ಗಡಿಯಲ್ಲಿ ಉದ್ಧಟತನ ತೋರಿಸಿದ್ದ ಪಾಕ್ ಸೇನೆಯ ಇಬ್ಬರು ಯೋಧರ ಹತ್ಯೆ

ಜಮ್ಮು ಮತ್ತು ಕಾಶ್ಮೀರದ ನೌಶೆರಾ ಸೆಕ್ಟರ್ ಬಳಿಯಿರುವ ಗಡಿ ನಿಯಂಂತ್ರಣ ರೇಖೆ ಬಳಿ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ಶೆಲ್ ದಾಳಿ ನಡೆಸುತ್ತಿದ್ದ ಪಾಕಿಸ್ತಾನ ಪಡೆಗೆ ದಿಟ್ಟ ಉತ್ತರ ನೀಡಿರುವ ಭಾರತೀಯ ಸೇನಾಪಡೆ ಇಬ್ಬರು ಪಾಕಿಸ್ತಾನ ಯೋಧರನ್ನು ಹತ್ಯೆ ಮಾಡಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ನೌಶೆರಾ ಸೆಕ್ಟರ್ ಬಳಿಯಿರುವ ಗಡಿ ನಿಯಂಂತ್ರಣ ರೇಖೆ ಬಳಿ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ಶೆಲ್ ದಾಳಿ ನಡೆಸುತ್ತಿದ್ದ ಪಾಕಿಸ್ತಾನ ಪಡೆಗೆ ದಿಟ್ಟ ಉತ್ತರ ನೀಡಿರುವ ಭಾರತೀಯ ಸೇನಾಪಡೆ ಇಬ್ಬರು ಪಾಕಿಸ್ತಾನ ಯೋಧರನ್ನು ಹತ್ಯೆ ಮಾಡಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಕಳೆದ ರಾತ್ರಿ ರಜೌರಿ ಜಿಲ್ಲೆಯ ನೌಶೆರಾ ಸೆಕ್ಟರ್ ಬಳಿಯಿರುವ ಗಡಿ ನಿಯಂತ್ರಣ ರೇಖೆ ಬಳಿ  ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ದಾಳಿಗೆ ತಕ್ಕ ಉತ್ತರ ನೀಡಿ ಇಬ್ಬರು ಪಾಕಿಸ್ತಾನ ಸೇನೆಯ ಯೋಧರನ್ನು ಹತ್ಯೆ ಮಾಡಲಾಗಿದೆ ಎಂದು ಸೇನಾಪಡೆ ಮಾಹಿತಿ ನೀಡಿದೆ. 

ಡಿಸೆಂಬರ್ 13 ರಂದೂ ಕೂಡ ಪಾಕಿಸ್ತಾನ ಸೇನೆ ಗಡಿ ನಿಯಂತ್ರಣ ರೇಖೆ ಬಳಿ ಮುಗ್ದ ನಾಗರೀಕರನ್ನು ಗುರುಯಾಗಿರಿಸಿಕೊಂಡು ದಾಳಿ ನಡೆಸಿತ್ತು. ಈ ವೇಳೆ ಭಾರತೀಯ ಸೇನೆ ದಿಟ್ಟ ಉತ್ತರ ನೀಡಿತ್ತು ಎಂದು ಲೆಫ್ಟಿನೆಂಟ್ ಜನರಲ್ ಸತೀಂದರ್ ಕುಮಾರ್ ಸೈನಿಯವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com