ವರ್ಷಾಂತ್ಯಕ್ಕೆ ಮುನ್ನ ರೈತರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಲಿದೆ ಎಂಬ ಭರವಸೆ ಇದೆ: ಕೇಂದ್ರ ಸಚಿವ ತೋಮರ್ 

ಹೊಸ ವರ್ಷಕ್ಕೆ ಮುನ್ನ ಮೂರು ನೂತನ ಕೃಷಿ ಕಾನೂನುಗಳ ವಿರುದ್ಧ ರೈತರ ಹೋರಾಟವನ್ನು ಶಾಂತಗೊಳಿಸುವ ಭರವಸೆಯನ್ನು ಸರ್ಕಾರ ಹೊಂದಿದೆ, ಬಿಕ್ಕಟ್ಟನ್ನು ಬಗೆಹರಿಸಲುವಿವಿಧ ಗುಂಪುಗಳೊಂದಿಗೆ ಅನೌಪಚಾರಿಕ ಸಂವಾದವನ್ನು ಮುಂದುವರಿಸುತ್ತಿದೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ. ಇದೇ ವೇಳೆ ಕಾಯ್ದೆಗಳ ರದ್ದತಿಗೆ ಬದಲಾಗಿ ಇನ್ನಿತರೆ ರೀತಿಗಳಿಂದ ರೈತರಿಗೆ ಅನುಕೂಲ
ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್
ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್

ನವದೆಹಲಿ: ಹೊಸ ವರ್ಷಕ್ಕೆ ಮುನ್ನ ಮೂರು ನೂತನ ಕೃಷಿ ಕಾನೂನುಗಳ ವಿರುದ್ಧ ರೈತರ ಹೋರಾಟವನ್ನು ಶಾಂತಗೊಳಿಸುವ ಭರವಸೆಯನ್ನು ಸರ್ಕಾರ ಹೊಂದಿದೆ, ಬಿಕ್ಕಟ್ಟನ್ನು ಬಗೆಹರಿಸಲುವಿವಿಧ ಗುಂಪುಗಳೊಂದಿಗೆ ಅನೌಪಚಾರಿಕ ಸಂವಾದವನ್ನು ಮುಂದುವರಿಸುತ್ತಿದೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ. ಇದೇ ವೇಳೆ ಕಾಯ್ದೆಗಳ ರದ್ದತಿಗೆ ಬದಲಾಗಿ ಇನ್ನಿತರೆ ರೀತಿಗಳಿಂದ ರೈತರಿಗೆ ಅನುಕೂಲ ಕಲ್ಪಿಸಲು ಸರ್ಕಾರ ಬದ್ದವಾಗಿದೆ ಎಂದು ಅವರು ಹೇಳಿದ್ದಾರೆ.

ರೈತ ಸಮುದಾಯದ ಬಗೆಗೆ ನೈಜ ಕಾಳಜಿಯನ್ನು ಮೋದಿ ಸರ್ಕಾರ ಹೊಂದಿದೆ. ಯಾವುದೇ ಸಮಯದಲ್ಲಿ ಔಪಚಾರಿಕ ಮಾತುಕತೆಗಳನ್ನು ಪುನರಾರಂಭಿಸಲು ಸಿದ್ಧವಾಗಿದೆ ಎಂದು ಸಚಿವರು ಹೇಳಿದರು.

ರೈತರನ್ನು ದಾರಿ ತಪ್ಪಿಸಿದ ವಿರೋಧ ಪಕ್ಷಗಳ ಮೇಲೆ ಹರಿಹಾಯ್ದ ಸಚಿವರು ವಿಪಕ್ಷಗಳು ಸುಧಾರಣಾ ಪ್ರಕ್ರಿಯೆಯ ಬಗ್ಗೆ ತಮ್ಮ ನಿಲುವನ್ನು ಬದಲಿಸಿಸಮಸ್ಯೆಯನ್ನು ರಾಜಕೀಯಗೊಳಿಸಿವೆ ಎಂದು ಆರೋಪಿಸಿದರು.

ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ಆಹಾರ ಸಚಿವ ಪಿಯೂಷ್ ಗೋಯಲ್ ಮತ್ತು ವಾಣಿಜ್ಯ ಸಚಿವ ಸೋಮ್ ಪ್ರಕಾಶ್ ಜತೆಗೆ ಸುಮಾರು 40 ರೈತ ಸಂಘಗಳೊಂದಿಗೆ ಮಾತುಕತೆ ನಡೆಸುತ್ತಿರುವ ತೋಮರ್ - ಮೂರು ಹೊಸ ಕೃಷಿ ಕಾನೂನುಗಳು ರೈತರಿಗೆ ಪ್ರಯೋಜನಕಾರಿ ಮತ್ತು ಸರ್ಕಾರ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಮತ್ತು ಮಂಡಿ ವ್ಯವಸ್ಥೆಯನ್ನು ಮುಂದುವರಿಸಲಿದೆಎಂದು ಲಿಖಿತ ಭರವಸೆ ನೀಡಲು ಸಿದ್ಧವಾಗಿದ್ದೇವೆ ಎಂದಿದ್ದಾರೆ.

ಮೂರು ವಾರಗಳಿಗಿಂತ ಹೆಚ್ಚು ಕಾಲ ದೆಹಲಿ ಗಡಿಯಲ್ಲಿ ಸಾವಿರಾರು ರೈತರು, ವಿಶೇಷವಾಗಿ ಪಂಜಾಬ್ ಮತ್ತು ಹರಿಯಾಣ ರೈತರು ತಿಭಟನೆ ನಡೆಸುತ್ತಿದ್ದಾರೆ. ಮೂರು ಕೇಂದ್ರ ಸಚಿವರು ಮತ್ತು 40 ರೈತ ಸಂಘಗಳ ನಡುವೆ ಕನಿಷ್ಠ ಐದು ಸುತ್ತಿನ ಔಪಚಾರಿಕ ಮಾತುಕತೆ ನಡೆದಿವೆ, ಆದರೆ ಒಕ್ಕೂಟಗಳು ಕೇಂದ್ರ ಕಾನೂನುಗಳನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿವೆ.

"ನಾವು ನಿರಂತರವಾಗಿ ರೈತ ಸಂಘಗಳೊಂದಿಗೆ ಚರ್ಚೆ ನಡೆಸುತ್ತಿದ್ದೇವೆ ... ಒಟ್ಟಾರೆಯಾಗಿ, ಅವರೊಂದಿಗೆ ಮಾತುಕತೆ ಮೂಲಕ ಪರಿಹಾರವನ್ನು ಕಂಡುಕೊಳ್ಳುಉವುದು ಮ್ಮ ಪ್ರಯತ್ನ. ನಾವು ಇನ್ನೂ ಮಾತುಕತೆಗೆ ಮುಕ್ತರಾಗಿದ್ದೇವೆ. ನಾವು ಒಕ್ಕೂಟಗಳೊಂದಿಗೆ ಚರ್ಚೆ ನಡೆಸುತ್ತಿದ್ದೇವೆ. ಸಂವಾದದ ಮೂಲಕ ನಾವು ಮುಂದುವರಿಯಬಹುದುಎಂದು ನಾನು ಭಾವಿಸುತ್ತೇನೆ" ತೋಮರ್ ಹೇಳಿದರು. ಅಲ್ಲದೆ "ಅನೌಪಚಾರಿಕ ಮಾತುಕತೆ ನಡೆಯುತ್ತಿದೆ. ಕೆಲವು ಮಾರ್ಗಗಳ ಬಗ್ಗೆ ನನಗೆ ಭರವಸೆ ಇದೆ" ಎಂದು ಅವರು ಹೇಳಿದರು.

