಎಂದು ಬಹಿಷ್ಕರಿಸಿದ್ದಾರೆ.