ಸುಳ್ಳು ಪ್ರಚಾರದ ಮೂಲಕ ಮೋದಿ ಸರ್ಕಾರ ವಾಸ್ತವ ಮುಚ್ಚಿಡುತ್ತಿದೆ: ಕಾಂಗ್ರೆಸ್
ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಪ್ರತಿಭಟನಾನಿರತ ರೈತರಿಗೆ ಸುಳ್ಳು ಪ್ರಚಾರ ಮತ್ತು ತಪ್ಪು ಮಾಹಿತಿಯ ಮೂಲಕ ವಂಚಿಸುತ್ತಿದೆ ಎಂದು ಕಾಂಗ್ರೆಸ್ ಶುಕ್ರವಾರ ಆರೋಪಿಸಿದೆ.
Published: 18th December 2020 11:13 PM | Last Updated: 18th December 2020 11:13 PM | A+A A-

ರಣದೀಪ್ ಸುರ್ಜೇವಾಲ
ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಪ್ರತಿಭಟನಾನಿರತ ರೈತರಿಗೆ ಸುಳ್ಳು ಪ್ರಚಾರ ಮತ್ತು ತಪ್ಪು ಮಾಹಿತಿಯ ಮೂಲಕ ವಂಚಿಸುತ್ತಿದೆ ಎಂದು ಕಾಂಗ್ರೆಸ್ ಶುಕ್ರವಾರ ಆರೋಪಿಸಿದೆ.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ, ರೈತರಿಂದ ವಾಸ್ತವ ಪರಿಸ್ಥಿತಿಯನ್ನು ಮರೆಮಾಚುವ ಮೂಲಕ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪ್ರತಿಭಟನಾ ನಿರತರನ್ನು ದಾರಿ ತಪ್ಪಿಸಲು ಯತ್ನಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಇಂದು ಮೋದಿ ಮಧ್ಯಪ್ರದೇಶದ ರೈತರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಆದರೆ, ಅವರು ವಾಸ್ತವ ಸಂಗತಿಯನ್ನು ಮುಚ್ಚಿಟ್ಟಿದ್ದಾರೆ. ಸರ್ಕಾರ ಆರಂಭದಿಂದಲೂ ರೈತರನ್ನು ಕಡೆಗಣಿಸುತ್ತಿದೆ ಎಂಬ ವಿಷಯವನ್ನು ಬಹಿರಂಗಪಡಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮೋದಿ ಸರ್ಕಾರ ರೈತರಿಗೆ "ಮೋಸ ಮಾಡುವುದು ಮತ್ತು ದ್ರೋಹ ಮಾಡುವುದನ್ನು" ಮೊದಲು ನಿಲ್ಲಿಸಬೇಕು ಮತ್ತು ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುವವರನ್ನು "ರಾಷ್ಟ್ರ ವಿರೋಧಿ" ಎಂದು ಕರೆಯುವ ಮೂಲಕ ಅವಮಾನಿಸಿದ್ದಕ್ಕಾಗಿ ಕ್ಷಮೆಯಾಚಿಸಬೇಕು ಎಂದು ಸುರ್ಜೇವಾಲಾ ಒತ್ತಾಯಿಸಿದ್ದಾರೆ.