ನಾಲ್ಕು ಯುದ್ಧಗಳಲ್ಲಿ ಸೋತರೂ ಪಾಕಿಸ್ತಾನ ಭಾರತದ ವಿರುದ್ಧ ತೆರೆಮರೆಯ ಸಮರ ಮಾಡುತ್ತಲೇ ಬಂದಿದೆ: ರಾಜನಾಥ್ ಸಿಂಗ್ 

ಭಾರತದ ವಿರುದ್ಧ ರಹಸ್ಯವಾಗಿ ತೆರೆಮರೆಯಲ್ಲಿ ಯುದ್ಧ ಸಾರಲು ಭಯೋತ್ಪಾದನೆ ಮಾರ್ಗವನ್ನು ನೆರೆಯ ದೇಶಗಳು ಅನುಸರಿಸುತ್ತಿವೆ ಎಂದು ಮತ್ತೊಮ್ಮೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಕಿಸ್ತಾನ ಮತ್ತು ಚೀನಾ ದೇಶಗಳ ಮೇಲೆ ಮತ್ತೊಮ್ಮೆ ಹರಿಹಾಯ್ದಿದ್ದಾರೆ. 
ಪರೇಡ್ ನಲ್ಲಿ ಭಾಗವಹಿಸಿದ ನಂತರ ಭಾಷಣ ಮಾಡಿದ ರಾಜನಾಥ್  ಸಿಂಗ್
ಪರೇಡ್ ನಲ್ಲಿ ಭಾಗವಹಿಸಿದ ನಂತರ ಭಾಷಣ ಮಾಡಿದ ರಾಜನಾಥ್ ಸಿಂಗ್

ಹೈದರಾಬಾದ್: ಭಾರತದ ವಿರುದ್ಧ ರಹಸ್ಯವಾಗಿ ತೆರೆಮರೆಯಲ್ಲಿ ಯುದ್ಧ ಸಾರಲು ಭಯೋತ್ಪಾದನೆ ಮಾರ್ಗವನ್ನು ನೆರೆಯ ದೇಶಗಳು ಅನುಸರಿಸುತ್ತಿವೆ ಎಂದು ಮತ್ತೊಮ್ಮೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಕಿಸ್ತಾನ ಮತ್ತು ಚೀನಾ ದೇಶಗಳ ಮೇಲೆ ಮತ್ತೊಮ್ಮೆ ಹರಿಹಾಯ್ದಿದ್ದಾರೆ. 

ಹೈದರಾಬಾದ್ ನ ದುಂಡಿಗಲ್ ನಲ್ಲಿ ಭಾರತೀಯ ವಾಯುಪಡೆ ಅಕಾಡೆಮಿಯ ಸಂಯೋಜಿತ ಪದವಿ ಪರೇಡ್ ನಲ್ಲಿ ಭಾಗವಹಿಸಿದ ನಂತರ ಮಾತನಾಡಿದ ಅವರು, ಪಶ್ಚಿಮ ವಲಯದಲ್ಲಿ ನಮ್ಮ ನೆರೆಯ ದೇಶವಾದ ಪಾಕಿಸ್ತಾನ ಗಡಿಭಾಗದಲ್ಲಿ ದುಷ್ಕೃತ್ಯಗಳನ್ನು ನಡೆಸುತ್ತಲೇ ಬರುತ್ತಿದೆ. ನಾಲ್ಕು ಯುದ್ಧಗಳನ್ನು ಸೋತ ನಂತರವೂ ಭಯೋತ್ಪಾದನೆ ಮೂಲಕ ತೆರೆಮರೆಯ ಯುದ್ಧಗಳನ್ನು ಮಾಡುತ್ತಿದೆ. ನೆರೆ ದೇಶಗಳ ಯತ್ನವನ್ನು ವಿಫಲಗೊಳಿಸುತ್ತಿರುವ ನಮ್ಮ ಭದ್ರತಾ ಪಡೆಗಳನ್ನು ಅಭಿನಂದಿಸಲು ನನಗೆ ಇಂದು ಸಂತೋಷವಾಗುತ್ತಿದೆ ಎಂದರು.

ಭಾರತೀಯ ವಾಯುಪಡೆಗೆ ಭವ್ಯ ಇತಿಹಾಸವಿದೆ. ಇದು ಯಾವಾಗಲೂ ಶೌರ್ಯವನ್ನು ಪ್ರದರ್ಶಿಸುತ್ತದೆ. 1971ರಲ್ಲಿ ನಡೆದ ಲಾಂಗ್‌ವಾಲಾ ಕದನದಿಂದ ಇತ್ತೀಚಿನ ಬಾಲಕೋಟ್ ವೈಮಾನಿಕ ದಾಳಿಯವರೆಗೆ, ಈ ಎಲ್ಲಾ ದಾಳಿಗಳನ್ನು ನಮ್ಮ ದೇಶದ ಇತಿಹಾಸದಲ್ಲಿ ಸುವರ್ಣ ಅಧ್ಯಾಯಗಳಾಗಿ ಪರಿಗಣಿಸಲಾಗುತ್ತದೆ ಎಂದರು.

ಚೀನಾದ ವಿರುದ್ಧ ಕೂಡ ಹರಿಹಾಯ್ದ ರಾಜನಾಥ್ ಸಿಂಗ್, ಲಡಾಕ್ ಗಡಿಭಾಗದಲ್ಲಿ ಸೇನೆ ನಿಲುಗಡೆ ಬಗ್ಗೆ ಪ್ರಸ್ತಾಪಿಸಿ, ಕೊರೋನಾ ಸಾಂಕ್ರಾಮಿಕದಿಂದ ಜಗತ್ತು ತತ್ತರಿಸಿ ಹೋದ ಸಮಯದಲ್ಲಿ ಕೂಡ ಕದನ ಮುಂದುವರಿಸಲು ಚೀನಾದ ಪ್ರಯತ್ನ ಅದರ ಮನೋಧರ್ಮವನ್ನು ತೋರಿಸುತ್ತದೆ. ನಮ್ಮಿಂದ ಏನು ಮಾಡಲು ಸಾಧ್ಯವಿದೆ ಎಂಬುದನ್ನು ಈಗಾಗಲೇ ಚೀನಾಕ್ಕೆ ತೋರಿಸಿಕೊಟ್ಟಿದ್ದೇವೆ ಎಂದರು.

ಗಡಿ ಸಮಸ್ಯೆಗಳ ಪರಿಹಾರಕ್ಕೆ ಶಾಂತಿಯುತ ಮಾರ್ಗಗಳ ಮೂಲಕ, ಮಾತುಕತೆ ಮೂಲಕ ನಮಗೆ ಪರಿಹಾರ ಸಿಗಬೇಕಿದೆ. ನಮಗೆ ಯುದ್ಧ ಬೇಡ, ಶಾಂತಿ ಬೇಕು. ಹಾಗೆಂದು ಭಾರತದ ಸಾರ್ವಭೌಮತ್ತೆಯ ವಿಚಾರದಲ್ಲಿ ನಾವು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಯಾವ ಪರಿಸ್ಥಿತಿಯನ್ನು ಕೂಡ ನಿಭಾಯಿಸಲು ನಾವು ಚೆನ್ನಾಗಿ ಸಿದ್ಧರಿದ್ದೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com