ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ರಾಜಕೀಯ ಮೈತ್ರಿ: ನಟ, ರಾಜಕಾರಣಿ ಕಮಲ್ ಹಾಸನ್ ಹೇಳಿದ್ದೇನು? 

ರಾಜಕೀಯದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೊತೆ ಸೇರಿ ಕೆಲಸ ಮಾಡಲು ಸಿದ್ದ ಎಂದು ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಪುನರುಚ್ಛರಿಸಿದ್ದಾರೆ. 

Published: 16th December 2020 10:19 AM  |   Last Updated: 16th December 2020 10:19 AM   |  A+A-


Kamal Hassan and Rajanikanth(File photo)

ಕಮಲ್ ಹಾಸನ್ ಮತ್ತು ರಜನಿಕಾಂತ್(ಸಂಗ್ರಹ ಚಿತ್ರ)

Posted By : Sumana Upadhyaya
Source : PTI

ಚೆನ್ನೈ: ರಾಜಕೀಯದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೊತೆ ಸೇರಿ ಕೆಲಸ ಮಾಡಲು ಸಿದ್ದ ಎಂದು ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಪುನರುಚ್ಛರಿಸಿದ್ದಾರೆ. 

ರಜನಿಕಾಂತ್ ಅವರು ಮುಂದಿನ ವರ್ಷ ತಮಿಳು ನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಬಹುತೇಕ ನಿಚ್ಚಳವಾಗಿದ್ದು ತಮ್ಮ ಮತ್ತು ರಜನಿಕಾಂತ್ ಅವರ ರಾಜಕೀಯ ತತ್ವ, ಆದರ್ಶಗಳು ಹೊಂದಿಕೆಯಾದರೆ ಖಂಡಿತಾ ಒಟ್ಟು ಸೇರಿ ಕೆಲಸ ಮಾಡುವುದಾಗಿ ಕಮಲ್ ಹಾಸನ್ ಹೇಳಿದ್ದಾರೆ.

ಕಮಲ್ ಹಾಸನ್ ಅವರ ಪಕ್ಷ ಮಕ್ಕಲ್ ನೀದಿ ಮೈಯಮ್(ಎಂಎನ್ ಎಂ), ರಾಜ್ಯದ ಜನತೆಗೆ ಪ್ರಯೋಜನವಾಗುವುದಾದರೆ ತಾವಿಬ್ಬರೂ ತಮ್ಮ ತಮ್ಮ ಅಹಂ ಭಾವನೆಗಳನ್ನು ತೆಗೆದುಹಾಕಿ ಒಂದಾಗುವುದಾಗಿ ಹೇಳಿದ್ದಾರೆ. ಆದರೆ ತಾವು ನಿರ್ಧಾರಕ್ಕೆ ಬರುವ ಮೊದಲು ರಜನಿಕಾಂತ್ ಅವರ ಪಕ್ಷದ ತತ್ವ, ಆದರ್ಶಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಿದೆ ಎಂದಿದ್ದಾರೆ. 

ರಜನಿಕಾಂತ್ ಅವರು ಈ ಬಗ್ಗೆ ಮಾತನಾಡಲಿ, ಅಗತ್ಯಬಿದ್ದರೆ ನಾವು ಒಬ್ಬರಿಗೊಬ್ಬರು ಸಹಾಯ ಮಾಡುತ್ತೇವೆ. ನಮ್ಮ, ನಮ್ಮ ಅಹಂಭಾವಗಳನ್ನು ತೊರೆದುಹಾಕಿ ಜನರಿಗೆ ಒಳಿತಾಗುವುದಾದರೆ ಒಂದಾಗುತ್ತೇವೆ, ಇದನ್ನು ನಾವು ಈ ಹಿಂದೆಯೂ ಹೇಳಿದ್ದೇವೆ, ಹೊಸದಾಗಿ ಹೇಳಲು ಏನೂ ಇಲ್ಲ ಎಂದಿದ್ದಾರೆ ಎಂದರು ಕಮಲ್ ಹಾಸನ್.

ಆದರೆ ರಜನಿಕಾಂತ್ ಅವರ ಧಾರ್ಮಿಕ ರಾಜಕೀಯದ ಭರವಸೆಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅದನ್ನು ಸಂಪೂರ್ಣ ತತ್ವ, ಆದರ್ಶವೆಂದು ಕರೆಯಲು ಸಾಧ್ಯವಿಲ್ಲ. ಅದೇನೆಂದು ಅವರು ವಿವರವಾಗಿ ಹೇಳಲಿ, ನಂತರ ನಾವು ಮಾತನಾಡುತ್ತೇವೆ, ನಾವಿಬ್ಬರೂ ಈಗಲೂ ಉತ್ತಮ ಸ್ನೇಹಿತರು, ನಾನು ಏಕೆ ರಾಜಕೀಯಕ್ಕೆ ಬಂದೆ ಎಂದು ಹೇಳಿದ್ದೇನೆ.ಈಗ ಬದಲಾವಣೆಯ ಅಗತ್ಯವಿದೆ ಎಂದು ಕಮಲ್ ಹಾಸನ್ ಹೇಳಿದ್ದಾರೆ.

ಕಳೆದ ನವೆಂಬರ್ ನಲ್ಲಿ ತಮಿಳು ನಾಡಿನ ಜನತೆಯ ಬೆಳವಣಿಗೆಗೆ ಪರಿಸ್ಥಿತಿಯ ಅಗತ್ಯ ಬಂದರೆ ಕಮಲ್ ಹಾಸನ್ ಜೊತೆಗೆ ಕೈಜೋಡಿಸುತ್ತೇನೆ ಎಂದು ರಜನಿಕಾಂತ್ ಕೂಡ ಹೇಳಿದ್ದರು.

Stay up to date on all the latest ರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp