ಸಂಸತ್‌ ಚಳಿಗಾಲದ ಅಧಿವೇಶನ ನಡೆಸದ ಸರ್ಕಾರದ ವಿರುದ್ಧ ಪ್ರಿಯಾಂಕಾ ಗಾಂಧಿ ಕಿಡಿ

ಕೋವಿಡ್‌-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸಂಸತ್‌ ಚಳಿಗಾಲದ ಅಧಿವೇಶನ ಹಮ್ಮಿಕೊಳ್ಳದಿರಲು ನಿರ್ಧರಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಟೀಕಿಸಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ...
ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ

ನವದೆಹಲಿ: ಕೋವಿಡ್‌-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸಂಸತ್‌ ಚಳಿಗಾಲದ ಅಧಿವೇಶನ ಹಮ್ಮಿಕೊಳ್ಳದಿರಲು ನಿರ್ಧರಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಟೀಕಿಸಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಕಳೆದ ಅಧಿವೇಶವನ್ನು ಉದ್ಯಮಿ ಸ್ನೇಹಿತರ ನೆರವಿಗಾಗಿ ನಡೆಸಲಾಗಿತ್ತು. ರೈತರ ಸಮಸ್ಯೆ ಚರ್ಚಿಸಲು ಅಲ್ಲ ಎಂದು ಆರೋಪಿಸಿದ್ದಾರೆ.

ಕೋವಿಡ್‌ ಸಮಸ್ಯೆ ತೀವ್ರವಾಗಿರುವಾಗ ಕೃಷಿ ಕಾಯ್ದೆ ಜಾರಿಗೊಳಿಸಿ ತಮ್ಮ ಉದ್ಯಮಿ ಸ್ನೇಹಿತರಿಗೆ ನೆರವಾಗುವ ಸಲುವಾಗಿ ಮುಂಗಾರು ಅಧಿವೇಶನ ಹಮ್ಮಿಕೊಳ್ಳಲಾಗಿತ್ತು. ಆದರೆ, ಈಗ ರೈತರ ಪ್ರತಿಭಟನೆ ತೀವ್ರವಾಗಿರುವಾಗ ಅದರ ಬಗ್ಗೆ ಚರ್ಚಿಸಲು ಚಳಿಗಾಲ ಅಧಿವೇಶ ಕರೆಯಲು ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಈ ಕುರಿತು ಟ್ವೀಟ್‌ ಮಾಡಿರುವ ಅವರು, 'ಬಿಜೆಪಿ ಸರ್ಕಾರ ತಮ್ಮ ಉದ್ಯಮಿ ಸ್ನೇಹಿತರಿಗೆ ನೆರವಾಗಲು ಹೊಸ ಕೃಷಿ ಕಾನೂನುಗಳನ್ನು ಜಾರಿಗೆ ತರುವ ಸಲುವಾಗಿ ಕೋವಿಡ್ ಕಾಲದಲ್ಲಿ ಸಂಸತ್ ಅಧಿವೇಶನವನ್ನು ನಡೆಸಿತ್ತು. ಆದರೆ, ಈಗ 11 ರೈತರ ಪ್ರಾಣ ತ್ಯಾಗ ಮತ್ತು ಬಾಬಾ ರಾಮ್ ಸಿಂಗ್ ಅವರ ಸಾವಿನ ಹೊರತಾಗಿಯೂ ಚಳಿಗಾಲದ ಅಧಿವೇಶನ ನಡೆಸಿ ಕೃಷಿ ಕಾಯ್ದೆ ಕುರಿತು ಚರ್ಚಿಸಲು ಸರ್ಕಾರ ಧೈರ್ಯ ಮಾಡುತ್ತಿಲ್ಲ. ಇದು ಸರ್ಕಾರ ಅಹಂ ಮತ್ತು ಸಂವೇದನಾ ರಹಿತ ಮನೋಭಾವವನ್ನು ತೋರಿಸುತ್ತದೆ' ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com