ಕೇರಳ: ಪಲಕ್ಕಾಡ್ ಪುರಸಭೆ ಕಟ್ಟಡದ ಮೇಲೆ 'ಜೈ ಶ್ರೀ ರಾಮ್' ಬ್ಯಾನರ್

'ಜೈ ಶ್ರೀ ರಾಮ್' ಮತ್ತು 'ವಂದೇ ಮಾತರಂ' ಎಂಬ ಘೋಷಣೆ ಇರುವ ಎರಡು ಬ್ಯಾನರ್ ಗಳನ್ನು ಕೇರಳದ ಪಲಕ್ಕಾಡ್ ಪುರಸಭೆ ಕಟ್ಟಡದ ಮೇಲೆ ಹಾಕಲಾಗಿದ್ದು, ವಿವಾದಕ್ಕೆ ಕಾರಣವಾಗಿದೆ.
ಪಲಕ್ಕಾಡ್ ಪುರಸಭೆ
ಪಲಕ್ಕಾಡ್ ಪುರಸಭೆ

ಪಲಕ್ಕಾಡ್: 'ಜೈ ಶ್ರೀ ರಾಮ್' ಮತ್ತು 'ವಂದೇ ಮಾತರಂ' ಎಂಬ ಘೋಷಣೆ ಇರುವ ಎರಡು ಬ್ಯಾನರ್ ಗಳನ್ನು ಕೇರಳದ ಪಲಕ್ಕಾಡ್ ಪುರಸಭೆ ಕಟ್ಟಡದ ಮೇಲೆ ಹಾಕಲಾಗಿದ್ದು, ವಿವಾದಕ್ಕೆ ಕಾರಣವಾಗಿದೆ.

ಒಂದು ಬ್ಯಾನರ್ ನಲ್ಲಿ 'ಜೈ ಶ್ರೀರಾಮ್' ಎಂದು ಬರೆದಿದ್ದರೆ ಮತ್ತೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಚಿತ್ರಗಳನ್ನು ಹಾಕಿ 'ವಂದೇ ಮಾತರಂ' ಎಂಬ ಘೋಷಣೆ ಬರೆಯಲಾಗಿದೆ.

ಪಲಕ್ಕಾಡ್ ಪುರಸಭೆಯಲ್ಲಿ ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ ಬಿಜೆಪಿಯ ಸಂಭ್ರಮಾಚರಣೆಯ ಒಂದು ಸಣ್ಣ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ ಮತ್ತು ವಿವಾದಕ್ಕೂ ಕಾರಣವಾಗಿದೆ. ಯುಡಿಎಫ್ ಮತ್ತು ಎಲ್ಡಿಎಫ್ ಇದನ್ನು "ಕಾನೂನುಬಾಹಿರ ಕೃತ್ಯ" ಎಂದು ಆಕ್ರೋಶ ವ್ಯಕ್ತಪಡಿಸಿವೆ.

ಸ್ಥಳೀಯ ಸಂಸ್ಥೆಯ ಚುನಾವಣಾ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, 52 ಸದಸ್ಯ ಬಲದ ಪುರಸಭೆಯಲ್ಲಿ ಬಿಜೆಪಿ 28 ಸ್ಥಾನಗಳ ಸ್ಪಷ್ಟ ಬಹುಮತ ಪಡೆದಿದೆ. ಕೇಸರಿ ಉಡುಪಿನಲ್ಲಿದ್ದ ಪಕ್ಷದ ಕಾರ್ಯಕರ್ತರು ಪುರಸಭೆಯ ಕಟ್ಟಡದ ಮುಂದೆ ಜಮಾಯಿಸಿ 'ಜೈ ಶ್ರೀ ರಾಮ್' ಮತ್ತು 'ಜೈ ಬಿಜೆಪಿ' ಮುಂತಾದ ಘೋಷಣೆಗಳನ್ನು ಕೂಗುತ್ತಾ ಸಂಕೀರ್ಣದ ಹೊರಗೆ ವಿಜಯೋತ್ಸವ ಆಚರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com