ಕುಟುಂಬಗಳನ್ನು ಹಾಳು ಮಾಡುವುದೇ ಕಮಲ್ ಹಾಸನ್ ಕೆಲಸ, ಅವರು ರಾಜಕೀಯಕ್ಕೆ ಲಾಯಕ್ಕಲ್ಲ: ಪಳನಿಸ್ವಾಮಿ

ಮಕ್ಕಳ್‌ ನೀದಿಮಯಂ (ಎಂಎನ್‌ಎಂ) ಪಕ್ಷದ ಸ್ಥಾಪಕ ಕಮಲ್ ಹಾಸನ್ ಅವರಿಗೆ ಕುಟುಂಬಗಳನ್ನು ಹಾಳು ಮಾಡುವುದೇ ಕೆಲಸ ಎಂದು ತಮಿಳುನಾಡು ಸಿಎಂ ಕೆ.ಪಳನಿಸ್ವಾಮಿ ಟೀಕಿಸಿದ್ದಾರೆ. 
ಪಳನಿಸ್ವಾಮಿ
ಪಳನಿಸ್ವಾಮಿ

ಏರಿಯೂರು: ಮಕ್ಕಳ್‌ ನೀದಿಮಯಂ (ಎಂಎನ್‌ಎಂ) ಪಕ್ಷದ ಸ್ಥಾಪಕ ಕಮಲ್ ಹಾಸನ್ ಅವರಿಗೆ ಕುಟುಂಬಗಳನ್ನು ಹಾಳು ಮಾಡುವುದೇ ಕೆಲಸ ಎಂದು ತಮಿಳುನಾಡು ಸಿಎಂ ಕೆ.ಪಳನಿಸ್ವಾಮಿ ಟೀಕಿಸಿದ್ದಾರೆ. 

‘ಬಿಗ್ ಬಾಸ್’ ರಿಯಾಲಿಟಿ ಶೋ ಉಲ್ಲೇಖಿಸಿ ಕಮಲ್ ಅವರನ್ನು ಪಳನಿಸ್ವಾಮಿ ಈ ರೀತಿ ಟೀಕಿಸಿದ್ದಾರೆ. ಮನೆಗಳನ್ನು ಹಾಳು ಮಾಡುವುದೇ ಅವರ ಕೆಲಸವಾಗಿದೆ, ರಾಜಕೀಯಕ್ಕೆ ಅವರು ಸೂಕ್ತವಲ್ಲ ಎಂದು ಪಳನಿಸ್ವಾಮಿ ಲೇವಡಿ ಮಾಡಿದ್ದಾರೆ.

ಕಮಲ್ ಹಾಸನ್ ಮಾಜಿ ಮುಖ್ಯಮಂತ್ರಿ ದಿ. ಎಂ.ಜಿ. ರಾಮಚಂದ್ರನ್ ಅವರ ಪರಂಪರೆಯ ಬಗ್ಗೆ ಪ್ರಸ್ತಾಪಿಸಿದ ಹಾಗೂ ಸರ್ಕಾರವನ್ನು ಟೀಕಿಸಿದ ಬೆನ್ನಲ್ಲೇ ಪಳನಿಸ್ವಾಮಿ ಅವರು ಈ ರೀತಿ  ಪ್ರತಿಕ್ರಿಯಿಸಿದ್ದಾರೆ.

ರಾಮಚಂದ್ರನ್ ಅವರಿಂದ ಸ್ಥಾಪಿತವಾಗಿರುವ ಎಐಎಡಿಎಂಕೆ ಮಾತ್ರವೇ ಅವರ ಪರಂಪರೆಗೆ ಹಕ್ಕುದಾರ ಎಂದು ಪ್ರತಿಪಾದಿಸಿರುವ ಪಳನಿಸ್ವಾಮಿ, ಹಾಸನ್ ಅವರು ಬೇರೊಬ್ಬರ ಮಗುವಿಗೆ ನಾಮಕರಣ ಮಾಡಬಹುದೇ ಎಂದು ಪ್ರಶ್ನಿಸಿದ್ದಾರೆ.

ಕಮಲ್ ಹಾಸನ್ ಗೆ ಯಾವುದೇ ವಯಕ್ತಿಕ ಪ್ರಭವಾವಿಲ್ಲ, ಮತಗಳನ್ನು ಪಡೆಲು ವಿವಿಧ ರಾಜಕೀಯ ಪಕ್ಷಗಳು ಎಂಜಿಆರ್ ಪರಂಪರೆಯ ಬಗ್ಗೆ ಮಾತನಾಡುತ್ತಾರೆ, ಕಮಲ್ ಕೂಡ ಅದೇ ದಾರಿಯಲ್ಲಿ ನಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ,

ಮುಖ್ಯಮಂತ್ರಿಗಳ ಹೇಳಿಕೆಗೆ ಕಮಲ್ ಹಾಸನ್ ಅವರೂ ತಿರುಗೇಟು ನೀಡಿದ್ದಾರೆ. ಮುಖ್ಯಮಂತ್ರಿಯವರೂ ಬಿಗ್ ಬಾಸ್ ರಿಯಾಲಿಟಿ ಶೋ ನೋಡಿದ್ದಾರೆಂದರೆ ಬಹಳ ಸಂತೋಷ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com