ಸುಪ್ರೀಂ ಕೋರ್ಟ್ ರಚಿಸಿದ ಸಮಿತಿಯು ಮಾತುಕತೆಗಳನ್ನು ಕೈಗೆತ್ತಿಕೊಳ್ಳುತ್ತದೆಯೇ ಅಥವಾ ಪರಿಹಾರವನ್ನು ಕಂಡುಕೊಳ್ಳುತ್ತದೆಯೇ ಅಥವಾ ಸರ್ಕಾರವು ತನ್ನ ಪ್ರಯತ್ನಗಳನ್ನು ಮುಂದುವರಿಸುತ್ತದೆಯೇ ಎಂದು ಕೇಳಲಾಗಿ ರೈತ ಮುಖಂಡರೊಂದಿಗಿನ ಮಾತುಕತೆಗಾಗಿ ಸರ್ಕಾರವು ತನ್ನ ಬಾಗಿಲನ್ನು ತೆರೆದಿಟ್ಟಿದೆ ಮತ್ತು ಮುಂದಿನ ಸುಪ್ರೀಂ ಕೋರ್ಟ್‌ನ ಆದೇಶಕ್ಕಾಗಿ ಕಾಯುತ್ತದೆ  ಈ ಬಗ್ಗೆ ನ್ಯಾಯಾಲಯದ ಆದೇಶದ ನಂತರ, ನಾವು ಅಧ್ಯಯನ ಮಾಡುತ್ತೇವೆ ಮತ್ತು ತೀರ್ಮಾನದ ಬಗ್ಗೆ ಹೇಳುತ್ತೇವೆ. ನ್ಯಾಯಾಲಯದ ನಿರ್ದೇಶನಕ್ಕಾಗಿ ನಾವು ಕಾಯುತ್ತೇವೆ. 

"ರೈತರ ಬಗ್ಗೆ ಕಾಳಜಿ ವಹಿಸುವ ರೈತ ಸಂಘಗಳು ಕೃಷಿ ಸಮುದಾಯದ ಸಮಸ್ಯೆಗಳನ್ನು ಪರಿಹರಿಸಬೇಕು.ಇದರಿಂದ ಸರ್ಕಾರ ಪರಿಹಾರ ಕಂಡುಕೊಳ್ಳಬಹುದು ಎಂದು ಸಚಿವರು ಹೇಳಿದರು ಮತ್ತು ರೈತರ ಅನುಕೂಲಕ್ಕಾಗಿ ಜಾರಿಗೆ ತರಲಾಗಿರುವ ಈ ಶಾಸನಗಳನ್ನು ರದ್ದುಪಡಿಸುವ ಬಗ್ಗೆ ಒತ್ತು ನೀಡಬೇಡಿ ಎಂದು ಸಚಿವರು ಸಲಹೆ ಮಾಡಿದ್ದಾರೆ. ಇತರ ಗುಂಪುಗಳೊಂದಿಗೆ "ಸಮಾನಾಂತರ ಮಾತುಕತೆ" ನಡೆಸಬಾರದು ಮತ್ತು ಪ್ರತಿಭಟನಾ ನಿರತ ರೈತರನ್ನು "ಕೆಟ್ಟವರನ್ನಾಗಿ" ಮಾಡಬಾರದು ಎಂದು ರೈತ ಸಂಘಗಳು ಸರ್ಕಾರವನ್ನು ಕೇಳಿದಾಗ, "ರೈತರ ಕಲ್ಯಾಣದ ಬಗ್ಗೆ ಕಾಳಜಿ ವಹಿಸುವ ಕೃಷಿ ಮುಖಂಡರು ರೈತರ ಸಮಸ್ಯೆಗಳನ್ನು ಚರ್ಚಿಸಬೇಕು. ಆಕ್ಷೇಪಣೆಗಳ ಮೂಲಕ ಷರತ್ತುಗಳನ್ನು ಯಶಸ್ವಿಯಾಗಿ ಮನವರಿಕೆ ಮಾಡಿದರೆ ಸರ್ಕಾರವು ಕಾನೂನುಗಳಲ್ಲಿನ ಬದಲಾವಣೆಗಳನ್ನು ಪರಿಗಣಿಸಬಹುದು" ಎಂದು ಅವರು ಹೇಳಿದರು.

ರೈತರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರವಿದೆ ಆದರೆ ನಿರ್ದಿಷ್ಟ ಸಮಸ್ಯೆಗಳನ್ನು ಹೇಳದ ಹೊರತು ಸರ್ಕಾರವು ಪರಿಹಾರಗಳನ್ನು ಹೇಗೆ ಒದಗಿಸಲು ಸಾಧ್ಯ? ಸರ್ಕಾರವು ಕನಿಷ್ಟ ಬೆಂಬಲ ಬೆಲೆ ಭರವಸೆ ನೀಡಲು ಸಿದ್ದವಾಗಿದೆ. ಇಲ್ಲಿಯವರೆಗೆ ಎಂಎಸ್ಪಿ ಇದ್ದಂತೆಯೇ ಭವಿಷ್ಯದಲ್ಲಿಯೂ ಮುಂದುವರಿಯುತ್ತದೆ ಎಂದು ನಾವು ಲಿಖಿತವಾಗಿ ಭರವಸೆ ನೀಡುತ್ತೇವೆ.ಈ ಬಗ್ಗೆ ಯಾರಿಗೂ ಅನುಮಾನ ಇರಬಾರದು". ಎಂಎಸ್ಪಿ ವ್ಯವಸ್ಥೆಯು ಆಡಳಿತಾತ್ಮಕ ನಿರ್ಧಾರವಾಗಿದ್ದು, ಎಲ್ಲದಕ್ಕೂ ಕಾನೂನು ಇರಲು ಸಾಧ್ಯವಿಲ್ಲ ಎಂದರು.

"ಇಡೀ ದೇಶವನ್ನು ನಡೆಸಲು, ಕಾನೂನುಗಳಿವೆ, ಕಾನೂನುಗಳ ಅಡಿಯಲ್ಲಿ, ನಿಯಮಗಳಿವೆ. ಆಡಳಿತಾತ್ಮಕ ನಿರ್ಧಾರಗಳೂ ಇವೆ. ಸರ್ಕಾರದ ನಿರ್ಧಾರಗಳ ಬಗ್ಗೆ ಅನುಮಾನವಿರಬಹುದೇ? ಇಲ್ಲಿಯವರೆಗೆ, ಎಂಎಸ್ಪಿ ಕಾರ್ಯನಿರ್ವಹಿಸುತ್ತಿತ್ತು. ಇದು ಯಾವುದೇ ಕಾನೂನಿನಡಿಯಲ್ಲಿ ಇದೆಯೇ?" ಸಚಿವರು ಪ್ರಶಿಸಿದ್ದಾರೆ/ ಉದ್ದೇಶಗಳು ಸರಿಯಾಗಿದ್ದರೆ, ಪರಿಹಾರಗಳು ಖಂಡಿತವಾಗಿಯೂ ಸಿಕ್ಕುತ್ತದೆ., ಮೋದಿ ಸರ್ಕಾರವು ಮೂರು ಕೃಷಿ ಕಾನೂನುಗಳನ್ನು ಸ್ಪಷ್ಟ ಉದ್ದೇಶದಿಂದ ಜಾರಿಗೆ ತಂದಿದೆ ಮತ್ತು ಫಲಿತಾಂಶವೂ ಉತ್ತಮವಾಗಿರುತ್ತದೆ.

2020 ರ ಮೊದಲು ರೈತರ ಸಮಸ್ಯೆಯನ್ನು ಬಗೆಹರಿಸಲಾಗುತ್ತದೆಯೇ ಎಂದು ಕೇಳಿದಾಗ, "ಹೌದು, ನನಗೆ ಸಂಪೂರ್ಣ ಭರವಸೆ ಇದೆ ... ಪ್ರತಿಯೊಬ್ಬರಿಗೂ ಅವರದೇ ಆದ ಕಾರ್ಯಸೂಚಿ ಇದೆ. ನನ್ನ ಕಾರ್ಯಸೂಚಿ" ಕಿಸಾನ್ "ಆಗಿದೆ. ಕೃಷಿ ಕಾನೂನುಗಳಲ್ಲಿ ಯಾವ ಅವಕಾಶವಿದೆ ಎಂದು ತೀರಿಸಿ ಕೊಟ್ಟು ರೈತರಿಗೆ ಮನವರಿಕೆ ಮಾಡುವುದು. ಅಮ್ಮ ಉದ್ದೇಶ ಎಂದು ಸಚಿವರು ವಿವರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com